ಮತ್ತೆ ಮುನ್ನೆಲೆಗೆ ಶ್ರೀರಂಗಪಟ್ಟಣ ಜಾಮಿಯಾ ಮಸೀದಿ ವಿವಾದ – ನಾಳೆ ಹೈಕೋರ್ಟ್‌ನಲ್ಲಿ ವಿಚಾರಣೆ

Public TV
2 Min Read
jamia masjid mandya 1

ಮಂಡ್ಯ: ಸಕ್ಕರೆ ನಾಡು ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿನ ಜಾಮಿಯಾ ಮಸೀದಿಯ (Jamia Mosque) ವಿವಾದ ಹಲವು ವರ್ಷಗಳಿಂದ‌ ಕೇಳಿ ಬರುತ್ತಿದೆ. ಟಿಪ್ಪು ಸುಲ್ತಾನ್ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇಗುಲ ಕೆಡವಿ ಜಾಮಿಯಾ ಮಸೀದಿ ನಿರ್ಮಾಣ ಮಾಡಿದ್ದಾನೆ. ಮತ್ತೆ ಮಸೀದಿ ಜಾಗದಲ್ಲಿ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇಗುಲ ನಿರ್ಮಾಣ ಮಾಡಬೇಕೆಂದು ಹಲವು ವರ್ಷಗಳಿಂದ ಹಿಂದೂ ಸಂಘಟನೆಗಳ ಕಾರ್ಯಕರ್ತರು, ಹನುಮಂತ ಭಕ್ತರು ಪ್ರತಿಭಟನೆ ಹಾಗೂ ಬೃಹತ್ ಹನುಮ ಸಂಕೀರ್ತನಾ ಯಾತ್ರೆಯ ಮೂಲಕ ಹೋರಾಟ ಮಾಡಿದ್ದರು. ಇದೀಗ ಭಜರಂಗ ಸೇನೆ 101 ಹನುಮ ಭಕ್ತರ ಮೂಲಕ ಹೈಕೋರ್ಟ್‌ನಲ್ಲಿ ದಾವೆ ಹೂಡಿದೆ.

jamia masjid mandya

ಇಷ್ಟು ದಿನಗಳ ಕಾಲ ಪ್ರತಿಭಟನೆಗಳ ಮೂಲಕ‌ ಹೋರಾಟ ನಡೆಸುತ್ತಿದ್ದ ಹಿಂದೂ ಸಂಘಟನೆಗಳ ಕಾರ್ಯಕರ್ತರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಪಾರಂಪರಿಕ ಕಟ್ಟದಲ್ಲಿ ಮದರಸವನ್ನು ನಡೆಸಲಾಗುತ್ತಿದೆ. ಅಲ್ಲದೇ ಜಾಮಿಯಾ ಒಂದು ಮಸೀದಿಯಲ್ಲ. ಇದು ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಸ್ಥಾನ. ಟಿಪ್ಪು ಸುಲ್ತಾನ್ ದೇವಸ್ಥಾನ ಕೆಡವಿ ಜಾಮಿಯಾ ಮಸೀದಿಯನ್ನು ನಿರ್ಮಾಣ ಮಾಡಿದ್ದಾನೆ. ಇದು ದೇವಸ್ಥಾನ ಎನ್ನಲು ಇಲ್ಲಿನ ಗೋಡೆಗಳಲ್ಲಿ ಇರುವ ಹಿಂದೂ ದೇವಸ್ಥಾನ ಕಲ್ಲುಗಳು, ಕೆತ್ತನೆಗಳು. ಅಲ್ಲದೇ ಮಸೀದಿಯ ಒಳ ಭಾಗದಲ್ಲಿಯೇ ಹಿಂದೂ ದೇವಸ್ಥಾನದ ಕಲ್ಯಾಣಿ ಹಾಗೂ ಗೋಪುರದಲ್ಲಿ ಕಳಶ ಇದೆ. ಇವುಗಳು ಇದು ಮಸೀದಿಯಲ್ಲ ಮಂದಿರ ಎಂದು ನಿರೂಪಿಸುತ್ತವೆ. ಹೀಗಾಗಿ ಜಾಮಿಯಾ ಮಸೀದಿಯ ಜಾಗದಲ್ಲಿ ಮೊದಲು ಇದ್ದ ಮೂಡಲ ಬಾಗಿಲು ಆಂಜನೇಯಸ್ವಾಮಿ ದೇವಸ್ಥಾನ ಸ್ಥಾಪನೆಗೆ ಸರ್ವೇ ನಡೆಸಿ ಅವಕಾಶ ಕಲ್ಪಿಸಿಕೊಡಬೇಕೆಂದು ಭಜರಂಗ ಸೇನೆ ಹೈಕೋರ್ಟ್‌ಗೆ ದಾವೆ ಹೂಡಿದೆ. ಇದನ್ನೂ ಓದಿ: ಪ್ರಸಿದ್ಧ ವಿಭೂತಿ ಫಾಲ್ಸ್‌ಗೆ ಪ್ರವಾಸಿಗರಿಗೆ ನಿರ್ಬಂಧ

HIGHCOURT

ಕೇಸ್‌ನ್ನು ಹೈಕೋರ್ಟ್ ಫೈಲ್ ಮಾಡಿಕೊಂಡಿದೆ. ಈಗಾಗಲೇ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಮಂಡ್ಯ ಡಿಸಿ, ವಕ್ಫ್ ಹಾಗೂ ಧಾರ್ಮಿಕ ದತ್ತಿ ಇಲಾಖೆಗಳಿಗೆ ಕೋರ್ಟ್ ನೋಟೀಸ್ ನೀಡಿದೆ. ಈ ಕೇಸ್‌ ಸಂಬಂಧ ಮೊದಲ ವಾದ-ಪ್ರತಿವಾದಗಳು ಜು.11 (ನಾಳೆ) ರಂದು ನಡೆಯಲಿದೆ. ಅಂದು ನೋಟಿಸ್ ನೀಡಿರುವ ಎಲ್ಲಾ ಇಲಾಖೆಯ ಮುಖ್ಯಸ್ಥರು ಕೋರ್ಟ್‌ಗೆ ಬರುವಂತೆ ನ್ಯಾಯಾಧೀಶರು ಕೋರಿದ್ದಾರೆ.

ಶ್ರೀರಂಗಪಟ್ಟಣದ ಜಾಮಿಯಾ ಮಸೀದಿ ಸಂಬಂಧ ಇಷ್ಟು ದಿನಗಳ ಕಾಲ ಪ್ರತಿಭಟನೆ ಮೂಲಕ ಹೋರಾಟ ನಡೆಸುತ್ತಿದ್ದ ಹಿಂದೂ ಸಂಘಟನೆಗಳು ಇದೀಗ ನ್ಯಾಯಾಲಯದ ಮೊರೆ ಹೋಗಿವೆ. ಇದನ್ನೂ ಓದಿ: ವಾಲ್ಮೀಕಿ ನಿಗಮದ ಬಹುಕೋಟಿ ಹಗರಣ ಕೇಸ್; ಕಾಂಗ್ರೆಸ್‌ ಮಾಜಿ ಸಚಿವ ನಾಗೇಂದ್ರ ಇಡಿ ವಶಕ್ಕೆ!

Share This Article