ಹುಬ್ಬಳ್ಳಿ: ಕಠಿಣ ಕ್ರಮ ಎನ್ನುವ ಶಬ್ದವನ್ನು ರೆಕಾರ್ಡ್ ಮಾಡಿ ಇಟ್ಟುಕೊಂಡು ಬಿಡಿ. ಮುಂದೆ ಬೇರೆ ಕಾರ್ಯಕರ್ತ ಹತ್ಯೆಯಾದಾಗ ಅದನ್ನೇ ಪ್ಲೇ ಮಾಡಿ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ.
Advertisement
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬಿಜೆಪಿಗೆ ವಿವಿಧ ಪದವಿಗಳಿಗೆ ರಾಜೀನಾಮೆ ನೀಡಿದ ಕಾರ್ಯಕರ್ತರಿಗೆ ಸೆಲ್ಯೂಟ್. ಇದು ಮೊದಲೇ ಆಗಬೇಕಿತ್ತು. ಅಧಿಕಾರಕ್ಕೆ ಅಂಟಿಕೊಳ್ಳದೆ ಹಿಂದುತ್ವದಿಂದ ರಾಜೀನಾಮೆ ನೀಡಿದ್ದು ಗ್ರೇಟ್. ಬಿಜೆಪಿ ನಾಯಕರು ನಾಲಾಯಕ್, ನಿಮಗೆ ನಾಚಿಕೆ, ಮಾನ ಮರ್ಯಾದೆ ಇಲ್ಲ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ನಮ್ಮ ಕಾರ್ಯಕರ್ತರನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ನಳಿನ್ ಕುಮಾರ್ ಕಟೀಲ್
Advertisement
Advertisement
ಇದೇ ವೇಳೆ ಪ್ರವೀಣ್ ಶವಯಾತ್ರೆಯಲ್ಲಿ ಭಾಗವಹಿಸಿದ ಲಾಠಿ ಚಾರ್ಚ್ ಮಾಡಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಮುತಾಲಿಕ್, ಬಿಜೆಪಿ ನಾಯಕರ ಮೇಲೆ ಕಾರ್ಯಕರ್ತರ ಆಕ್ರೋಶ ಮಡುಗಟ್ಟಿದೆ. ಬರೀ ಕಟೀಲು ಕಾರು ಅಲುಗಾಡಿಸುವ ಬದಲು ಬೇರೆ ಕ್ರಮಕ್ಕೆ ಮುಂದಾಗಬೇಕಿತ್ತು. ಇಂದಿನದ್ದು ಜನೋತ್ಸವ ಅಲ್ಲಾ ಮರಣೋತ್ಸವ. ಕಾರ್ಯಕ್ರಮ ರದ್ದು ಮಾಡಿ ಒಳ್ಳೆಯದು ಮಾಡಿದ್ದೀರಿ. ಇಲ್ಲದಿದ್ದರೆ ಇಂದು ವೇದಿಕೆ ಮೇಲೆ ಚಪ್ಪಲಿಗಳ ರಾಶಿ ನೋಡುತ್ತಿದ್ದೀರಿ. ಅಧಿಕಾರದಲ್ಲಿ ಇದ್ದಾಗ ಒಂದು, ಇಲ್ಲದಿದ್ದಾಗ ಒಂದು ರೀತಿ ನಾಟಕವನ್ನು ಬಿಟ್ಟು ಬಿಡಿ ಎಂದು ಕಿಡಿಕಾರಿದರು. ಇದನ್ನೂ ಓದಿ: ಪ್ರವೀಣ್ ನೆಟ್ಟಾರ್ ತಂದೆ ಆರೋಗ್ಯದಲ್ಲಿ ಏರುಪೇರು- ಆಸ್ಪತ್ರೆಗೆ ದಾಖಲು
Advertisement
ಪಿಎಫ್‍ಐ ಎಡಿಪಿಐ ಬ್ಯಾನ್ ಮಾಡಿ ಅಂತ ನಾನೇ ಖುದ್ದು ದೆಹಲಿಗೆ ಹೋಗಿ ಮನವಿ ಮಾಡುತ್ತೇನೆ. ಭಯೋತ್ಪಾದಕರ ಜೊತೆ ಸಂಪರ್ಕ ಹೊಂದಿದ ಸಂಘಟನೆ ಇವು. ಇಷ್ಟೆಲ್ಲ ಇದ್ದರೂ ಸಂಘಟನೆಗಳ ಬೆಳೆಸ್ತಾಯಿದ್ದೀರಿ ಅಂದ್ರೆ ಏನರ್ಥ. ಅಧಿಕಾರಿದಲ್ಲಿದ್ದಾಗ ಒಂದು ಹೇಳ್ತಿರಿ ಇಲ್ಲದಿದ್ದಾಗ ಮತ್ತೊಂದು ಹೇಳುತ್ತೀರಿ. ಬ್ಯಾನ್ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಪಾರಸ್ ಮಾಡಿ ಎಂದು ಗರಂ ಆದರು.