-ನಾನು ಸೈಲೆಂಟ್ ಆಗಿಲ್ಲ, ತಾಯಿಯಾಗಿ ಬ್ರೇಕ್ ಬೇಕಾಗಿತ್ತು
ಬೆಂಗಳೂರು: ಮೀಟೂ ಪ್ರಕರಣ ಸದ್ದು ಮಾಡಿದ ಮೇಲೆ ಸಮಾಜದಲ್ಲಿ ಏನಾದ್ರೂ ಬದಲಾವಣೆ ಆಗಿದೆಯಾ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಿದೆ ಎಂದು ನಟಿ ಶ್ರುತಿ ಹರಿಹರನ್ ಹೇಳಿದ್ದಾರೆ.
ಸಿಟಿಜನ್ಸ್ ಫಾರ್ ಬೆಂಗಳೂರು ವತಿಯಿಂದ ಇವತ್ತು ವಿನೂತನವಾಗಿ ಪ್ರತಿಭಟನೆಯನ್ನ ನಡೆಸಲಾಯಿತು. ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಶ್ರುತಿ ಹರಿಹರನ್ ಮಾಧ್ಯಮಗಳ ಜೊತೆ ಮಾತನಾಡಿ, ಲೈಂಗಿಕ ದೌರ್ಜನ್ಯಗಳು ಯಾಕೆ ಕಡಿಮೆ ಆಗುತ್ತಿಲ್ಲ ಎಂಬುವುದೇ ಬೇಸರ. ಮೀಟೂ ಪ್ರಕರಣ ಸದ್ದು ಮಾಡಿದಾಗ ಇಂಡಸ್ಟ್ರಿಯಲ್ಲಿರುವ ಗಂಡಸರು ಸ್ವಲ್ಪನಾದ್ರೂ ಹೆದರಿಕೊಂಡಿದ್ದಿರಾ? ಅವರ ವರ್ತನೆಗಳಲ್ಲಿ ಸ್ವಲ್ಪ ಪ್ರಮಾಣದಲ್ಲಿ ಬದಲಾವಣೆ ಆಗಿದೆ ಅನ್ನೊ ಖುಷಿ ನನಗಿದೆ. ದೊಡ್ಡ ಮಟ್ಟದಲ್ಲಿ ಬದಲಾವಣೆ ಆಗದಿದ್ದರೂ ಸಣ್ಣ ಪ್ರಮಾಣದಲ್ಲಿ ಆಗಿರೋದು ಮಾತ್ರ ಸತ್ಯ.
Advertisement
Advertisement
ಪ್ರಕರಣದಿಂದ ನಾನು ಹಿಂದೆ ಸರಿದಿಲ್ಲ. ಇಂದು ಸಹ ನನ್ನ ಹೇಳಿಕೆಗಳಿಗೆ ನಾನು ಬದ್ಧಳಾಗಿದ್ದೇನೆ. ಯಾರಿಗೂ ಕ್ಷಮೆಯನ್ನು ಕೇಳಿಲ್ಲ. ಸದ್ಯ ನಾನು ಒಂದು ಮಗುವಿನ ತಾಯಿ. ಹಾಗಾಗಿ ಸ್ಪಲ್ಪ ಬ್ರೇಕ್ ತೆಗೆದುಕೊಂಡಿದ್ದೇನೆಯೇ ಹೊರತು ಸೈಲೆಂಟ್ ಆಗಿಲ್ಲ. ಪ್ರಕರಣ ನ್ಯಾಯಾಲಯದಲ್ಲಿದ್ದು, ನಿಧಾನವಾಗ್ತಿದೆ ಎಂದು ಶ್ರುತಿ ಬೇಸರ ವ್ಯಕ್ತಪಡಿಸಿದರು.
Advertisement
ಮೀಟೂ ವಿಚಾರದ ಬಗ್ಗೆ ನಾನು ಧ್ವನಿ ಎತ್ತಿದಾಗ ಮಾಧ್ಯಮಗಳು ದೊಡ್ಡ ವಿಷಯವನ್ನಾಗಿ ಮಾಡಿದವು. ಮೀಡಿಯಾದವರು ಬೇರೆ ಕಥೆಯನ್ನು ಕಟ್ಟಿದರು. ಬೇರೆ ಸುದ್ದಿಗಳು ಬರುತ್ತಿದ್ದಂತೆ ನಮ್ಮ ಸುದ್ದಿಗಳು ಕೈ ಬಿಡಲಾಗಿದೆ. ಹಾಗಾಗಿ ನಮ್ಮ ಧ್ವನಿ ಯಾರಿಗೂ ಕೇಳಿಸುತ್ತಿಲ್ಲ ಅಂತ ಮಾಧ್ಯಮಗಳ ಮೇಲೆ ತಮ್ಮ ಸಿಟ್ಟನ್ನ ಹೊರ ಹಾಕಿದರು.
Advertisement
ಸಿಟಿಜನ್ಸ್ ಫರ್ ಬೆಂಗಳೂರು ವತಿಯಿಂದ ಇವತ್ತು ವಿನೂತನವಾಗಿ ಪ್ರತಿಭಟನೆಯನ್ನ ನಡೆಸಲಾಯಿತು. ನಿರ್ಭಯಾ ಹಾಗೂ ದಿಶಾ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಖಂಡಿಸಿ ಇಂದು ಟೌನ್ ಹಾಲ್ ಮುಂಭಾಗ ಬಿಳಿ ಬ್ಯಾನರ್ ಮೇಲೆ ತಮ್ಮ ಕ್ರಿಯಾತ್ಮಕ ಬೇಡಿಕೆಗಳನ್ನ ಬರೆದು ಪ್ರತಿಭಟಿಸಿದರು. ಸಾಮಾಜಿಕ ಕಾರ್ಯಕರ್ತರು, ವೈದ್ಯರು, ವಿಧ್ಯಾರ್ಥಿಗಳು, ಈ ಪ್ರತಿಭಟನೆಯಲ್ಲಿ ಭಾಗಿಯಾಗಿ ಅತ್ಯಾಚಾರ ನಿರ್ಮೂಲನೆಗೆ ತಮ್ಮ ತಮ್ಮ ಸಲಹೆಗಳನ್ನ ಬಿಳಿ ಬ್ಯಾನರ್ ಮೇಲೆ ಬರೆಯಲಾಗಿತ್ತು.