LatestDistrictsKarnatakaKoppalMain Post

ದೇಶಕ್ಕೆ ತೊಂದ್ರೆ ಆದಾಗ RSS ಏನು ಅಂತ ತೋರಿಸುತ್ತದೆ: ಶ್ರೀ ರಾಮುಲು

ಕೊಪ್ಪಳ: ದೇಶಕ್ಕೆ ತೊಂದರೆ ಆದಾಗ ಆರ್‌ಎಸ್‌ಎಸ್‌ ಸಂಘಟನೆ ಏನು ಅಂತ ತೋರಿಸುತ್ತದೆ ಎಂದು ಸಾರಿಗೆ ಸಚಿವ ಶ್ರೀರಾಮುಲು ಹೇಳಿದ್ದಾರೆ.

ಜಿಲ್ಲೆಯ ಗಂಗಾವತಿ ತಾಲೂಕಿನ ಪಂಪಾ ಸರೋವರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಸೈನಿಕರ ತರಹ ಆರ್‌ಎಸ್‌ಎಸ್‌ ಕೆಲಸ ಮಾಡುತ್ತಿದೆ. ಕುಮಾರಸ್ವಾಮಿ ನಾಲಿಗೆ ಇಲ್ಲದಂತೆ ಮಾತಾನಾಡುತ್ತಿದ್ದಾರೆ. ಅವರಿಗೆ ನಾನು ಉತ್ತರ ಕೊಡಲ್ಲ ಎಂದರು.

ದೇಶಕ್ಕೆ ತೊಂದ್ರೆ ಆದಾಗ RSS ಏನು ಅಂತ ತೋರಿಸುತ್ತದೆ: ಶ್ರೀ ರಾಮುಲು

ಭಯೋತ್ಪಾದಕರಿಂದ, ದೇಶಕ್ಕೆ ಕುತ್ತು ಬಂದಾಗ ಆರ್‌ಎಸ್‌ಎಸ್‌ ಕೆಲಸ ಮಾಡುತ್ತದೆ. ಆರ್‌ಎಸ್‌ಎಸ್‌ ಅನ್ನೋದು Ready for selfless service ಇದ್ದಂತೆ ಎಂದು ಹೇಳುವ ಮಾತಿನ ಭರದಲ್ಲಿ ಸೇಲ್ಪ್‍ಲೆಸ್ ಅನ್ನುವ ಬದಲು helpless ಸರ್ವೀಸ್ ಎಂದ ಉಚ್ಚಾರಿಸಿದರು. ಇದನ್ನೂ ಓದಿ: ಬಜರಂಗದಳ ಕಾರ್ಯಕರ್ತರ ಮೇಲೆ ಹಲ್ಲೆ- ನಾಳೆ ತುಮಕೂರು ಬಂದ್

ದೇಶಕ್ಕೆ ತೊಂದ್ರೆ ಆದಾಗ RSS ಏನು ಅಂತ ತೋರಿಸುತ್ತದೆ: ಶ್ರೀ ರಾಮುಲು

ಬಡವರಿಗೆ ಆರ್‌ಎಸ್‌ಎಸ್‌ ಅನೇಕ ಸಹಾಯ ಮಾಡಿದೆ. ಆರ್‌ಎಸ್‌ಎಸ್‌ ದೇಶ ಕಟ್ಟುವ ಕೆಲಸ ಮಾಡುತ್ತಿದೆ. ಹಿಂದೂ ಅನ್ನುವ ಪ್ರತಿ ವ್ಯಕ್ತಿಗೆ ಆರ್‌ಎಸ್‌ಎಸ್‌ ಗೊತ್ತು. ರಾಜಕಾರಣಕ್ಕಾಗಿ ಅವರೆಲ್ಲ ಟೀಕೆ ಮಾಡುತ್ತಿದ್ದಾರೆ. ಆರ್‌ಎಸ್‌ಎಸ್‌ ಟೀಕೆ ಮಾಡುವುದು ಶೋಭೆ ತರುವ ಕೆಲಸ ಅಲ್ಲ. ನಾನು ವೈಯಕ್ತಿಕ ವಿಚಾರ ಮಾತಾಡಲ್ಲ. ನಮ್ಮ ಪ್ರಧಾನ ಮಂತ್ರಿ ಬಗ್ಗೆನೂ ಮಾತಾಡೋದು ತಪ್ಪು ಎಂದು ಹೇಳಿದರು.

ದೇಶಕ್ಕೆ ತೊಂದ್ರೆ ಆದಾಗ RSS ಏನು ಅಂತ ತೋರಿಸುತ್ತದೆ: ಶ್ರೀ ರಾಮುಲು

ಇದೇ ವೇಳೆ ಸಿಂಧಗಿ ಹಾನಗಲ್‍ನಲ್ಲಿ ನಾವು ಗೆಲ್ಲುತ್ತೇವೆ. ಆದರೆ ಎಷ್ಟು ಅಂತರದಲ್ಲಿ ಗೆಲ್ಲುತ್ತೇವೆ ಎನ್ನುವುದು ಮುಖ್ಯ. ಇಂದು ನಾನು ಸಿಂಧಗಿಗೆ ಹೋಗುತ್ತಿದ್ದೇನೆ ಈಗಾಗಲೇ ಬೊಮ್ಮಾಯಿ, ಯಡಿಯೂರಪ್ಪ ಇಬ್ಬರು ಪ್ರಚಾರ ಮಾಡುತ್ತಿದ್ದಾರೆ ಎಂದರು. ಇದನ್ನೂ ಓದಿ: ಪ್ರಿಯಾಂಕಾ ಗಾಂಧಿ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದ ಪೊಲೀಸರ ವಿರುದ್ಧ ಕ್ರಮ

ದೇಶಕ್ಕೆ ತೊಂದ್ರೆ ಆದಾಗ RSS ಏನು ಅಂತ ತೋರಿಸುತ್ತದೆ: ಶ್ರೀ ರಾಮುಲು

ಎಸ್‍ಟಿ ಮೀಸಲಾತಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, 7.5 ಮೀಸಲಾತಿ ವಿಚಾರದಿಂದ ನಾವು ಹಿಂದೆ ಬರಲ್ಲ. ಸ್ವಲ್ಪ ಕಾನೂನು ತೊಡಕು ಇದೆ. ಇದು ಬಗೆಹರಿದ ತಕ್ಷಣ ಕ್ಲೀಯರ್ ಆಗುತ್ತದೆ ಎಂದು ನುಡಿದರು. ಇದನ್ನೂ ಓದಿ: ಅಲ್ಪಸಂಖ್ಯಾತರ ಬಗ್ಗೆ ಬಿಜೆಪಿ ದ್ವಂದ್ವ ನೀತಿ: ಹೆಚ್‍ಡಿಕೆ ತರಾಟೆ

ದೇಶಕ್ಕೆ ತೊಂದ್ರೆ ಆದಾಗ RSS ಏನು ಅಂತ ತೋರಿಸುತ್ತದೆ: ಶ್ರೀ ರಾಮುಲು

ಬಿಜೆಪಿಯಲ್ಲಿ ಬಿಎಸ್‍ವೈ ಸೈಡ್ ಲೈನ್ ಆಗ್ತಾರೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ, ಯಡಿಯೂರಪ್ಪ ಶಕ್ತಿ ಇದ್ದಂತೆ, ಅವರು ಸೈಡಲೈನ್ ಆಗಲ್ಲ. ಅದರಂತೆ ರಾಮಲುರನ್ನು ಸಹ ಸೈಡ್‍ಲೈನ್ ಮಾಡುವುದಕ್ಕೆ ಆಗಲ್ಲ. ನಾನು ಜನರ ಮಧ್ಯೆದಿಂದ ಬಂದಿರುವ ವ್ಯಕ್ತಿ ಯಾವುದೇ ಕಾರಣಕ್ಕೂ ಸೈಡಲೈನ್ ಮಾಡುವುದಕ್ಕೆ ಆಗಲ್ಲ ಎಂದು ಟೀಕಾಕಾರರಿಗೆ ನೇರವಾಗಿ ಉತ್ತರ ನೀಡಿದರು.

Related Articles

Leave a Reply

Your email address will not be published. Required fields are marked *