ಬೆಂಗಳೂರು: ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಬಹುಭಾಷಾ ನಟ ಅರ್ಜುನ್ ಸರ್ಜಾ ಅವರಿಗೆ ಖ್ಯಾತ ನಟಿ ಖುಷ್ಬೂ ಬೆಂಬಲ ನೀಡಿದ್ದಾರೆ.
ಶೃತಿ ಹರಿಹರನ್ ಅವರಿಂದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಖುಷ್ಬೂ ವಿಡಿಯೋ ಬಿಡುಗಡೆ ಮಾಡಿ ಅರ್ಜುನ್ ಸರ್ಜಾ ಅವರು ಆ ರೀತಿ ಎಂದಿಗೂ ಮಾಡಲು ಸಾಧ್ಯವೇ ಇಲ್ಲ. ನಾನೇ ಗ್ಯಾರಂಟಿ ಎಂದು ಹೇಳಿದ್ದಾರೆ. ಇದನ್ನು ಓದಿ: ಶೃತಿ ಹರಿಹರನ್ #MeToo ಹಿಂದಿನ ಅಸಲಿ ಕಹಾನಿ ಬಿಚ್ಚಿಟ್ಟ ಭಾಮಾ ಹರೀಶ್
Advertisement
Advertisement
ವಿಡಿಯೋ ಹೇಳಿಕೆಯಲ್ಲಿ ಏನಿದೆ?
34 ವರ್ಷಗಳಿಂದ ನನಗೆ ಅರ್ಜುನ್ ಸರ್ಜಾ ಪರಿಚಯ. ನನ್ನ ಮೊದಲ ಸಿನಿಮಾಗೆ ಅವರು ಹೀರೋ ಆಗಿ ಅಭಿನಯಿಸಿದ್ದರು. ಮೊದಲ ಬಾರಿಗೆ ನನ್ನನ್ನು ರಕ್ಷಣೆ ಮಾಡಿದ್ದೇ ಅವರು. ಎಂದಿಗೂ ಅವರು ನನ್ನ ಜೊತೆ ಅಸಭ್ಯವಾಗಿ ವರ್ತನೆ ಮಾಡಿರಲಿಲ್ಲ.
Advertisement
ಸರ್ಜಾ ವಿರುದ್ಧ ಮೀಟೂ ಆರೋಪ ಕೇಳಿಬಂದಾಗ ಬಂದಾಗ ನನಗೆ ಆಶ್ಚರ್ಯವಾಯಿತು. ನಾವಿಬ್ಬರೂ ಒಟ್ಟಾಗಿ ತಮಿಳು, ತೆಲುಗು, ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದೇವೆ. ತಂದೆಯಾಗಿರುವ ಅರ್ಜುನ್ ಸರ್ಜಾ ಮೇಲೆ ಈ ಆರೋಪ ಬಂದಾಗ ಅವರ ಇಬ್ಬರು ಹೆಣ್ಣು ಮಕ್ಕಳ ಮೇಲೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎನ್ನುವುದು ನನಗೆ ಗೊತ್ತಿದೆ. ನನ್ನ ತಂದೆ ದೊಡ್ಡ ಹೀರೋ ಎಂದುಕೊಂಡಿದ್ದ ಆ ಇಬ್ಬರು ಮಕ್ಕಳನ್ನು ಈ ಮೂಲಕ ನೋಯಿಸುತ್ತಿದ್ದೀರಿ. ಅರ್ಜುನ್ ಅವರು ಈ ರೀತಿ ನಡೆದುಕೊಳ್ಳಲು ಸಾಧ್ಯವಿಲ್ಲ. ನಾನು ಗ್ಯಾರಂಟಿ ನೀಡುತ್ತಿದ್ದೇನೆ. ಇದನ್ನು ಓದಿ: ಸರ್ಜಾ ವಿರುದ್ಧ ಸೇಡಿಗಾಗಿ ಶೃತಿ ಹರಿಹರನ್ ಪರ ನಿಂತ್ರಾ ನಟ ಚೇತನ್?
Advertisement
ಹಲವು ವರ್ಷಗಳ ಸಿನಿ ಅನುಭವದಿಂದ ನಾನು ಈ ಮಾತನ್ನು ಹೇಳುತ್ತಿದ್ದೇನೆ. ಪ್ರಪಂಚವೇ ಅರ್ಜುನ್ ಅವರತ್ತ ಆರೋಪ ಮಾಡಿದರೂ ನಾನು ನಂಬುವುದಿಲ್ಲ. ಅರ್ಜುನ್ ನಟ, ನಿರ್ದೇಶಕ ಮತ್ತು ಒಳ್ಳೆಯ ಸ್ನೇಹಿತರಾಗಿದ್ದಾರೆ. ಆದರೆ ಈ ಸಮಯದಲ್ಲೂ ನಾನು ಅವರ ಪರವಾಗಿ ಮಾತನಾಡದೇ ಇದ್ದರೇ ನನಗೆ ಶೇಮ್ ಆಗುತ್ತದೆ. ಇದು 34 ವರ್ಷದ ಸ್ನೇಹಕ್ಕೆ ಅವಮಾನ ಮಾಡಿದಂತೆ ಆಗುತ್ತದೆ. ಈ ಕಾರಣಕ್ಕೆ ನಾನು ಇಲ್ಲಿಂದಲೇ ಅರ್ಜುನ್ ಅವರನ್ನು ಬೆಂಬಲಿಸುತ್ತಿದ್ದೇನೆ. ಅರ್ಜುನ್ ಯಾವತ್ತೂ ಮಹಿಳೆಯರನ್ನು ನೋಯಿಸುವ ವ್ಯಕ್ತಿಯಲ್ಲ. ಕುಟುಂಬ ಹೇಗೆ ಅರ್ಜುನ್ ಸರ್ಜಾ ಅವರನ್ನು ನಂಬುತ್ತದೋ ಅದೇ ರೀತಿಯಾಗಿ ನಾನು ಅವರನ್ನು ನಂಬುತ್ತೇನೆ. ನಿನ್ನ ಜೊತೆ ನಾನಿದ್ದೇನೆ ಅರ್ಜುನ್. ಇದನ್ನು ಓದಿ: ಅರ್ಜುನ್ ಸರ್ಜಾ ಬಳಿ ದುಡ್ಡು, ಹೆಸರಿದೆ- ಶೃತಿ ಹರಿಹರನ್ ಬೆನ್ನಿಗೆ ನಿಂತ ಸಂಯುಕ್ತಾ ಹೆಗ್ಡೆ
ಮೀಟೂ ಪರ ಧ್ವನಿ ಎತ್ತಿದ್ದ ಖುಷ್ಬೂ ಅವರು ಈ ಹಿಂದೆ ಅಭಿಮಾನಿಯೊಬ್ಬರು ರವಿಚಂದ್ರನ್ ಬಗ್ಗೆ ಪ್ರಶ್ನೆ ಕೇಳಿದ್ದರು. ಇದಕ್ಕೆ ಖಡಕ್ ಆಗಿ ಪ್ರತಿಕ್ರಿಯಿಸಿ ಅಭಿಮಾನಿಯ ಬಾಯಿಯನ್ನು ಖಷ್ಬೂ ಮುಚ್ಚಿಸಿದ್ದರು. ಚಿತ್ರ ರಂಗದ ಪ್ರಕಾಶ್ ರೈ, ಚೇತನ್, ಶೃದ್ಧಾ ಶ್ರೀನಾಥ್, ಸಂಯುಕ್ತ ಹೆಗ್ಡೆ ಅವರು ಶೃತಿ ಹರಿಹರನ್ ಮೀಟೂ ಆರೋಪವನ್ನು ಬೆಂಬಲಿಸಿ ಪ್ರತಿಕ್ರಿಯಿಸಿದ್ದಾರೆ. ಇದನ್ನು ಓದಿ: #MeToo ಅಭಿಯಾನ – ರವಿಚಂದ್ರನ್ ಬಗ್ಗೆ ಸತ್ಯ ಬಿಚ್ಚಿಟ್ಟ ಖುಷ್ಬೂ
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv