ಉಡುಪಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (PFI) ಮಾಜಿ ಕಾರ್ಯಕರ್ತರಿಂದ ಇಂತಿಫದಾ ಎಂಬ ನಾಗರೀಕ ಸಂಘರ್ಷ ಘೋಷಣೆ ವಿಚಾರಕ್ಕೆ ಸಂಬಂಧಿಸಿದಂತೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ಪ್ರತಿಕ್ರಿಯಿಸಿದ್ದಾರೆ. ಇಂದಲ್ಲ ನಾಳೆ ದೇಶದಲ್ಲಿ ಆಂತರಿಕ ಯುದ್ಧ ನಡೆದೇ ನಡೆಯುತ್ತದೆ ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ.
Advertisement
ಉಡುಪಿ ಜಿಲ್ಲೆ ಕಾಪುನಲ್ಲಿ ಮಾತನಾಡಿದ ಪ್ರಮೋದ್ ಮುತಾಲಿಕ್, ಪಿಎಫ್‍ಐ ಎಂಬ ರಾಕ್ಷಸಿ ಶಕ್ತಿ ದೇಶದ್ರೋಹಿ ಕ್ಯಾನ್ಸರ್ ಆಗಿತ್ತು. ಈ ಶಕ್ತಿಗೆ ಕೇಂದ್ರ ಸರ್ಕಾರ (Central Government) ದೊಡ್ಡ ಪ್ರಮಾಣದ ಏಟು ಕೊಟ್ಟಿದೆ. ಆಂತರಿಕವಾಗಿ ದೇಶದ್ರೋಹಿ ಕಂಟಕ ಇನ್ನೂ ಇದೆ. ದೇಶದ ಎಲ್ಲಾ ಹಿಂದೂ ಸಂಘಟನೆಗಳು ಅಲರ್ಟ್ ಆಗಿ ಇರಬೇಕು. ಹಿಂದೂ ಸಂಘಟನೆಗಳು ಸಮಾಜವನ್ನು ಜಾಗೃತ ಕೆಲಸ ಮಾಡುತ್ತಲೇ ಇದ್ದೇವೆ ಎಂದರು. ಇದನ್ನೂ ಓದಿ: ಇಂತಿಫಿದಾ ಹೆಸರಿನಲ್ಲಿ ಪಿಎಫ್‍ಐ ಹೊಸ ವರಸೆ
Advertisement
Advertisement
ಯಾವಾಗ ಆಂತರಿಕ ಆಘಾತವಾಗುತ್ತೋ ಗೊತ್ತಿಲ್ಲ. ಇಂತಿಫದಾ ಎಂಬುದು ಆಘಾತಕಾರಿ ಸಂದೇಶ. ಸಾಮಾಜಿಕ ಜಾಲತಾಣದ ಸಂದೇಶವನ್ನು ನಿರ್ಲಕ್ಷಿಸಬಾರದು. ಎಲ್ಲಾ ತಯಾರಿಗಳನ್ನು ಮಾಡಿಕೊಂಡು ಬೇರೆ ಬೇರೆ ರೂಪದಲ್ಲಿ ಹೊರಬರುವ ಸಿದ್ಧತೆ ಮಾಡಿದ್ದಾರೆ. ಇದಕ್ಕೆ ಉತ್ತರ ಕೊಡಲು ಹಿಂದೂ ಸಮಾಜ ಸಿದ್ಧವಿದೆ. ದೇಶದೊಳಗೆ ಇಂದಲ್ಲ ನಾಳೆ ಆಂತರಿಕ ಯುದ್ಧ ಆಗುತ್ತದೆ, ಇದನ್ನು ಯಾರು ತಪ್ಪಿಸಲು ಸಾಧ್ಯವಿಲ್ಲ. ರಾಕ್ಷಸರು ಮತ್ತು ದೇವತೆಯ ನಡುವೆ ನಡೆದ ಯುದ್ಧದ ತರ ನಡೆಯುತ್ತದೆ.
Advertisement
ಹಿಂದೂಗಳು ಮತ್ತು ಇಸ್ಲಾಮಿಕ್ ಶಕ್ತಿಗಳ ನಡುವೆ ಸಂಘರ್ಷ ಆಗುತ್ತದೆ. ಆಂತರಿಕವಾಗಿ ಅವರು ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಹಿಜಬ್ (Hijab) ಬೆಂಬಲಿಸಿ ಬಂದ್ ಮಾಡಿದಾಗ ಏಕತೆ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಹಿಂದೂ ಸಮಾಜ ಧರ್ಮ ಯುದ್ಧಕ್ಕೆ ಸಿದ್ಧವಾಗಬೇಕು ಎಂದು ಹೇಳಿದರು.