Belgaum

ಶ್ರೀಶೈಲ ಜಗದ್ಗುರುಗಳಿಂದ ವೀರಭದ್ರೇಶ್ವರ ಜಯಂತಿ

Published

on

Share this

ಚಿಕ್ಕೋಡಿ: ಭಾದ್ರಪದ ಮಾಸದ ಪ್ರಥಮ ಮಂಗಳವಾರ ಪ್ರತಿ ವರ್ಷ ವೀರಭದ್ರೇಶ್ವರ ಜಯಂತಿಯನ್ನು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸುಕ್ಷೇತ್ರ ಯಡೂರ ಗ್ರಾಮದಲ್ಲಿ ಅತಿ ಸರಳವಾಗಿದೆ ಆಚರಣೆ ಮಾಡಿದರು.

ಚಿಕ್ಕೋಡಿ ತಾಲೂಕಿನ ಸುಕ್ಷೇತ್ರ ಯಡೂರ ವೀರಭದ್ರ ದೇವಸ್ಥಾನದಲ್ಲಿ ಜಯಂತಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ವೀರಭದ್ರೇಶ್ವರ ಮೂರ್ತಿಗೆ ವಿಶೇಷ ಅಭಿಷೇಕ ಹಾಗೂ ಪೂಜೆ ಮಾಡಿ ವಿಶ್ವ ಶಾಂತಿಗಾಗಿ ದೇವರಲ್ಲಿ ಆರಾಧಿಸಲಾಯಿತು. ಇದನ್ನೂ ಓದಿ: ಭಾರೀ ಮಳೆ- ನವಿಲು ತೀರ್ಥ ಡ್ಯಾಂನಿಂದ ಮಲಪ್ರಭಾ ನದಿಗೆ ನೀರು

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಶೈಲ ಜಗದ್ಗುರುಗಳು, ಕೊರೊನಾ ಕಾರಣದಿಂದಾಗಿ ಈ ಬಾರಿ ವೀರಭದ್ರೇಶ್ವರ ಜಯಂತಿಯನ್ನು ಸರಳವಾಗಿ ಆಚರಣೆ ಮಾಡಲಾಗಿದೆ. ವಿಶ್ವಶಾಂತಿ ಹಾಗೂ ಕೊರೊನಾ ಮಹಾಮಾರಿ ತೊಲಗಬೇಕು ಎನ್ನುವ ನಿಟ್ಟಿನಲ್ಲಿ ಪ್ರಾರ್ಥನೆ ಮಾಡಲಾಯಿತು ಎಂದರು.

Click to comment

Leave a Reply

Your email address will not be published. Required fields are marked *

Advertisement
Advertisement