ಬೆಂಗಳೂರು: ಕೊರೊನಾ ಸೋಂಕಿನ ಭೀತಿಯ ನಡುವೆಯೂ ಎಸ್ಎಸ್ಎಲ್ಸಿ ಪರೀಕ್ಷೆ ಯಶಸ್ವಿಯಾಗಿ ಇಂದು ಮುಕ್ತಾಯವಾಗಿದೆ. ಈ ನಡುವೆ ಜುಲೈ 19ರಂದು ನಡೆದ ಮೊದಲ ದಿನದ ಎಸ್ಎಸ್ಎಲ್ಸಿ ಪರೀಕ್ಷೆಯ ವಿವಿಧ ವಿಷಯಗಳ ಕೀ ಉತ್ತರವನ್ನು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರಕಟಿಸಿದೆ.
Advertisement
ಈ ಕುರಿತು ಮಾಹಿತಿ ನೀಡಿರುವ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ, ಜುಲೈ 19ರಂದು ನಡೆದ ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯ ಮೊದಲ ಪತ್ರಿಕೆಯ ಗಣಿತ, ವಿಜ್ಞಾನ ಮತ್ತು ಸಮಾಜ ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದಂತೆ ಮಾದರಿ ಉತ್ತರವನ್ನು https://sslc.karnataka.gov.in/ ಜಾಲತಾಣದಲ್ಲಿ ಪ್ರಕಟಿಸಲಾಗಿದೆ ಎಂದು ತಿಳಿಸಿದೆ.
Advertisement
ಡೌನ್ಲೋಡ್ ಮಾಡೋದು ಹೇಗೆ?
ಎಸ್ಎಸ್ಎಲ್ಸಿ ಪರೀಕ್ಷೆ ಬರೆದಿರುವ ವಿದ್ಯಾರ್ಥಿಗಳು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ https://sslc.karnataka.gov.in/ ವೆಬ್ ಸೈಟ್ಗೆ ಭೇಟಿ ನೀಡಬೇಕು. ಈ ವೆಬ್ ಸೈಟ್ ನಲ್ಲಿ ದಾಖಲೆಗಳು ಎಂಬ ಕೆಟಗರಿ ಮೇಲೆ ಕ್ಲಿಕ್ ಮಾಡಿದರೆ, ಎಸ್ಎಸ್ಎಲ್ಸಿ ಎಂಬ ಟ್ಯಾಬ್ ಕಾಣಲಿದೆ. ಅಲ್ಲಿ ಪ್ರಶ್ನೆ ಪತ್ರಿಕೆಗಳ ಮೇಲೆ ಮತ್ತೊಂದು ಪುಟ ತೆರದುಕೊಳ್ಳಲಿದೆ. ಆ ಪುಟದಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆ ಮಾದರಿ ಉತ್ತರ ಜುಲೈ-2021 ದಲ್ಲಿ ವಿಷಯವಾರು ಮಾದರಿ ಉತ್ತರಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.
Advertisement
Advertisement
ಈ ಬಗ್ಗೆ ಗೊಂದಲ ಉಂಟಾದಲ್ಲಿ ವಿದ್ಯಾರ್ಥಿಗಳು ನೇರವಾಗಿ ಪತ್ರಿಕೆ-1ರ ಗಣಿತ, ವಿಜ್ಞಾನ, ಸಮಾಜ ವಿಜ್ಞಾನ ವಿಷಯಗಳಿಗೆ ಸಂಬಂಧಿಸಿದಂತೆ ಮಾದರಿ ಉತ್ತರಗಳನ್ನು ಈ ಲಿಂಕ್ ಮೂಲಕ ನೇರವಾಗಿ ಡೌನ್ಲೋಡ್ ಮಾಡಿಕೊಳ್ಳಬಹುದು.