ಬಳ್ಳಾರಿ: ರಾಹುಲ್ ಗಾಂಧಿ (Rahul Gandhi) ಅವರ ಭಾರತ್ ಜೋಡೋ (Bharat Jodo Yatra) ಪಾದಯಾತ್ರೆ ಹಿನ್ನೆಲೆಯಲ್ಲಿ ನಿನ್ನೆ ಗಣಿ ನಾಡು ಬಳ್ಳಾರಿಯಲ್ಲಿ ಐಕ್ಯತಾ ಯಾತ್ರೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಲಕ್ಷಾಂತರ ಜನ ಸಮಾವೇಶಕ್ಕೆ ಆಗಮಿಸಿದ್ದರು. ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ನಡೆದ ಭಾರತ್ ಜೋಡೋ ಪಾದಯಾತ್ರೆಯ ಬಹಿರಂಗ ಸಮಾವೇಶದಿಂದ ಕಂಡುಬಂದ ಕಸವನ್ನು (Garbage) ತೆಗೆಯುವ ಮೂಲಕ ಸಚಿವ ಶ್ರೀರಾಮುಲು (Sriramulu) ಸೇರಿ ಬಿಜೆಪಿ (BJP) ಕಾರ್ಯಕರ್ತರು ಸ್ವಚ್ಛಗೊಳಿಸಿದ್ದಾರೆ.
Advertisement
ಸಹಜವಾಗಿ ಕಾರ್ಯಕ್ರಮ ಆಯೋಜಿಸಿದ್ದ ಕಾಂಗ್ರೆಸ್ (Congress), ಅವರೇ ಈ ಕಸವನ್ನು ಸ್ವಚ್ಛಗೊಳಿಸಬೇಕಿತ್ತು. ಆದರೆ ಇದರ ಲಾಭ ಪಡೆದ ಬಿಜೆಪಿ ನಾಯಕರು, ಕಾಂಗ್ರೆಸ್ ನಾಯಕರಿಗೆ ಮುಜುಗರ ತರಿಸುವ ಉದ್ದೇಶದಿಂದ ಶಾಸಕರು, ಮುಖಂಡರು, ಕಾರ್ಯಕರ್ತರು ಸೇರಿ ಕೈಯಲ್ಲಿ ಪೊರಕೆ ಹಿಡಿದು ಕಸ ಗುಡಿಸಿದ್ದಾರೆ. ಇದನ್ನೂ ಓದಿ: ಮೋದಿ ಕಾರ್ಯಕ್ರಮಕ್ಕೆ 2 ಲಕ್ಷ ಜನರನ್ನು ಸೇರಿಸಲು ಬಿಜೆಪಿ ನಿರ್ಧಾರ
Advertisement
Advertisement
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಶ್ರೀರಾಮುಲು, ಕಾಂಗ್ರೆಸ್‍ನವರ ಇಂತಹ ನೂರಾರು ಪಾದಯಾತ್ರೆ ಬಂದ್ರೂ ನಮ್ಮನ್ನು ನಮ್ಮ ಬಳ್ಳಾರಿಯನ್ನು ಏನು ಮಾಡೋಕೆ ಆಗಲ್ಲ. ಚಾಮುಂಡಿಯಿಂದ ಜನ ಹೊರದಬ್ಬಿದ ಬಳಿಕ ಬಾದಾಮಿಗೆ ಬಂದ ಸಿದ್ದರಾಮಯ್ಯ (Siddaramaiah) ನಮಗೆ ಬುದ್ಧಿ ಹೇಳ್ತಾರೆ. ಅಜ್ಜಿ ಕಾಲದಿಂದಲೂ ಇದ್ದ ಅಮೇಠಿಯಲ್ಲಿ ಸೋತ ರಾಹುಲ್ ಇಲ್ಲಿ ಬಂದು ಸಮಾವೇಶ ಮಾಡ್ತಾರೆ. ಸಮಾವೇಶ ಮಾಡೋದು ಸಹಜ ಆದರೆ ಸ್ವಚ್ಛತೆಯನ್ನು ಕಾಪಾಡಬೇಕಲ್ವಾ ಎಂದರು. ಇದನ್ನೂ ಓದಿ: ಸೋಮವಾರ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ 12ನೇ ಕಂತು ಬಿಡುಗಡೆ