RRR ಪ್ರೀ ರಿಲೀಸ್ ಇವೆಂಟ್‌ನಲ್ಲಿ ಪೊಲೀಸರ ಮೇಲೆ ಬಾಟಲಿ, ಚಪ್ಪಲಿ ತೂರಿ ಅಭಿಮಾನಿಗಳ ಅತಿರೇಕದ ವರ್ತನೆ

Public TV
1 Min Read
RRR EVENTS

ಚಿಕ್ಕಬಳ್ಳಾಪುರ: ರಾಜಮೌಳಿ ನಿರ್ದೆಶನದ ಮಲ್ಟಿ ಸ್ಟಾರ್ ಸಿನಿಮಾ ಇದೇ 25 ರಂದು ವಿಶ್ವದಾದ್ಯಂತ ತೆರೆಗೆ ಸಜ್ಜಾಗಿದೆ. ಈ ನಡುವೆ ಸಿನಿ ತಂಡ ಇಂದು ಚಿಕ್ಕಬಳ್ಳಾಪುರದಲ್ಲಿ ಪ್ರೀ ರಿಲೀಸ್ ಇವೆಂಟ್ ಹಮ್ಮಿಕೊಂಡಿತ್ತು. ಆದರೆ ಇವೆಂಟ್ ಆರಂಭಕ್ಕೂ ಮುನ್ನ ಅಭಿಮಾನಗಳ ಅತಿರೇಕದ ವರ್ತನೆ ಕಂಡುಬಂತು.

RRR EVENT

ಆರ್‌ಆರ್‌ಆರ್ ಮೂವಿ ಸಾಂಗ್, ಟ್ರೈಲರ್‌ಗಳಿಂದ ಸಖತ್ ಸದ್ದು ಮಾಡ್ತಿದ್ದು, ಮಲ್ಟಿ ಸ್ಟಾರ್ ಸಿನಿಮಾ ತೀವ್ರ ಕುತೂಹಲ ಕೆರಳಿಸಿದೆ. ಈ ನಡುವೆ ಚಿತ್ರತಂಡ ಇವತ್ತು ಚಿಕ್ಕಬಳ್ಳಾಪುರದ ಅಗಲಗುರ್ಕಿಯಲ್ಲಿ ಅದ್ದೂರಿಯಾಗಿ ಪ್ರೀ-ರಿಲೀಸ್ ಇವೆಂಟ್ ಆಯೋಜಿಸಿತ್ತು. ಕಾರ್ಯಕ್ರಮದ ಆರಂಭದಲ್ಲೇ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್‌ಗೆ ಆರ್‌ಆರ್‌ಆರ್ ಚಿತ್ರತಂಡ ಹಾಡಿನ ಮೂಲಕ ನಮನ ಸಲ್ಲಿಸಿತು. ಅಪ್ಪು ನೆನೆದು ನೆರೆದಿದ್ದವರು ಭಾವುಕರಾದ್ರು. ಬೃಹತ್ ವೇದಿಕೆಯಲ್ಲಿ ನಟ ರಾಮ್‍ಚರಣ್, ನಟ ಜ್ಯೂನಿಯರ್ ಎನ್‌ಟಿಆರ್‌ ಸೇರಿದಂತೆ ಕಲಾವಿದರು ಚಿತ್ರದ ಹಾಡುಗಳಿಗೆ ಸ್ಪೆಪ್ಸ್ ಹಾಕಿದರು. ಇದನ್ನೂ ಓದಿ: ಸ್ಟೇಜ್‌ನತ್ತ ನುಗ್ಗಿದ ಫ್ಯಾನ್ಸ್‌ ನಿಯಂತ್ರಣಕ್ಕೆ ಪೊಲೀಸರ ಹರಸಾಹಸ- RRR ಪ್ರೀ-ರಿಲೀಸ್‌ ಇವೆಂಟ್‌ ತಡವಾಗಿ ಆರಂಭ

RRR EVENT 2

ಕಾರ್ಯಕ್ರಮ ಆರಂಭಕ್ಕೂ ಮುನ್ನ ಅಭಿಮಾನಿಗಳು ತಮ್ಮ ನೆಚ್ಚಿನ ನಟರನ್ನು ನೋಡಲು ನಾ ಮುಂದು ತಾ ಮುಂದು ಅಂತ ಒಬ್ಬರ ಮೇಲೊಬ್ಬರು ಮುನ್ನುಗ್ಗಿದ್ರು. ಬ್ಯಾರಿಕೇಡ್‌ಗಳನ್ನು ಮುರಿದು ಹಾಕಿದ್ರು. ಮುನ್ನುಗ್ಗಿ ವೇದಿಕೆಯ ಮುಂಭಾಗಕ್ಕೆ ಧಾವಿಸಿದರು. ಎಷ್ಟೇ ಹೇಳಿದ್ರೂ, ಯಾರೇ ಹೇಳಿದ್ರೂ ಅಭಿಮಾನಿಗಳಂತೂ ಯಾರ ಮಾತು ಕೇಳಲಿಲ್ಲ ಕೈಗೆ ಸಿಕ್ಕ ವಸ್ತುಗಳು, ಚೇರ್‌ಗಳನ್ನು ಬಿಸಾಡಿದ್ರು. ಪುಡಿ ಪುಡಿ ಮಾಡಿದ್ರು. ಪೊಲೀಸರ ಮೇಲೆಯೇ ಬಾಟಲಿ, ಚಪ್ಪಲಿ ತೂರಿ ಅಸಭ್ಯ ವರ್ತನೆ ತೋರಿದ್ರು. ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳನ್ನು ನಿಯಂತ್ರಿಸಲಾಗದೆ ಪೊಲೀಸರು ಹೈರಾಣಾದರು.

ಕಾರ್ಯಕ್ರಮಲ್ಲಿ ಅಭಿಮಾನದ ಸಾಗರವೇ ಹರಿದು ಬಂದಿತ್ತು. ಸಿಎಂ ಬಸವರಾಜ ಬೊಮ್ಮಾಯಿ, ನಟ ಶಿವಣ್ಣ, ಸಚಿವ ಸುಧಾಕರ್ ಸೇರಿದಂತೆ ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *