ಬಳ್ಳಾರಿ: ಮಾಜಿ ಸಚಿವ ಗಣಿಧಣಿ ಗಾಲಿ ಜನಾರ್ದನ ರೆಡ್ಡಿ ಇಂದು ಜಿಲ್ಲೆಗೆ ಆಗಮಿಸಿದ್ದ ಪಂಚಪೀಠಾಧೀಶ್ವರರ ಪಾದಪೂಜೆ ನೆರವೇರಿಸಿದ್ದಾರೆ.
ಬಳ್ಳಾರಿಯ ಅಹಂಬಾವಿ ಪ್ರದೇಶದಲ್ಲಿರುವ ರೆಡ್ಡಿ ನಿವಾಸಕ್ಕೆ ಭೇಟಿ ನೀಡಿದ ಶ್ರೀಶೈಲ ಜಗದ್ಗುರು ಹಾಗೂ ಕಾಶಿ ಪೀಠದ ಶ್ರೀಗಳಿಂದ ವಿಶೇಷ ಪೂಜೆ ನೆರವೇರಿಸಿದರು. ಪೂಜೆಯಲ್ಲಿ ಜನಾರ್ದನ ರೆಡ್ಡಿ, ಪತ್ನಿ ಅರುಣಾ ಹಾಗೂ ಪುತ್ರ ಕಿರಿಟಿ ರೆಡ್ಡಿ ಸೇರಿದಂತೆ ರೆಡ್ಡಿ ಬಂಧು ಮಿತ್ರರು ಪಾಲ್ಗೊಂಡಿದ್ದರು. ಸುಮಾರು 20 ನಿಮಿಷ ಶ್ರೀಗಳ ಪಾದ ಪೂಜೆ ಮಾಡಿದರು. ಕಳೆದ ಹಲವು ವರ್ಷಗಳಿಂದ ಲಿಂಗಧಾರಣೆ ಕೈಗೊಂಡಿರುವ ರೆಡ್ಡಿ ಇಂದು ಕುಟುಂಬ ಸಮೇತರಾಗಿ ಶ್ರೀಗಳ ಪಾದಪೂಜೆ ಮಾಡಿದ್ದರು.
Advertisement
Advertisement
ಈ ವೇಳೆ ಮಾತನಾಡಿದ ಶ್ರೀಶೈಲ ಪೀಠದ ಶ್ರೀಗಳು, ಕಾಶಿ ಪೀಠದಲ್ಲಿ ರೆಡ್ಡಿ ಅವರು ಲಿಂಗಧಾರಣೆ ಮಾಡಿಕೊಂಡಿದ್ದಾರೆ. ಬೆಳಗ್ಗೆ ಲಿಂಗಪೂಜೆ, ಪಾದ ಪೂಜೆ ಆಗಿದೆ. ಮನೆಯಲ್ಲಿ ಸಂಸ್ಕೃತಿಯ ವಾತಾವರಣ ಸೃಷ್ಟಿಯಾಗಿದೆ. ರೆಡ್ಡಿಯವರು ಕಳೆದ ಹಲವು ವರ್ಷಗಳಿಂದ ಹಲವು ಸಮಸ್ಯೆಗಳಲ್ಲಿ ಸಿಲುಕಿದ್ದಾರೆ. ಆ ಸಮಸ್ಯೆಗಳಿಂದ ಮುಕ್ತಿ ಹೊಂದಲಿದ್ದಾರೆ. ಅವರ ಗತವೈಭವ ಮರುಕಳಿಸಲಿ ಎಂದು ಹಾರೈಸುತ್ತೇವೆ ಎಂದು ಹೇಳಿದ್ದಾರೆ.
Advertisement
ಕಾಶಿ ಪೀಠದ ಸ್ವಾಮೀಜಿಗಳು, ಬಳ್ಳಾರಿಯಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮ ನಿಮಿತ್ತ ಬಳ್ಳಾರಿಗೆ ಬಂದಿದ್ದೆವು. ಈ ಹಿನ್ನೆಲೆಯಲ್ಲಿ ಇಂದು ರೆಡ್ಡಿ ನಿವಾಸಕ್ಕೆ ಬಂದು ಪಾದ ಪೂಜೆ ಸ್ವೀಕರಿಸಿದೆವು. ರೆಡ್ಡಿಯವರು ಕಾಶಿ ಪೀಠದಲ್ಲಿ ಲಿಂಗಧಾರಣೆ ಮಾಡಿಕೊಂಡಿದ್ದರು. ಅಂದಿನಿಂದ ನಿಷ್ಠೆ ಭಕ್ತಿಯಿಂದ ಲಿಂಗ ಪೂಜೆ ಮಾಡುತ್ತಿದ್ದಾರೆ. ಅವರಿಗೆ ಅವರ ಕುಟುಂಬಕ್ಕೆ ಸನ್ಮಂಗಳವಾಗಲಿ ಎಂದು ಇಂದು ಪಾದ ಪೂಜೆ ಸ್ವೀಕರಿಸಿದ್ದೇವೆ ಎಂದಿದ್ದಾರೆ.
Advertisement
ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಜನಾರ್ದನ ರೆಡ್ಡಿ, ಇಂದು ನಮ್ಮ ಬಳ್ಳಾರಿಗೆ ಕಾರ್ಯಕ್ರಮದ ನಿಮಿತ್ತ ಉಜ್ಜಿಯಿನಿ ಜಗದ್ಗುರು, ರಂಭಾಪುರಿ ಪೀಠದ ಜಗದ್ಗುರು ಮತ್ತು ಕಾಶಿ ಪೀಠದ ಜಗದ್ಗುರುಗಳು ಆಗಮಿಸಿದ್ದರು. ಜಗದ್ಗುರುಗಳ ಸಮ್ಮುಖದಲ್ಲಿ ಲಿಂಗ ಪೂಜೆ ಮಾಡಿದ್ದು ವಿಶೇಷವಾಗಿತ್ತು. ಕಳೆದ ಕೆಲ ವರ್ಷಗಳ ಹಿಂದೆ ನಾನು ಲಿಂಗಧಾರಣೆ ಮಾಡಿದ್ದು, ಅಂದಿನಿಂದ ಪ್ರತಿನಿತ್ಯ ಲಿಂಗ ಪೂಜೆ ಮಾಡುತ್ತಿದ್ದೇನೆ ಎಂದರು.
ನಾನು ನ್ಯಾಯಾಲಯದ ಮೇಲೆ ನಂಬಿಕೆ ಇಟ್ಟಿರುವೆ. ನನ್ನ ಮನಸ್ಸಾಕ್ಷಿಯಾಗಿ ನಾವು ಯಾವ ತಪ್ಪೂ ಮಾಡಿಲ್ಲ. ನಾವು ಪ್ರಾಮಾಣಿಕವಾಗಿ ಇದ್ದರೆ ದೇವರ ಆಶೀರ್ವಾದವಿರುತ್ತದೆ. ಅದರಂತೆಯೇ ಶ್ರೀಗಳ ಆಶೀರ್ವಾದದಂತೆ ಆದಷ್ಟು ಬೇಗ ಎಲ್ಲ ಸಮಸ್ಯೆ ಹಾಗೂ ಆರೋಪಗಳಿಂದ ಮುಕ್ತನಾಗುವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
[wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.biskuht.com/wp-content/plugins/wonderplugin-video-embed/engine/playvideo-64-64-0.png”]