ಬೆಂಗಳೂರು: ಇಂದಿನಿಂದ ಎಸ್‍ಎಸ್‍ಎಲ್‍ಸಿ (SSLC) ಪರೀಕ್ಷೆ ಪ್ರಾರಂಭವಾಗುತ್ತಿದೆ. ಶಿಕ್ಷಣ ಇಲಾಖೆ ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಂಡಿದೆ. ಎರಡು ವರ್ಷ ಕೊರೊನಾ ರೌದ್ರತೆಯ ಬಳಿಕ ಪೂರ್ಣ ಪ್ರಮಾಣದಲ್ಲಿ ಹಳೆಯ ಮಾದರಿಯಲ್ಲಿ ಈ ವರ್ಷ ಪರೀಕ್ಷೆ ನಡೆಯುತ್ತಿದೆ.
ಇಂದಿನಿಂದ ಏಪ್ರಿಲ್ 11 ರ ವರೆಗೆ ಪರೀಕ್ಷೆ ನಡೆಯಲಿದೆ. ಕೊರೊನಾ ಕಾರಣಕ್ಕೆ ಕಳೆದ ವರ್ಷ ಎರಡು ದಿನ ಮಾತ್ರ ಪರೀಕ್ಷೆ ನಡೆದಿತ್ತು. 3 ವಿಷಯಗಳು ಸೇರಿ ಒಂದು ಪ್ರಶ್ನೆ ಪತ್ರಿಕೆಯಂತೆ ಎರಡು ಪ್ರಶ್ನೆ ಪತ್ರಿಕೆಯಲ್ಲಿ ನಡೆದಿತ್ತು. ಆದರೆ ಈ ವರ್ಷ ಕೊರೊನಾ ನಿಯಂತ್ರಣ ಹಿನ್ನೆಲೆಯಲ್ಲಿ 625 ಅಂಕಗಳಿಗೆ ಪರೀಕ್ಷೆ ನಡೆಯಲಿದೆ.
Advertisement
Advertisement
ಎಸ್‍ಎಸ್‍ಎಲ್‍ಸಿ ಪರೀಕ್ಷೆಗೆ ಸರ್ಕಾರ ಸಮವಸ್ತ್ರ ನಿಯಮ ಕಡ್ಡಾಯ ಮಾಡಿದೆ. ಎಕ್ಸಾಂಗೆ ಹಿಜಬ್ ನಿಷೇಧ ಮಾಡಿದೆ. ಹೈಕೋರ್ಟ್ ಆದೇಶದ ಮೇಲೆ ಹಿಜಬ್ ಸೇರಿದಂತೆ ಯಾವುದೇ ಧಾರ್ಮಿಕ ಭಾವನೆ ವಸ್ತ್ರಗಳಿಗೆ ಅವಕಾಶ ಇಲ್ಲ. ಸರ್ಕಾರಿ ಶಾಲಾ ಮಕ್ಕಳು ಸರ್ಕಾರ ನಿಗದಿ ಮಾಡಿದ ಸಮವಸ್ತ್ರ ಧರಿಸೋದು ಕಡ್ಡಾಯ ಮಾಡಿದೆ.
Advertisement
Advertisement
ಖಾಸಗಿ ಶಾಲೆಗಳ ವಿದ್ಯಾರ್ಥಿಗಳು ಆಯಾ ಶಾಲಾ ಆಡಳಿತ ಮಂಡಳಿ ನಿಗದಿ ಪಡಿಸಿದ ಸಮವಸ್ತ್ರ ಧರಿಸಿಕೊಂಡು ಬರೋದು ಕಡ್ಡಾಯವಾಗಿದೆ. ಹಿಜಬ್ ಧರಿಸಿ ಬಂದ್ರೆ ಎಕ್ಸಾಂ ಬರೆಯಲು ಅವಕಾಶ ಇಲ್ಲ. ಇದೇ ಕಾರಣಕ್ಕೆ ಎಕ್ಸಾಂ ಗೈರಾದ್ರೆ ವಿಶೇಷ ಪರೀಕ್ಷೆಗೆ ಅವಕಾಶ ಇಲ್ಲ. ಮತ್ತೆ ಪೂರಕ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಬೇಕಾಗಿದೆ. ಇದನ್ನೂ ಓದಿ: ಕೆಜಿಎಫ್-2 ಟ್ರೈಲರ್ ರಿಲೀಸ್ ಮಾಡಿದ ಶಿವಣ್ಣ- ರಾಕಿಬಾಯ್ ಅಬ್ಬರ ಶುರು
ಪಬ್ಲಿಕ್ ಟಿವಿ ಕಡೆಯಿಂದ ಕೆಲವೊಂದು ಟಿಪ್ಸ್:
ಕೊರೊನಾ ಅನ್ನೋ ಮಾನಸಿಕ ಆತಂಕ ಮತ್ತು ಪರೀಕ್ಷೆ ಭಯವನ್ನ ಬಿಟ್ಟು ಅರಾಮವಾಗಿ ಪರೀಕ್ಷೆ ಬರೆಯಿರಿ. ಪೋಷಕರು ತಮ್ಮ ಮಕ್ಕಳಿಗೆ ಮಾನಸಿಕ ಸ್ಥೈರ್ಯ ತುಂಬಿ ಪರೀಕ್ಷೆಗೆ ಕಳುಹಿಸಿ. ಕೊರೊನಾ ನಿಯಮ ವಿದ್ಯಾರ್ಥಿಗಳು ಪಾಲನೆ ಮಾಡಿ. ಸಾಧ್ಯವಾದಷ್ಟು ಬೇಗ ಪರೀಕ್ಷಾ ಕೇಂದ್ರಕ್ಕೆ ಆಗಮಿಸಿ. ನಿಮ್ಮ ಕೇಂದ್ರ ಮತ್ತು ಕೊಠಿಯನ್ನ ಸ್ಪಷ್ಟಪಡಿಸಿಕೊಳ್ಳಿ. ಸಾಧ್ಯವಾದಷ್ಟು ವಿದ್ಯಾರ್ಥಿಗಳು ತಮ್ಮ ಮನೆಗಳಿಂದಲೇ ನೀರು ತೆಗೆದುಕೊಂಡು ಬನ್ನಿ. ಸಾಧ್ಯವಾದಷ್ಟು ಬಿಸಿ ನೀರು ಬಳಕೆ ಮಾಡಿದ್ರೆ ಉತ್ತಮ. ಪರೀಕ್ಷಾ ಹಿಂದಿನ ದಿನ ಮಿತವಾದ ಊಟ ಮಾಡಿ. ಕಣ್ಣು ತುಂಬಾ ನಿದ್ರೆ ಮಾಡಿ. ಸ್ಪೈಸಿ ಪದಾರ್ಥಗಳನ್ನ ಎಕ್ಸಾಂ ಮುಗಿಯೋವರೆಗೂ ತಿನ್ನೊದನ್ನ ಕಡಿಮೆ ಮಾಡಿಕೊಳ್ಳಿ.
ಪರೀಕ್ಷಾ ಹಿಂದಿನ ದಿನೇ ಪ್ರವೇಶ ಪತ್ರ ಸೇರಿದಂತೆ ಎಲ್ಲಾ ಪರೀಕ್ಷಾ ಸಾಮಗ್ರಿಗಳನ್ನು ಸಿದ್ದ ಮಾಡಿಕೊಳ್ಳಿ. ಪರೀಕ್ಷಾ ಕೇಂದ್ರಕ್ಕೆ ಬರೋವಾಗ ಸಾರಿಗೆ ವ್ಯವಸ್ಥೆ ಬಗ್ಗೆ ಜಾಗೃತರಾಗಿರಿ. ಸಾಧ್ಯವಾದಷ್ಟು ತಮ್ಮ ತಮ್ಮ ಖಾಸಗಿ ಸಾರಿಗೆ ಉಪಯೋಗಿಸಿ. ಸಾಮೂಹಿಕ ಸಾರಿಗೆ ಉಪಯೋಗ ಮಾಡೋರು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮರೆಯಬೇಡಿ.ಪರೀಕ್ಷೆ ಬರೆಯದ ಪರಿಸ್ಥಿತಿ ಇದ್ದರೆ ಚಿಂತೆ ಬೇಡ. ಪೂರಕ ಪರೀಕ್ಷೆಯಲ್ಲಿ ನಿಮಗೆ ಅವಕಾಶ ಸಿಗುತ್ತೆ. ಪರೀಕ್ಷೆ ಆತಂಕದಿಂದ ವಿದ್ಯಾರ್ಥಿಗಳು ಕೆಟ್ಟ ನಿರ್ಧಾರಗಳನ್ನು ಮಾಡೋದು ಬೇಡ. ಈ ಪರೀಕ್ಷೆ ಬರೆಯದೇ ಹೋದ್ರು ಚಿಂತೆ ಇಲ್ಲ. ಇನ್ನೊಂದು ಪರೀಕ್ಷೆ ಬರೆಯಬಹುದು.
ಎಕ್ಸಾಂ ವೇಳಾಪಟ್ಟಿ ಇಂತಿದೆ:
>. ಮಾರ್ಚ್ 28-ಪ್ರಥಮ ಭಾಷೆ.
>. ಮಾರ್ಚ್ 30- ದ್ವೀತಿಯ ಭಾಷೆ.
>. ಏಪ್ರಿಲ್ 1- ಕೋರ್ ಸಬ್ಜೆಕ್ಟ್
>. ಏಪ್ರಿಲ್ 4- ಗಣಿತ
>. ಏಪ್ರಿಲ್ 6- ಸಮಾಜ ವಿಜ್ಞಾನ.
>. ಏಪ್ರಿಲ್ 8- ತೃತೀಯ ಭಾಷೆ.
>. ಏಪ್ರಿಲ್ 11- ವಿಜ್ಞಾನ