ಅಮೆಜಾನ್ ಪ್ರೈಮ್ ವಿಡಿಯೋ ತನ್ನ ಟ್ವಿಟರ್ ಖಾತೆಯಲ್ಲಿ ಯುವರ್ ಫೆವರೆಟ್ ಎಸ್.ಆರ್.ಕೆ ಫಿಲ್ಮ? ಎಂಬ ಪ್ರಶ್ನೆ ಕೇಳಿತ್ತು. ಭಾರತೀಯ ಸಿನಿಮಾ ರಂಗದಲ್ಲಿ ಎಸ್.ಆರ್.ಕೆ ಅಂದರೆ ಶಾರುಖ್ ಖಾನ್ ಎಂದೇ ಅದು ಬಿಂಬಿಸಲು ಹೊರಟಿತ್ತು. ಆದರೆ, ಕನ್ನಡಿಗರು ಈ ಪದಕ್ಕೆ ಬೇರೆಯ ಅರ್ಥವನ್ನೇ ಕೊಟ್ಟಿದ್ದಾರೆ. ನಿರ್ದೇಶಕ ಸುನಿ ಸೇರಿದಂತೆ ಅನೇಕರು ಎಸ್.ಆರ್.ಕೆ ಅಂದರೆ ಶಾರುಖ್ ಖಾನ್ ಅಲ್ಲ, ಕನ್ನಡದ ಶಿವರಾಜ್ ಕುಮಾರ್ ಎಂದೇ ಸೂಚಿಸಿದ್ದಾರೆ.
ಕನ್ನಡದ ಅನೇಕ ತಂತ್ರಜ್ಞರು ಮತ್ತು ಶಿವರಾಜ್ ಕುಮಾರ್ ಅಭಿಮಾನಿಗಳು ಶಿವರಾಜ್ ಕುಮಾರ್ ನಟನೆಯ ಅನೇಕ ಸಿನಿಮಾಗಳನ್ನು ಹೆಸರಿಸಿದ್ದಾರೆ. ಶಾರುಖ್ ಖಾನ್ ನಟನೆಯ ಸಿನಿಮಾಗಳಿಗಿಂತಲೂ ಶಿವಣ್ಣ ನಟನೆಯ ಅನೇಕ ಸಿನಿಮಾಗಳ ಯಾದಿಯನ್ನು ಅದಕ್ಕೆ ಒದಗಿಸಿದ್ದಾರೆ. ಅಲ್ಲದೇ, ಇದರಲ್ಲಿ ಹೆಚ್ಚಿನ ಸಂಖ್ಯೆಯಲ್ಲೇ ಕನ್ನಡಿಗರೇ ಭಾಗಿಯಾಗಿದ್ದಾರೆ. ಇದನ್ನೂ ಓದಿ:ಆ್ಯಸಿಡ್ ಸಂತ್ರಸ್ತೆಗೆ ನಟ ಕಿಚ್ಚ ಸುದೀಪ್ ನೋಡುವಾಸೆ : ನೋವಿನ ನಡುವೆಯೂ ನಾಲ್ಕು ಬಾರಿ ಸುದೀಪ್ ಹೆಸರು ಹೇಳಿದ ಯುವತಿ
ಬರೀ ಶಿವರಾಜ್ ಕುಮಾರ್ ನಟನೆಯ ಸಿನಿಮಾಗಳ ಹೆಸರನ್ನು ಮಾತ್ರ ಸೂಚಿಸಿಲ್ಲ. ಬಾಲಿವುಡ್ ಸಿನಿಮಾ ರಂಗದ ಬಗ್ಗೆ ಪಾಠವನ್ನೂ ಕೆಲವರು ಮಾಡಿದ್ದಾರೆ. ಭಾರತೀಯ ಸಿನಿಮಾ ರಂಗ ಅಂದರೆ, ಅದು ಕೇವಲ ಬಾಲಿವುಡ್ ಮಾತ್ರವಲ್ಲ, ಕನ್ನಡವೂ ಸೇರಿದಂತೆ ಹಲವು ಭಾಷೆಯ ಚಿತ್ರರಂಗಗಳು ಇವೆ ಎನ್ನುವುದನ್ನು ಮನದಟ್ಟು ಮಾಡಿದ್ದಾರೆ.