ಬೆಂಗಳೂರು: ಶ್ರೀರಾಮುಲು (Sriramulu) ಕಾಂಗ್ರೆಸ್ (Congress) ಸೇರ್ಪಡೆಗೆ ನಾವು ಒತ್ತಡ ಹಾಕಲ್ಲ. ಪಕ್ಷ ಸಿದ್ಧಾಂತ ಒಪ್ಪಿ ಬಂದರೆ ಸ್ವಾಗತ ಮಾಡ್ತೇವೆ ಎಂದು ಸಹಕಾರ ಸಚಿವ ಕೆ.ಎನ್ ರಾಜಣ್ಣ (KN Rajanna) ಹೇಳಿದರು.
ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶ್ರೀರಾಮುಲು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆಯೇ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿದರು. ಶ್ರೀರಾಮುಲು ಕಾಂಗ್ರೆಸ್ ಸೇರ್ಪಡೆಗೆ ನಾವು ಒತ್ತಡ ಹಾಕಲ್ಲ. ಪಕ್ಷ ಸಿದ್ಧಾಂತ ಒಪ್ಪಿ ಬಂದರೆ ಸ್ವಾಗತ ಮಾಡ್ತೇವೆ. ರಾಜಕಾರಣ ನಿಂತ ನೀರಲ್ಲ. ಹಾಗೆಯೇ ಮೇಲಿನಿಂದ ಹರಿಯುವ ನೀರನ್ನು ಕೆಳಗೆ ನಿಂತು ನೋಡಲು ಆಗೋದಿಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಸರಿಗಮಪ ಖ್ಯಾತಿಯ ಅಂಧ ಗಾಯಕಿ ಮಂಜಮ್ಮ ನಿಧನ
Advertisement
Advertisement
ಇದೇ ವೇಳೆ ಶಾಸಕರಿಗೆ ಅನುದಾನ ಬಿಡುಗಡೆ ಕೊರತೆ ವಿಚಾರವಾಗಿ ಮಾತನಾಡಿ, ಶಾಸಕರು ಕೇಳುತ್ತಾ ಇರೋದು ನ್ಯಾಯ ಸಮ್ಮತವಾಗಿಯೇ ಇದೆ. ಶಾಸಕರು ಅವರ ಮನೆಗೆ ಏನೂ ಅನುದಾನ ಕೇಳ್ತಿಲ್ಲ. ಹಂತ-ಹಂತವಾಗಿ ಅವರಿಗೆ ಅನುದಾನ ಬಿಡುಗಡೆ ಮಾಡುವ ಕೆಲಸವನ್ನು ನಮ್ಮ ಸರ್ಕಾರ ಮಾಡುತ್ತದೆ ಎಂದರು. ಇದನ್ನೂ ಓದಿ: Union Budget: 10 ಆದಾಯ ತೆರಿಗೆ ಬದಲಾವಣೆಗಳು – ಮಧ್ಯಮ ವರ್ಗದವರ ಬೇಡಿಕೆಗಳೇನು?
Advertisement
ಸಿಎಂ ಪತ್ನಿ ಹಾಗೂ ಸಚಿವ ಬೈರತಿ ಸುರೇಶ್ಗೆ ಇಡಿ ನೋಟಿಸ್ ವಿಚಾರವಾಗಿ ಮಾತನಾಡಿ, ಇಡಿ ನೋಟಿಸ್ ರಾಜಕೀಯ ಪ್ರೇರಿತವಾಗಿದೆ. ನೋಟಿಸ್ ಕೊಟ್ಟಿರುವ ಸತ್ಯಾಸತ್ಯತೆ ವಿಚಾರ ಕೋರ್ಟ್ ಮುಂದೆ ಬಂದಿದೆ. ಕೋರ್ಟ್ನಲ್ಲಿರುವ ವಿಚಾರದ ಬಗ್ಗೆ ನಾನು ಈಗಲೇ ಏನೂ ಮಾತಾಡಲ್ಲ ಎಂದು ಹೇಳಿದರು. ಇದನ್ನೂ ಓದಿ: ಅಟ್ರಾಸಿಟಿ ಕೇಸ್ನಲ್ಲಿ ದೌರ್ಜನ್ಯಕ್ಕೀಡಾದವರಿಗೆ ನ್ಯಾಯ ಒದಗಿಸಿ – ಸಿಎಂ ಖಡಕ್ ಸೂಚನೆ
Advertisement
ಸಿಬಿಐಗೆ ತನಿಖೆಗೆ ಕೊಟ್ಟರೆ ಕಷ್ಟ ಆಗುತ್ತೆ ಎಂಬ ವಿಚಾರ ನೋಡಿದರೆ ಕಾನೂನು ಎಲ್ಲರಿಗೂ ಒಂದೇ. ಅವರಿಗೆ ಒಂದು ಇವರಿಗೊಂದು ಅಂತ ಎರಡು ಕಾನೂನು ಇರಲ್ಲ. ಸಿಬಿಐ ಕೇಂದ್ರದ ಹೋಮ್ ಮಿನಿಸ್ಟರ್ ಅಧೀನದಲ್ಲಿ ಇರುತ್ತದೆ. ಒಂದೊಂದು ತನಿಖಾ ಸಂಸ್ಥೆ ಒಬ್ಬೊಬ್ಬರ ಅಧೀನದಲ್ಲಿರುತ್ತದೆ. ಆ ಸಂಸ್ಥೆಗಳು ಸ್ವಾಯತ್ತ ತನಿಖೆ ಸಂಸ್ಥೆಗಳಾಗಿ ಕಾರ್ಯ ನಿರ್ವಹಿಸುತ್ತದೆ ಎಂದರು. ಇದನ್ನೂ ಓದಿ: ಫೈನಾನ್ಸ್ ಕಿರುಕುಳ: 3 ವರ್ಷ ಜೈಲು, 1 ಲಕ್ಷದ ವರೆಗೆ ದಂಡ – ಗುರುವಾರ ಸರ್ಕಾರದಿಂದ ಸುಗ್ರೀವಾಜ್ಞೆ
ಎಸ್ಸಿಎಸ್ಟಿ ಹಣವನ್ನ ಸಮರ್ಪಕವಾಗಿ ಬಳಸಿಕೊಂಡಿಲ್ಲ ಎಂಬ ಆರ್. ಅಶೋಕ್ ಆರೋಪ ವಿಚಾರವಾಗಿ ಮಾತನಾಡಿ, ಅವರ ಕಾಲದಲ್ಲಿ ಎಷ್ಟು ಉಪಯೋಗಿಸಿಕೊಂಡಿದ್ದಾರೆ. ವಿಪಕ್ಷದಲ್ಲಿ ಇದ್ದಾರೆ ಅದಕ್ಕೆ ಆರೋಪ ಮಾಡುತ್ತಿದ್ದಾರೆ ಇದು ಅವರ ಚಾಳಿಯಾಗಿದೆ. ಎಸ್ಸಿಎಸ್ಟಿಗೆ ಏನು ಅನುದಾನ ಕೊಡಬೇಕೋ ಅದನ್ನು ಕೊಟ್ಟಿದ್ದೇವೆ. ಉಳಿದಿದ್ದು ಮಾರ್ಚ್ 31ರ ಒಳಗಾಗಿ ಕೊಡುತ್ತೇವೆ ಎಂದು ಹೇಳಿದರು. ಇದನ್ನೂ ಓದಿ: PUBLiC TV Impact | ಹಾಲಿಗೆ ನೀರು ಕಲಬೆರಕೆ ಮಾಡಿರೋದು ತನಿಖೆಯಲ್ಲಿ ಧೃಢ – ಸಿಬ್ಬಂದಿ, ಅಧಿಕಾರಿಗಳು ವಜಾ
ಕೆಪಿಸಿಸಿ ಅಧ್ಯಕ್ಷರ ಬಗ್ಗೆ ಮಾತಾಡೋ ರಾಜಣ್ಣ ಅವರಿಂದ ಡ್ಯಾಮೇಜ್ ಆಗ್ತಿದೆ ಎಂಬ ಕಡೂರು ಶಾಸಕ ಆನಂದ ಆರೋಪಕ್ಕೆ ಪ್ರತಿಕ್ರಿಯಿಸಿ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರವರ ಅಭಿಪ್ರಾಯ ಹೇಳಲು ಸರ್ವರಿಗೂ ಸ್ವತಂತ್ರರಿದ್ದಾರೆ. ಅವರು ಹೇಳಿಕೊಂಡರೆ ನಮ್ಮ ಆಕ್ಷೇಪ ಇಲ್ಲ ಎಂದರು. ಇದನ್ನೂ ಓದಿ: ಮುಡಾ ಕೇಸ್ನಲ್ಲಿ ಇಡಿ ತನಿಖೆಯೇ ಕಾನೂನುಬಾಹಿರ – ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ
ಹೈಕಮಾಂಡ್ನಿಂದ ಸಿಎಂ ಆಯ್ಕೆ ಎಂಬ ವಿಚಾರವಾಗಿ ಮಾತನಾಡಿ, ಶಾಸಕರನ್ನು ಕೇಳಿ ಹೈಕಮಾಂಡ್ ನಿರ್ಣಯ ತೆಗೆದುಕೊಳ್ಳುತ್ತದೆ. ಶಾಸಕರ ಅಭಿಪ್ರಾಯ ಏನೇ ಇದ್ರೂ 138 ಜನ ಒಂದೇ ಅಭಿಪ್ರಾಯ ಹೇಳಲ್ಲ. ಅಂತಿಮವಾಗಿ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಖರ್ಗೆ ಅವರು ಹೇಳಿದ ಮೇಲೆ ಏನು ಮಾತಾಡೋದಕ್ಕೆ ಹೋಗೋದಿಲ್ಲ. ಪಕ್ಷ ನಾಯಕತ್ವದ ಬಗ್ಗೆ ಎಲ್ಲಾ ಹೈಕಮಾಂಡ್ ನಿರ್ಧಾರ ಕೈಗೊಳ್ಳುತ್ತೆನ ಎಂದರು. ಇದನ್ನೂ ಓದಿ: ಚಾಮರಾಜನಗರ: ಬೋನಿಗೆ ಬಿದ್ದ ಚಿರತೆ – ಜನ ನಿಟ್ಟುಸಿರು
ಒನ್ ಮ್ಯಾನ್ ಒನ್ ಪೋಸ್ಟ್ ವಿಚಾರವಾಗಿ ಸಚಿವರು ಮಾತನಾಡಿ, ಯಾರಿಗೆ ಯಾವುದು ಅನ್ವಯ ಆಗುತ್ತದೆ ಎಂದು ಹೈಕಮಾಂಡ್ ನಿರ್ಧಾರ ಮಾಡುತ್ತದೆ. ಅದನ್ನು ನಾವು ಒಪ್ಪಬೇಕಾಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: Coldplay | ಭಾರತದಲ್ಲಿ ಸಂಗೀತ ಕಚೇರಿ ಆರ್ಥಿಕತೆಗೆ ವಿಶಾಲವಾದ ಅವಕಾಶಗಳಿವೆ, ಉದ್ಯೋಗ ಸೃಷ್ಟಿಸುತ್ತೆ: ಮೋದಿ