ಎಸ್‌ಎಸ್‌ಎಲ್‌ಸಿ-ಪಿಯು ಮಂಡಳಿ ವಿಲೀನಕ್ಕೆ ನಿರ್ಧಾರ – ಸಂಪುಟ ಸಭೆಯಲ್ಲಿ ಅನುಮೋದನೆ

Public TV
1 Min Read
puc board

ಬೆಂಗಳೂರು: ಎಸ್‌ಎಸ್‌ಎಲ್‌ಸಿ ಮತ್ತು ಪಿಯು ಮಂಡಳಿ (SSLC-PU Board) ವಿಲೀನಕ್ಕೆ ಸರ್ಕಾರ ನಿರ್ಧಾರ ಕೈಗೊಂಡಿದ್ದು, ವಿದೇಯಕ ಮಂಡನೆಗೆ ಸೋಮವಾರ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಿದೆ.

ಎರಡೂ ಮಂಡಳಿಗಳನ್ನು ಒಂದೇ ಮಂಡಳಿ ಮಾಡಲು ಸರ್ಕಾರ ನಿರ್ಧರಿಸಿದೆ. ಇಂದು ಅಥವಾ ನಾಳೆ ಸದನದಲ್ಲಿ ವಿಧೇಯಕ ಮಂಡಿಸಿ ಅನುಮೋದನೆ ಪಡೆಯುವ ಸಾಧ್ಯತೆ ಇದೆ. ಇದನ್ನೂ ಓದಿ: IAS ಅಧಿಕಾರಿ ಅನುರಾಗ್ ತಿವಾರಿ ಸಾವು ಕೇಸ್ – ಸಹಜ ಸಾವು ಎಂದ ಸಿಬಿಐ ವರದಿ ತಿರಸ್ಕೃತ

Vidhana Soudha

ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿ ಕಾಯ್ದೆ 1966 ತಿದ್ದುಪಡಿ ಮಸೂದೆಗೆ ಸಂಪುಟ ಸಭೆಯಲ್ಲಿ ಒಪ್ಪಿಗೆ ಸಿಕ್ಕಿದ್ದು, ಎನ್‌ಇಪಿ 2020 ಅನ್ವಯ ಬೋರ್ಡ್ ವಿಲೀನಕ್ಕೆ ಸರ್ಕಾರ ನಿರ್ಧಾರ ಮಾಡಿದೆ. ವಿಧಾನ ಮಂಡಲದಲ್ಲಿ ಹೊಸ ಕಾಯ್ದೆಗೆ ಒಪ್ಪಿಗೆ ಸಿಕ್ಕ ಮೇಲೆ ಎರಡೂ ಬೋರ್ಡ್ ವಿಲೀನ ಆಗಲಿದೆ. ಬಳಿಕ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಎಂದು ಮರು ನಾಮಕರಣ ಮಾಡಲಾಗುವುದು.

ಹೊಸ ಬೋರ್ಡ್ ಅಡಿಯಲ್ಲಿ ಎರಡೂ ಬೋರ್ಡ್ ವಿಲೀನವಾಗಿ ಕೆಲಸ ನಿರ್ವಹಣೆ ಮಾಡಲಿವೆ. ನೂತನ ಬೋರ್ಡ್‌ಗೆ ಐಎಎಸ್ ಅಧಿಕಾರಿ ಅಧ್ಯಕ್ಷರು ಓಆರ್ ಕಮಿಷನ್ ಹೆಸರಿನಲ್ಲಿ ಕೆಲಸ ನಿರ್ವಹಿಸಲಿದ್ದಾರೆ. ಐಎಎಸ್ ಅಧಿಕಾರಿ ಕೆಳಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ, ಇತರೆ ಪರೀಕ್ಷೆಗಳು ನಡೆಯಲಿವೆ. ಇದನ್ನೂ ಓದಿ: ರಾಜ್ಯಪ್ರಶಸ್ತಿ ಪುರಸ್ಕೃತ, ಪರಿಸರ ಪ್ರೇಮಿ ಎಂದೇ ಫೇಮಸ್ ಆಗಿದ್ದ ಸಾಲುಮರದ ವೀರಾಚಾರಿ ಆತ್ಮಹತ್ಯೆಗೆ ಶರಣು

ಪಿಯುಸಿ ಪರೀಕ್ಷೆಗೆ ಪ್ರತ್ಯೇಕ ನಿರ್ದೇಶಕರು, ಉಪಾಧ್ಯಕ್ಷರು, ಕಾರ್ಯದರ್ಶಿಗಳು ಇರಲಿದ್ದಾರೆ. ಪ್ರಶ್ನೆಪತ್ರಿಕೆ ಸಿದ್ಧತೆ, ವಿತರಣೆ, ರಹಸ್ಯ ಕಾಪಾಡುವ ವಿಶೇಷ ಅಧಿಕಾರ ಆಯಾ ಪರೀಕ್ಷೆಗಳ ನಿರ್ದೇಶಕರಿಗೆ ಇರಲಿದೆ. ನೂತನ ಬೋರ್ಡ್ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ನೀಡುವುದು, ಪರೀಕ್ಷೆ ಜೊತೆ ಶಾಲಾ-ಕಾಲೇಜುಗಳ ಶೈಕ್ಷಣಿಕ ಗುಣಮಟ್ಟ ಪರಿಶೀಲನೆ, ಶಾಲಾ-ಕಾಲೇಜುಗಳಿಗೆ ಗುಣಮಟ್ಟದ ಪರಿಶೀಲನೆ ಮಾಡಿ ಗ್ರೇಡ್ ನೀಡುವುದು, ವಿವಿ, ಪದವಿ ಕಾಲೇಜುಗಳಿಗೆ “ನ್ಯಾಕ್” ಸಂಸ್ಥೆ ನೀಡುವ ಮಾದರಿ ಗ್ರೇಡ್ ನೀಡಲಾಗುವುದು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *