– ಶ್ರೀರಂಗಪಟ್ಟಣ ಜಾಮಿಯಾ ಮಸೀದಿಯ ವಿವಾದಕ್ಕೆ ಮತ್ತೊಂದು ಟ್ವಿಸ್ಟ್
– ಆರ್ಕಿಯಾಲಜಿ ಸರ್ವೇ ಆಫ್ ಮೈಸೂರು ಪುಸ್ತಕದಲ್ಲಿ ಉಲ್ಲೇಖ
– ದಾಖಲೆಯೊಂದಿಗೆ ಕಾನೂನು ಹೋರಾಟಕ್ಕೆ ಮುಂದಾದ ಹಿಂದೂ ಸಂಘಟನೆಗಳು
ಮಂಡ್ಯ: ಶ್ರೀರಂಗಪಟ್ಟಣದ ಜಾಮಿಯಾ ಮಸೀದಿಯ ವಿವಾದಕ್ಕೆ ದಿನಕ್ಕೊಂದು ತಿರುವು ದೊರೆಯುತ್ತಿದೆ. ಮೊನ್ನೆ ಈ ವಿವಾದದ ಸಂಬಂಧ ದಶಕಗಳ ಹಿಂದಿನ ಪುಸ್ತಕವೊಂದು ಪತ್ತೆಯಾಗಿತ್ತು. ಇದೀಗ ಈ ವಿಚಾರ ಸಂಬಂಧ ಪುರಾತ್ವ ಇಲಾಖೆಗೆ ಸಂಬಂಧಿಸಿದ ದಾಖಲೆಯೊಂದು ಲಭ್ಯವಾಗಿದ್ದು ಹಿಂದೂ ಸಂಘಟನೆಗಳಿಗೆ ಪ್ರಮುಖ ಅಸ್ತ್ರ ಸಿಕ್ಕಿದಂತಾಗಿದೆ.
Advertisement
Advertisement
ಮೊನ್ನೆಯಷ್ಟೇ ದಶಕಗಳ ಹಿಂದೆ ಬಾಲಗಣಪತಿ ಭಟ್ಟ ಎಂಬವರು ಬರೆದಿದ್ದ ಮೂಡಲ ಬಾಗಿಲು ಶ್ರೀ ಆಂಜನೇಯಸ್ವಾಮಿ ಸುಪ್ರಭಾತ ಎಂಬ ಪುಸ್ತಕ ದೊರೆತಿತ್ತು. ಈ ಪುಸ್ತಕದಲ್ಲಿ ಟಿಪ್ಪು ಸುಲ್ತಾನ್ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಸ್ಥಾನವನ್ನು ಕೆಡವಿ ಅಲ್ಲಿದ್ದ ವಿಗ್ರಹವನ್ನು ಕಾವೇರಿ ನದಿಗೆ ಎಸೆದು ಜಾಮಿಯಾ ಮಸೀದಿ ನಿರ್ಮಾಣ ಮಾಡಿದ್ದಾನೆ ಎಂದು ಉಲ್ಲೇಖವಾಗಿತ್ತು. ಇದನ್ನೂ ಓದಿ: ಶ್ರೀರಂಗಪಟ್ಟಣ ಜಾಮಿಯಾ ವಿವಾದಕ್ಕೆ ಪುಸ್ತಕದಿಂದ ಟ್ವಿಸ್ಟ್ – ಅರ್ಚಕರ ಕೈ ಕತ್ತರಿಸಿ ಕಾವೇರಿಗೆ ವಿಗ್ರಹ ಎಸೆಯಲಾಗಿತ್ತು!
Advertisement
Advertisement
ಈ ಪುಸ್ತಕ ದೊರೆತ ನಂತರ ಇದೀಗ ಪ್ರಧಾನಿ ಮೋದಿ ಮಂಚ್ ವಿಚಾರ ವೇದಿಕೆ ಇನ್ನೊಂದು ಅಧಿಕೃತ ದಾಖಲೆಯನ್ನು ಬಿಡುಗಡೆ ಮಾಡಿದೆ. 1912ರಲ್ಲಿ ಪ್ರಕಟವಾದ ಆರ್ಕಿಯಾಲಜಿ(ಪುರಾತತ್ತ್ವ ಶಾಸ್ತ್ರ) ಸರ್ವೇ ಆಫ್ ಮೈಸೂರು ಪುಸ್ತಕದಲ್ಲಿ ಜಾಮಿಯಾ ಮಸೀದಿ ಸ್ಥಾಪನೆಯ ಬಗ್ಗೆ ಮಾಹಿತಿ ನೀಡಲಾಗಿದೆ.
ಪುಸ್ತಕದಲ್ಲಿ ಏನಿದೆ?
ಟಿಪ್ಪು ಸುಲ್ತಾನ್ ಮಸೀದಿ ಮತ್ತು ಮಿನಾರ್ ನಿರ್ಮಾಣದ ಉದ್ದೇಶದಿಂದ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಸ್ಥಾನವನ್ನು ನಾಶಪಡಿಸಿ ಜಾಮಿಯಾ ಮಸೀದಿ ನಿರ್ಮಾಣ ಮಾಡಿದ್ದಾನೆ. ಇಲ್ಲಿದ್ದ ಮೂಡಲ ಬಾಗಿಲು ಆಂಜನೇಯಸ್ವಾಮಿ ವಿಗ್ರಹವನ್ನು ಕಾವೇರಿ ನದಿಯ ಗೌರಿಘಡ ಎಂಬಲ್ಲಿ ಎಸೆಯಲಾಗಿತ್ತು. ಟಿಪ್ಪು ಸುಲ್ತಾನ್ ನಿಧನದ ನಂತರ ದಳವಾಯಿ ದೊಡ್ಡಯ್ಯ ದೇಣಿಗೆ ಸಂಗ್ರಹಿಸಿ ಶ್ರೀರಂಗಪಟ್ಟಣದ ಪೇಟೆ ಬೀದಿಯಲ್ಲಿ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಸ್ಥಾನದ ಮರುಸ್ಥಾಪನೆ ಮಾಡಿದ್ದಾನೆ ಎಂಬ ಅಂಶವಿದೆ.
ಪಠ್ಯದಿಂದ ಕೈಬಿಡಿ:
ಈ ಪುಸ್ತಕದಿಂದ ಟಿಪ್ಪು ಸುಲ್ತಾನ್ ವಿಗ್ರಹ ಭಂಜಕ ಎಂದು ರುಜುವಾತು ಮಾಡುತ್ತದೆ. ಹೀಗಾಗಿ ಟಿಪ್ಪು ಸುಲ್ತಾನ್ ಬಗ್ಗೆ ಪಠ್ಯ ಪುಸ್ತಕದ ವಿಚಾರಗಳನ್ನು ಕೈ ಬಿಡಬೇಕೆಂದು ಮೋದಿ ವಿಚಾರ ಮಂಚ್ ವೇದಿಕೆಯ ಪದಾಧಿಕಾರಿಗಳು ಈಗ ಸರ್ಕಾರವನ್ನು ಆಗ್ರಹ ಮಾಡುತ್ತಿದ್ದಾರೆ.
ಕಾನೂನು ಹೋರಾಟ:
ಆರ್ಕಿಯಾಲಜಿ ಸರ್ವೇ ಆಫ್ ಮೈಸೂರು ಪುಸ್ತಕದಲ್ಲಿ ಇರುವ ದಾಖಲೆಯನ್ನು ಇಟ್ಟುಕೊಂಡು ಕಾನೂನು ಹೋರಾಟ ಮಾಡಲು ಈಗ ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಮುಂದಾಗಿದ್ದಾರೆ.