ನೆಲಮಂಗಲ: ನಮ್ಮ ಜೆಡಿಎಸ್ ಪಕ್ಷದಲ್ಲೇ ತರಬೇತಿ ಹೊಂದಿ ಬೇರೆ ಪಕ್ಷಕ್ಕೆ ಆಡಳಿತದ ಆಸೆಗೆ ಪಕ್ಷಾಂತರವಾಗುವುದು ಸರಿಯಲ್ಲ ಎಂದು ನೆಲಮಂಗಲ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಉಪಚುನಾವಣೆ ಬಗ್ಗೆ ಪ್ರತಿಕ್ರಿಯೆ ನೀಡಿ ಬೇಸರ ವ್ಯಕ್ತಪಡಿಸಿದರು.
ನೆಲಮಂಗಲ ಗ್ರಾಮಾಂತರ ಭಾಗದ ಗಡಿ ಗ್ರಾಮವಾದ ಬರಗೂರಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅನುದಾನದಡಿಯಲ್ಲಿ 50 ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆ ಕಾಮಗಾರಿಗೆ ಚಾಲನೆ ನೀಡಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ವೇಳೆ ಪಕ್ಷಾಂತರ ಮಾಡುವವರ ಬಗ್ಗೆ ನೆನೆದು ಬೇಸರ ವ್ಯಕ್ತಪಡಿಸಿದರು. ಇದನ್ನೂ ಓದಿ: ಹಿಂದುಸ್ತಾನ್ ಆರ್ಟ್ ಅಂಡ್ ಕ್ರಾಫ್ಟ್ ಮೇಳಕ್ಕೆ ನ.12 ರಿಂದ ಚಾಲನೆ
ಅಧಿಕಾರದ ಲಾಲಸೆಗೆ ಯಾರು ಬಲಿಯಾಗಬಾರದು. ಮುಂದಿನ ದಿನದಲ್ಲಿ ಜೆಡಿಎಸ್ ಪಕ್ಷ ಬಲಾಢ್ಯವಾಗಲಿದೆ. ಇನ್ನೂ 2 ಕೋಟಿ 55 ಲಕ್ಷ ವೆಚ್ಚದಲ್ಲಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಡಿಯಲ್ಲಿ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ಕಾಮಗಾರಿಗೆ ಚಾಲನೆಯಾಗುತ್ತಿದ್ದು, ಇದಕ್ಕೆ ಅಂದಿನ ಸಮ್ಮಿಶ್ರ ಸರ್ಕಾರದ ಸಿಎಂ ಆಗಿದ್ದ ಹೆಚ್.ಡಿ.ಕುಮಾರಸ್ವಾಮಿ ಅವರು ಸಹಕಾರಿಯಾಗಿದ್ದಾರೆ ಎಂದು ನೆನಪಿಕೊಂಡರು.
ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ, ಆರ್.ಡಿ.ಪಿ.ಆರ್ ಅಡಿ ಬಿಡುಗಡೆಯಾಗಿ ವಾಪಸ್ಸು ಆಗಿದ್ದ ಹಣ ಇದೀಗ ಮತ್ತೆ ಬಿಡುಗಡೆಯಾಗಿ, ಕಾಮಗಾರಿ ಪ್ರಾರಂಭವಾಗಿದೆ. ಗಡಿ ಪಂಚಾಯತಿಗಳಾದ ಮರಳಕುಂಟೆ, ಹಸಿರುವಳ್ಳಿ ಗ್ರಾಮಗಳಿಗೆ ಸಾಕಷ್ಟು ಅನುದಾನ ನೀಡಿದ್ದೇವೆ. ಹಸಿರುವಳ್ಳಿ ಪಂಚಾಯತಿಗೆ 1.50 ಕೋಟಿ ಅನುದಾನ ನೀಡಿದ್ದೇವೆ. ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಬೇಡ, ಸರ್ಕಾರದ ಮೂಲಭೂತ ಸೌಲಭ್ಯಗಳನ್ನು ಧನಾತ್ಮಕವಾಗಿ ಬಳಸಿಕೊಳ್ಳಿ ಎಂದು ಜನತೆಗೆ ಕರೆ ನೀಡಿದರು. ಇದನ್ನೂ ಓದಿ: ಕಾರಿನಲ್ಲಿ ಕೈ ಸನ್ನೆ ಮಾಡಿ ಜೀವ ಉಳಿಸಿಕೊಂಡ ಬಾಲಕಿ
ಈ ಸಂದರ್ಭದಲ್ಲಿ ಮರಳಕುಂಟೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಧನಲಕ್ಷ್ಮೀ ಶೇಖರ್, ಉಪಾಧ್ಯಕ್ಷ ಕೃಷ್ಣಮೂರ್ತಿ, ಟಿಎಪಿಸಿಎಂಎಸ್ ಅಧ್ಯಕ್ಷ ಗುರುಪ್ರಕಾಶ್, ಮುಖಂಡ ಮಹಿಮಣ್ಣ, ಮಾಜಿ.ಗ್ರಾ.ಪಂ.ಅಧ್ಯಕ್ಷ ಅಶ್ವಥ್ ರಾಜು, ಬರಗೂರು ಮಾರುತಿ, ಗ್ರಾ.ಪಂ.ಸದಸ್ಯರಾದ ವೈ.ಟಿ.ಇಂದ್ರಕುಮಾರ್, ಬೆಣಚನಹಳ್ಳಿ ರಾಜಣ್ಣ, ಶೋಭಾ ಮಂಜುನಾಥ್, ದಾಸೇನಹಳ್ಳಿ ಮೂರ್ತಯ್ಯ, ವಿಜಯಕುಮಾರಿ ಇನ್ನೀತರರಿದ್ದರು.