ಬೆಂಗಳೂರು: ಪುನೀತ್ ಸಾವು ದೊಡ್ಡ ಅನ್ಯಾಯ. ಇದು ಒಬ್ಬ ವ್ಯಕ್ತಿ ಅಥವಾ ನಟಿನಿಗೆ ಆಗಿರುವ ಅನ್ಯಾಯ ಅಲ್ಲ ಎಲ್ಲರಿಗೂ ಆಗಿರುವ ಅನ್ಯಾಯ. ದೇವರು ಮಾಡಿರುವಂತಹ ದುರಂತ ಇದು. ದೇವರಿಗೆ ಮನಸ್ಸಿಲ್ಲ ಎಂಬುವುದು ಇದರಿಂದ ನನಗೆ ಗೊತ್ತಾಗುತ್ತಿದೆ ಎಂದು ನಟ ಸೃಜನ್ ಲೋಕೇಶ್ ಪುನೀತ್ ಸಾವಿಗೆ ಸಂತಾಪ ಸೂಚಿಸಿದ್ದಾರೆ.
Advertisement
ಇಂದು ಪುನೀತ್ ರಾಜ್‍ಕುಮಾರ್ ಅವರ ಅಂತಿಮ ದರ್ಶನ ಪಡೆದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಎಂಥೆಂತಹ ಕೆಟ್ಟ ಮನಸ್ಸಿರುವ ಕಳ್ಳರು, ಕೊಲೆಗಾರರು ಎಲ್ಲರೂ ಬದುಕಿರುತ್ತಾರೆ. ಆದರೆ ಸಾವಿರಾರು ಜನರಿಗೆ ಸಹಾಯ ಮಾಡುತ್ತಿದ್ದಂತಹ ವ್ಯಕ್ತಿ, 46 ವರ್ಷ ದಷ್ಟಪುಷ್ಟವಾಗಿದ್ದಂತಹ ಉತ್ತಮ ಲೈಫ್ ಸ್ಟೈಲ್ ಇದ್ದಂತಹ ವ್ಯಕ್ತಿ ಹೋಗುತ್ತಾರೆ ಎಂದರೆ ಇದಕ್ಕೆ ಅರ್ಥನೇ ಇಲ್ಲ. ಇದು ಆಗಬಾರದಿತ್ತು. ಇದು ಅನ್ಯಾಯ. ದೇವರು ಮಾಡಿರುವ ಅನ್ಯಾಯ ಎಂದಿದ್ದಾರೆ. ಇದನ್ನೂ ಓದಿ: ಪುನೀತ್ ನೆನೆದು ನಟಿ ರಾಧಿಕಾ ಕುಮಾರಸ್ವಾಮಿ ಕಣ್ಣೀರು
Advertisement
Advertisement
ಇದೇ ವೇಳೆ, ನಾನು ಚಿಕ್ಕವಯಸ್ಸಿನಲ್ಲಿ ಪ್ರತಿ ಎರಡನೇ ಭಾನುವಾರ ಅಣ್ಣಾ ಅವರ ಮನೆಗೆ ಹೋಗುತ್ತಿದ್ದೇವು. ಚಿಕ್ಕ ವಯಸ್ಸಿನಲ್ಲಿ ನಾನು, ಅಪ್ಪು, ನನ್ನ ಅಕ್ಕ ಎಲ್ಲರೂ ಒಟ್ಟಿಗೆ ಬೆಳೆದವರು. ಈ ವೇಳೆ ಅಣ್ಣಾವ್ರು ಹಾಗೂ ನನ್ನ ತಂದೆ ಇಬ್ಬರೂ ಒಟ್ಟಿಗೆ ಕುಳಿತುಕೊಂಡು ಊಟ ಮಾಡುತ್ತಿದ್ದರು. ಆಗ ನಾನು ಅಪ್ಪು ಹೊಟ್ಟೆ ಹಸಿವು ಎಂದು ಒಟ್ಟಿಗೆ ಕದ್ದು ತಿಂಡಿ ತಿಂದು ಬರುತ್ತಿದ್ದೇವು. ಈ ರೀತಿಯ ಸಿಹಿಯಾದ ನೆನಪುಗಳಿದೆ. ಆದರೆ ಈಗ ಈ ರೀತಿ ಕಹಿ ನೆನಪು ಕೂಡ ಬರುತ್ತದೆ ಎಂದು ಅಂದುಕೊಂಡಿರಲಿಲ್ಲ. ಇದು ನನಗೆ ನೆನಪಾಗಿ ಉಳಿಯಲೇ ಬರದಿತ್ತು. ನಾನು ಇದನ್ನು ನೋಡಲೇ ಬಾರದಿತ್ತು ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಅಪ್ಪು ಅವರ ಸಾವು ನಿಜ ಅಂತ ಅನಿಸುತ್ತಿಲ್ಲ: ಅದಿತಿ ಪ್ರಭುದೇವ
Advertisement
ನಂತರ ಗುರುಕಿರಣ್ ಬರ್ತ್‍ಡೇ ಪಾರ್ಟಿಯಲ್ಲಿ ಖುಷಿಯಾಗಿ ಅಪ್ಪು ಹೇಗಿರುತ್ತಿದ್ದರು. ಹಾಗೆಯೇ ಇದ್ದರು. ಯಾವುದೇ ರೀತಿಯ ಸೂಚನೆ ಕೂಡ ಇರದಂತೆ ಅಷ್ಟು ಖುಷಿಯಾಗಿ ಸಂತೋಷದಿಂದ ಇದ್ದರು. ಇನ್ನೂ ನೀವು ನಮ್ಮ ಮನೆಗೆ ಬರುವುದಿಲ್ಲವಾ ಎಂದಾಗ, ಇಲ್ಲ ನಾನು ಅಮ್ಮನನ್ನು ಭೇಟಿಯಾಗಬೇಕು. ನಿಮ್ಮ ಮಗನನ್ನು ನೋಡಬೇಕು ಹಾಗಾಗಿ ಬರುತ್ತೇನೆ ಎಂದು ಹೇಳಿದ್ದರು.