ರಾಯಚೂರು: ದೇಶಕ್ಕಾಗಿ ಹೋರಾಡುವ ಪ್ರಸಂಗ ಬಂದ್ರೆ ಸನ್ಯಾಸಿಯೂ ಸೈನಿಕನಾಗ್ತಾನೆ. ಸರ್ಕಾರದ ಜೊತೆ ನಾವಿದ್ದೇವೆ, ಇಡೀ ದೇಶದ ಜನತೆ ಇದ್ದಾರೆ ಅಂತ ಶ್ರೀಶೈಲ ಜಗದ್ಗುರು ಚನ್ನಸಿದ್ದರಾಮ ಪಂಡಿತಾರಾಧ್ಯ ಮಹಾ ಭಗವತ್ಪಾದರು ಹೇಳಿದ್ದಾರೆ.
ಜಿಲ್ಲೆಯ ದೇವದುರ್ಗ ತಾಲೂಕಿನ ವೀರಗೋಟ ಆದಿ ಮೌನೇಶ್ವರ ದೇವಸ್ಥಾನದಲ್ಲಿ ಇಷ್ಟ ಲಿಂಗ ಮಹಾಪೂಜೆ ನೆರವೇರಿಸಿ ಮಾತನಾಡಿದ ಶ್ರೀಗಳು, ನಮ್ಮ ತಂಟೆಗೆ ಬಂದರೆ ನಾವು ಸುಮ್ಮನಿರಲ್ಲಾ ಎನ್ನುವ ಸಂದೇಶ ಕೊಡಬೇಕಾಗಿದೆ ಅಂತ ಹೇಳುವ ಮೂಲಕ ಪುಲ್ವಾಮಾ ಘಟನೆಯನ್ನ ಖಂಡಿಸಿದರು. ನಾವು ಯಾವುದರಲ್ಲಿಯೂ ಕಡಿಮೆ ಇಲ್ಲ, ಈ ದೇಶದಲ್ಲಿ ರೈತ ಕೂಡಾ ಜವಾನ ಆಗ್ತಾನೆ. ಇಡೀ ದೇಶದಲ್ಲಿ ಅಶಾಂತಿ ಸೃಷ್ಟಿಯಾಗಿದೆ ಅಂತ ಶ್ರೀಗಳು ಆತಂಕ ವ್ಯಕ್ತಪಡಿಸಿದ್ದಾರೆ.
Advertisement
Advertisement
ಈ ವೇಳೆ 1 ಲಕ್ಷ 96 ಸಾವಿರ ಇಷ್ಟ ಲಿಂಗ ಪೂಜೆಯಲ್ಲಿ ಪುಲ್ವಾಮದಲ್ಲಿ ನಡೆದ ಉಗ್ರರ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರಿಗೆ ಮೌನಾಚರಣೆ ಮೂಲಕ ಶ್ರದ್ಧಾಂಜಲಿ ಅರ್ಪಿಸಲಾಯಿತು. ಅಲ್ಲದೆ ಮಹಾಲಿಂಗಪೂಜೆಯಲ್ಲಿ ಸುಮಾರು 800 ಮಠಾಧೀಶರು ಹಾಗೂ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಿದ್ದರು.
Advertisement
Advertisement
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv