ನವದೆಹಲಿ: ಸಿ.ಟಿ ರವಿ (CT Ravi) ಮೊದಲು ಲೂಟಿ ರವಿಯಾದರು, ಲೂಟಿ ರವಿಯಿಂದ ಕೋಟಿ ರವಿಯಾದರು, ಕೋಟಿ ರವಿಯಿಂದ ಈಗ ಕೆಟ್ಟ, ಕೊಳಕು ರವಿಯಾಗಿದ್ದಾರೆ. ಮಹಿಳೆ ವಿರುದ್ಧ ಅಸಭ್ಯವಾಗಿ ಮಾತನಾಡಿದ ಅವರನ್ನು ಬಿಜೆಪಿ ನಾಯಕರು ಮಾನ ಮರ್ಯಾದಿ ಇಲ್ಲದೆ ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ರಾಷ್ಟ್ರೀಯ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ವಿ ಶ್ರೀನಿವಾಸ್ (BV Srinivas) ವಾಗ್ದಾಳಿ ನಡೆಸಿದ್ದಾರೆ.
ದೆಹಲಿಯಲ್ಲಿ ಮಾತನಾಡಿದ ಅವರು, ಹೆಣ್ಣು ಮಕ್ಕಳ ವಿರುದ್ಧ ಮಾತಾನಾಡಿದರೆ ಸುಮ್ಮನಿರಬೇಕಾ? ಸಿ.ಟಿ ರವಿ ಹೇಳಿಕೆಯಿಂದ ಆರ್‌ಎಸ್‌ಎಸ್ ನಿಜವಾದ ಬಣ್ಣ ಬಯಲಾಗಿದೆ. ಆರ್‌ಎಸ್‌ಎಸ್ ಪಾಠ ಕಲಿತು ಹಾಳಾಗಿರುವ ಸಿ.ಟಿ ರವಿ ಅವರಿಗೆ ಅವರ ತಾಯಿ ಮತ್ತು ಪತ್ನಿ ಒಳ್ಳೆ ಪಾಠ ಹೇಳಿಕೊಡುವ ಅನಿವಾರ್ಯತೆ ಇದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಹೇಳಿಕೆ ಪರಿಶೀಲನೆಯಾಗಬೇಕಿತ್ತು, ಸರ್ಕಾರದ ತುರ್ತು ನಡೆ ಖಂಡನೀಯ: ಸಿಟಿ ರವಿ ಬಂಧನಕ್ಕೆ ರಾಜ್ಯ ಬಿಜೆಪಿ ಸಂಸದರಿಂದ ವಿರೋಧ
Advertisement
Advertisement
ಗೃಹಲಕ್ಷಿ ಯೋಜನೆಯನ್ನು ಅನುಷ್ಠಾನ ಮಾಡಿರುವುದನ್ನು ಬಿಜೆಪಿ ಸಹಿಸುತ್ತಿಲ್ಲ. ಹೀಗಾಗಿ ಲಕ್ಷ್ಮಿ ಹೆಬ್ಬಾಳ್ಕರ್ ತೇಜೋವಧೆಗೆ ಇಳಿದಿದ್ದಾರೆ. ಭಾರತ ಮಾತಾಕೀ ಜೈ ಎನ್ನುವ ಸಿ.ಟಿ ರವಿ ಮಹಿಳೆಯರ ಬಗ್ಗೆ ಅಶ್ಲಿಲವಾಗಿ ಮಾತಾಡಿದ್ದಾರೆ. ಬಿಜೆಪಿ ನಾಯಕರು ಇನ್ನು ಪರಿಶೀಲನೆ ಮಾಡಬೇಕಿತ್ತು ಎನ್ನುತ್ತಿದ್ದಾರೆ. ನಿಮ್ಮ ಮನೆ ಹೆಣ್ಣುಮಕ್ಕಳಿಗೆ ಈ ಮಾತು ಹೇಳಿದರೆ ಪರಿಶೀಲನೆ ಮಾಡುತ್ತಾ ಕೂರುತ್ತಿದ್ದಿರಾ? ಕೂಡಲೇ ಸಿ.ಟಿ ರವಿ ಮತ್ತು ಬಿಜೆಪಿ ನಾಯಕರು ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ. ಇದನ್ನೂ ಓದಿ: ಸಿ.ಟಿ ರವಿ ಕೇಸ್ ಬೆಂಗಳೂರಿಗೆ ಶಿಫ್ಟ್ – ಬೆಳಗಾವಿ ಕೋರ್ಟ್ ಆದೇಶ
Advertisement