ಗದಗ: ಕಾಂಗ್ರೆಸ್‍ನವರು ಸುಳ್ಳಿನ ಫ್ಯಾಕ್ಟರಿ ಇದ್ದಂತೆ. ಸತ್ಯಕ್ಕೆ ದೂರವಾದದ್ದನ್ನು ಮಾತನಾಡುತ್ತಾರೆ. ಸಿದ್ದರಾಮಯ್ಯ ಅವರು ಹೊಸ ಟ್ರೆಂಡ್ ಆರಂಭಿಸಿದ್ದಾರೆ. ಅವರ ಬೂಟಾಟಿಕೆ ನೋಡುತ್ತಿದ್ದೇವೆ ಜನರಲ್ಲಿ ಗೊಂದಲ ಸೃಷ್ಟಿ ಮಾಡಲು ಮುಂದಾಗಿದ್ದಾರೆ ಎಂದು ಸಚಿವ ಬಿ.ಶ್ರೀರಾಮುಲು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
Advertisement
ಗದಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಜನ ಸ್ವರಾಜ್ ಯಾತ್ರೆ ಮೂಲಕ ಪರಿಷತ್ ಚುನಾವಣೆ ಪ್ರಚಾರ ಮಾಡುತ್ತಿದ್ದೇವೆ. ನಾಲ್ಕು ತಂಡಗಳಲ್ಲಿ ಇಂದಿನಿಂದ ಯಾತ್ರೆ ಆರಂಭವಾಗಲಿದೆ. ಸುನಾಮಿ, ಸುಂಟರಗಾಳಿ, ಬಿರುಗಾಳಿ ಅಲೆ ಕಾಂಗ್ರೆಸ್ ಪಕ್ಷಕ್ಕೆ ಸೀಮಿತ. ಪರಿಷತ್ ಚುನಾವಣೆಯಲ್ಲಿ ಬಿರುಗಾಳಿ, ಸುಂಟರಗಾಳಿ ಅಲೆಗೆ ಕಾಂಗ್ರೆಸ್ ಕೊಚ್ಚಿ ಹೋಗುತ್ತದೆ. ಅವರು ಚುನಾವಣೆಗಾಗಿ 2023 ವರೆಗೆ ಕಾಯುವ ಅಗತ್ಯ ಇಲ್ಲ. ಕಾಂಗ್ರೆಸ್‍ಗೆ ಈ ಚುನಾವಣೆಯಲ್ಲೇ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಆಹಾರದಲ್ಲಿ ವಿಷ ಬೆರೆಸಿ ಐದು ನಾಯಿಮರಿಗಳನ್ನು ಕೊಂದ್ರು
Advertisement
Advertisement
ಸಿದ್ದರಾಮಯ್ಯನವರು ಬಿಟ್‍ಕಾಯಿನ್ ಬಗ್ಗೆ ದಾಖಲೆ ಸಲ್ಲಿಸುವುದಾಗಿ ಮೊದಲು ಹೇಳಿದ್ದರು ಆದರೆ ಇದೀಗ ಆ ರೀತಿ ಹೇಳಿಲ್ಲ ಎನ್ನುತ್ತಿದ್ದಾರೆ. ಅವರಲ್ಲೇ ಹೊಂದಾಣಿಕೆ ಇಲ್ಲ, ಕಾಂಗ್ರೆಸ್ ಮನೆಯೊಂದು ಮೂರು ಬಾಗಿಲು ಆಗಿದೆ. ಸಿದ್ದರಾಮಯ್ಯ, ಪರಮೇಶ್ವರ್, ಡಿಕೆಶಿ ಅಂತಾ ಮೂರು ಬಾಗಿಲು ಆಗಿದ್ದಾರೆ. ಮೊದಲು ಅವರ ಮನೆಯನ್ನು ಸರಿ ಮಾಡಿಕೊಳ್ಳಲಿ ನಂತರ ನಮ್ಮ ಬಗ್ಗೆ ಮಾತನಾಡಲಿ ಎಂದು ಗುಡುಗಿದರು. ಇದನ್ನೂ ಓದಿ: ಸ್ವಂತ ಮಕ್ಕಳನ್ನು 50,000 ರೂ.ಗೆ ಮಾರಾಟ ಮಾಡಿದ ಪೊಲೀಸ್ – ವೀಡಿಯೋ ವೈರಲ್
Advertisement
ಬಿಟ್ ಕಾಯಿನ್ ಪ್ರಕರಣ ಕುರಿತು ಕುರಿತು ಮಾತನಾಡಿ, ಕೇವಲ ರಾಜಕೀಯಕ್ಕಾಗಿ ಬಿಜೆಪಿ ವಿರುದ್ಧ ಆರೋಪ ಮಾಡುವುದಕ್ಕೆ ಸಿದ್ದರಾಮಯ್ಯ ಮಾತನಾಡುತ್ತಿದ್ದಾರೆ. ಬಿಟ್ ಕಾಯಿನ್ ಆರೋಪಿಯನ್ನು ಅರೆಸ್ಟ್ ಮಾಡಿ ತನಿಖೆ ನಡೆಸಲಾಗುತ್ತಿದೆ. ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತದೆ. ಇಡಿ, ಎನ್ಫೋರ್ಮೆಂಟ್ ತನಿಖೆಗೆ ವಹಿಸಲಾಗಿದೆ ಎಂದು ತಿಳಿಸಿದರು.