ನಟ ಸೃಜನ್ ಲೋಕೇಶ್ (Srujan Lokesh) ಮತ್ತು ಸಚಿವ ಸೋಮಣ್ಣ (V. Somanna) ಪುತ್ರ ಅರುಣ್ ಸೋಮಣ್ಣ ಮಧ್ಯೆ ಗಲಾಟೆ ನಡೆದಿದೆ ಎನ್ನಲಾದ ಸುದ್ದಿಗೆ ಸ್ವತಃ ಅರುಣ್ ಸೋಮಣ್ಣ ಪ್ರತಿಕ್ರಿಯೆ ನೀಡಿದ್ದು, ಇದೊಂದು ಚುನಾವಣೆಯ ಹುನ್ನಾರ ಎಂದು ಸ್ಪಷ್ಟನೆ ನೀಡಿದ್ದಾರೆ. ಸೃಜನ್ ಮತ್ತು ತಮ್ಮ ನಡುವೆ ಯಾವುದೇ ಗಲಾಟೆ ಆಗಿಲ್ಲ. ಅಂದು ಆ ಸ್ಥಳದಲ್ಲಿ ನಾನು ಇರಲೇ ಇಲ್ಲ. ನಮ್ಮ ವಿರೋಧಗಳು ಈ ರೀತಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎಂದು ಅವರು ಹೇಳಿಕೆ ಕೊಟ್ಟಿದ್ದಾರೆ.
Advertisement
ಬ್ಯಾಡ್ಮಿಂಟನ್ (Badminton) ಟೂರ್ನಮೆಂಟ್ ಗಾಗಿ ಸೃಜನ್ ಲೋಕೇಶ್ ಟೀಮ್ ಪ್ರಾಕ್ಟಿಸ್ ಮಾಡುತ್ತಿದೆ. ಪ್ರಾಕ್ಟಿಸ್ ಮುಗಿಸಿಕೊಂಡು ರಾತ್ರಿ ಕಿಂಗ್ಸ್ ಕ್ಲಬ್ ನಲ್ಲಿ ಪಾರ್ಟಿಗಾಗಿ ಜಮಾವಣೆಗೊಂಡಿದೆ. ಈ ಟೀಮ್ ಏರು ಧ್ವನಿಯಲ್ಲಿ ಕಿರುಚಾಡುತ್ತಿದ್ದರಂತೆ. ಇದೇ ವೇಳೆಯೇ ಅದೇ ಕ್ಲಬ್ ನಲ್ಲಿದ್ದ ಅರುಣ್ ಸೋಮಣ್ಣ ಕಿರುಚಾಡುತ್ತಿದ್ದವರನ್ನು ಪ್ರಶ್ನೆ ಮಾಡಿದೆ. ಮಾತಿಗೆ ಮಾತು ಬೆಳೆದು ಹೊಡೆದಾಟ ಮಾಡುವ ಮಟ್ಟಕ್ಕೆ ಬಂದಿದೆ ಎಂದು ಹೇಳಲಾಗಿತ್ತು. ಇದನ್ನೂ ಓದಿ:ದೂದ್ ಪೇಡ ದಿಗಂತ್ ಗೆ ಜೊತೆಯಾದ ರಂಗಿತರಂಗ ಬೆಡಗಿ ರಾಧಿಕಾ ನಾರಾಯಣ್
Advertisement
Advertisement
ಈ ಕುರಿತು ಟೂರ್ನಮೆಂಟ್ ಆಟಗಾರ ಮತ್ತು ಅಂದು ಪಾರ್ಟಿಯಲ್ಲಿ ಪಾಲ್ಗೊಂಡಿದ್ದ ವಿಕಾಸ್ ಅನ್ನುವವರು ಪಬ್ಲಿಕ್ ಟಿವಿ ಜೊತೆ ಮಾತನಾಡಿ, ‘ರಾತ್ರಿ ಪ್ರಾಕ್ಟಿಸ್ ಮತ್ತು ಮೀಟಿಂಗ್ ಇತ್ತು. ಆದರೆ, ಗಲಾಟೆ ಆಗುವಂಥದ್ದು ಏನೂ ಆಗಿಲ್ಲ. ಅವತ್ತು ಅರುಣ್ ಸೋಮಣ್ಣ (Arun Somanna) ಅವರು ಅಲ್ಲಿ ಇರಲೇ ಇಲ್ಲ. ಸೃಜನ್ ಲೋಕೇಶ್ ಅವರು ಬೇಗನೆ ಹೊರಟರು. ನಾವೂ ನಂತರ ಹೊರಟೆವು. ಗಲಾಟೆ ಆಗಿದೆ ಎಂದು ಯಾರೋ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ’ ಎಂದಿದ್ದರು.
Advertisement
ಈ ಕುರಿತು ಎರಡು ದಿನಗಳ ಹಿಂದೆಯಷ್ಟೇ ಸಚಿವ ಸೋಮಣ್ಣ ಕೂಡ ಪ್ರತಿಕ್ರಿಯೆ ನೀಡಿದ್ದು, ‘ಸುಮ್ನೆ ಏನೇನೋ ಹೇಳೋಕ್ ಹೋಗ್ಬೇಡಿ, ಬಿಟ್ಬಿಡಿ. ಗೊತ್ತಿಲ್ಲದೆ ಇರೋದಕ್ಕೆಲ್ಲ ಹಿಟ್ ಅಂಡ್ ರನ್ ಕೆಲಸ ಬೇಡ. ನಾನು ಒಬ್ಬ ರಾಜಕಾರಣಿ, ಯಾರಾದರೂ ತಪ್ಪು ಮಾಡಿದ್ರೆ ತಪ್ಪೆ.ಆ ತರಹ ನನಗೆ ಏನೂ ಮಾಹಿತಿ ಇಲ್ಲ. ನನ್ನ ಮಗ ನನ್ನ ಜೊತೆ ಇಲ್ಲ. ಸುಮಾರು ಹತ್ತು ಹನ್ನೆರಡು ವರ್ಷದಿಂದ ಅವರು ಬೇರೆ ಮನೆಯಲ್ಲಿ ಇದ್ದಾರೆ. ಸುಮ್ನೆ ಏನೇನೋ ಮಾತಾಡೋದ್ರಲ್ಲಿ ಅರ್ಥ ಇಲ್ಲ. ಸತ್ಯಾಸತ್ಯತೆ ಪರಾಮರ್ಶೆ ಮಾಡೋದು ಒಳ್ಳೆದು ಇದರ ಬಗ್ಗೆ ನನಗೆ ಕಿಂಚಿತ್ತು ಮಾಹಿತಿ ಇಲ್ಲ’ ಎಂದಿದ್ದರು. ಇದೀಗ ಅವರ ಪುತ್ರ ಕೂಡ ಈ ಘಟನೆಯನ್ನು ತಳ್ಳಿಹಾಕಿದ್ದಾರೆ.