ಹೈದರಾಬಾದ್: ಖ್ಯಾತ ನಿರ್ದೇಶಕ ರಾಜಮೌಳಿ ನಿರ್ದೇಶನದ ಆರ್‍ಆರ್‍ಆರ್ ಸಿನಿಮಾವು ಬಿಡುಗಡೆಗೊಂಡು ಇವತ್ತಿಗೆ 11 ದಿನಗಳು ಕಳೆದಿವೆ. ಆದರೂ ಈ ಚಿತ್ರದ ಹವಾ ನಿಂತಿಲ್ಲ. ಕಾರಣ ಚಿತ್ರದಲ್ಲಿರುವ ಇಬ್ಬರು ಸೂಪರಸ್ಟಾರ್‌ಗಳಾದ ರಾಮ್‍ಚರಣ್ ಮತ್ತು ಜ್ಯೂನಿಯರ್ ಎನ್‍ಟಿಆರ್ ಅವರ ಅದ್ಭುತವಾದ ನಟನೆ ಅಭಿಮಾನಿಗಳಲ್ಲಿ ಹುಚ್ಚೆಬ್ಬಿಸಿದೆ. ಚಿತ್ರದಲ್ಲಿ ಬಳಸಿರುವ ಅಡ್ವಾನ್ಸ್ ಲೆವೆಲ್ ವಿಎಫ್‍ಎಕ್ಸ್ ಎಡಿಟಿಂಗ್ಸ್‌ಗಳನ್ನು ನೋಡಿದರೆ ಎಂತಹವರಿಗೂ ಒಂದು ಕ್ಷಣ ಮೈ ಜುಮ್ಮೆನ್ನಿಸುತ್ತದೆ.
#RRRMovie WW Box Office
Reaches a new milestone of MAMMOTH ₹900 cr.
Week 1 – ₹ 709.36 cr
Week 2
Day 1 – ₹ 41.53 cr
Day 2 – ₹ 68.17 cr
Day 3 – ₹ 82.40 cr
Total – ₹ 901.46 cr
Share alone crossed historical ₹500 cr mark in just 10 days.
— Manobala Vijayabalan (@ManobalaV) April 4, 2022
Advertisement
ಚಿತ್ರವು ಜಾಗತಿಕ ಮಟ್ಟದಲ್ಲಿ ಈಗಾಗಲೇ ಕೋಟಿ ಹೃದಯಗಳನ್ನು ಗೆದ್ದಿದೆ. ಚಿತ್ರವು ರೀಲಿಸ್ ಆದ ಮೊದಲನೇ ದಿನದಿಂದ ಹಿಡಿದು ಇಲ್ಲಿಯವರೆಗೆ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡುತ್ತಲೇ ಬರುತ್ತಿದೆ. ಆದರೆ ಇದೆಲ್ಲದರ ನಡುವೇ ಚಿತ್ರಕ್ಕೆ ಕೊಂಚ ಹೊಡೆತ ಬಿದ್ದಿದ್ದೆಂದರೆ ಅದು ಕಾಶ್ಮೀರ್ ಫೈಲ್ಸ್ ಚಿತ್ರದಿಂದ ಅಂತಾನೇ ಹೇಳಬಹುದು. ಆದಾಗ್ಯೂ ಚಿತ್ರವು ಇವತ್ತಿಗೆ ಬರೋಬ್ಬರಿ 900 ಕೋಟಿ ರೂ. ಗಳನ್ನು ಬಾಚಿ ಯಶಸ್ವಿ 11ನೇ ದಿನದತ್ತ ಮುನ್ನುಗ್ಗುತ್ತಿದೆ. ಇದನ್ನೂ ಓದಿ: ಎಸ್‍ಎಸ್‍ಎಲ್‍ಸಿ ಪರೀಕ್ಷೆ – 1 ಗಂಟೆಯಲ್ಲೇ ಪ್ರಶ್ನೆ ಪತ್ರಿಕೆ ವೈರಲ್
Advertisement
Advertisement
ಈ ಕುರಿತು ವ್ಯಾಪಾರ ವಿಶ್ಲೇಷಕ ಮನೋಬಾಲಾ ವಿಜಯನ್ ಸಾಮಾಜಿಕ ಜಾಲತಾಣದ ಮೂಲಕ ಆರ್‍ಆರ್‍ಆರ್ ಚಿತ್ರವು 11 ದಿನದಲ್ಲಿ ಒಟ್ಟು 900 ಕೋಟಿ ರೂ. ಗಳಿಸಿದೆ ಎಂದು ತಿಳಿಸಿದ್ದಾರೆ. ಈ ಮೂಲಕ ಸಲ್ಮಾನ್ ಖಾನ್ ಅಭಿನಯದ ಭಜರಂಗಿ ಭಾಯಿಜಾನ್ ಚಿತ್ರದ ಕಲೆಕ್ಷನ್ ಅನ್ನು ಉಡೀಸ್ ಮಾಡಿದೆ. ಆರ್‍ಆರ್‍ಆರ್ ಚಿತ್ರವು ಈಗಾಗಲೇ ದಾಖಲೆಯ 500 ಕೋಟಿ ರೂ. ದಾಟಿದ ಮೊದಲ ಚಿತ್ರವೆಂಬ ಹೆಗ್ಗಳಿಕೆ ಪಾತ್ರವಾಗಿದೆ. ಇದನ್ನೂ ಓದಿ: 22 ಐಪಿಎಸ್ ಅಧಿಕಾರಿಗಳು ಕ್ರಿಮಿನಲ್ ಪ್ರಕರಣ ಎದುರಿಸುತ್ತಿದ್ದಾರೆ- ಎಂಎಚ್‌ಒ
Advertisement
ವಿಶ್ವಾದ್ಯಂತ ಅತಿ ಹೆಚ್ಚು ಗಳಿಕೆಯ ಸಾರ್ವಕಾಲಿಕ ಹತ್ತು ಭಾರತೀಯ ಚಲನಚಿತ್ರಗಳನ್ನು ನೋಡೋಣ:
ದಂಗಲ್ – ರೂ. 2008.30 ಕೋಟಿ
ಬಾಹುಬಲಿ 2 – ರೂ. 1754.50 ಕೋಟಿ
ಆರ್‍ಆರ್‍ಆರ್ – ರೂ. 939 ಕೋಟಿ ಅಂದಾಜು 11 ದಿನಗಳು, ಇನ್ನೂ ಎಣಿಸಲಾಗುತ್ತಿದೆ
ಭಜರಂಗಿ ಭಾಯಿಜಾನ್ – ರೂ. 902.80 ಕೋಟಿ
ಸೀಕ್ರೆಟ್ ಸೂಪರ್‍ಸ್ಟಾರ್ – ರೂ. 895.50 ಕೋಟಿ
ಪಿಕೆ – ರೂ. 762 ಕೋಟಿ
2.0 – ರೂ. 666.30 ಕೋಟಿ
ಸುಲ್ತಾನ್ – ರೂ. 616.60 ಕೋಟಿ
ಸಂಜು – ರೂ. 588.30 ಕೋಟಿ
ಬಾಹುಬಲಿ: ದಿ ಬಿಗಿನಿಂಗ್ – ರೂ. 581 ಕೋಟಿ
#RRR is steady on weekdays… Will cross ₹ 200 cr today [second Wed]… An open week – till the biggies arrive on 14 April – will help accumulate a strong total… [Week 2] Fri 13.50 cr, Sat 18 cr, Sun 20.50 cr, Mon 7 cr, Tue 6.50 cr. Total: ₹ 198.09 cr. #India biz. pic.twitter.com/FWB7zJmGAT
— taran adarsh (@taran_adarsh) April 6, 2022
ಎಸ್ ಎಸ್ ರಾಜಮೌಳಿಯವರ ‘ಆರ್‍ಆರ್‍ಆರ್’ ಡಾಲ್ಬಿ ಸಿನಿಮಾದಲ್ಲಿ ಬಿಡುಗಡೆಯಾದ ಮೊದಲ ಭಾರತೀಯ ಚಿತ್ರವಾಗಿದೆ. ತೆಲುಗು ಭಾಷೆಯ ಅವಧಿಯ ಆಕ್ಷನ್ ಡ್ರಾಮಾ ಚಲನಚಿತ್ರವನ್ನು ಡಿವಿವಿ ಎಂಟರ್‌ಟೈನಮೆಂಟ್‌ನ ಡಿವಿವಿ ದಾನಯ್ಯ ನಿರ್ಮಿಸಿದ್ದಾರೆ. ಚಿತ್ರವನ್ನು 2022ರ ಮಾರ್ಚ್ 25 ರಂದು ಬಿಡುಗಡೆ ಮಾಡಲಾಗಿದೆ.