ಬೆಂಗಳೂರು: ಕರ್ನಾಟಕದಾದ್ಯಂತ ಧರ್ಮ ಕಾರ್ಯಗಳ ಮೂಲಕ ಜನರ ಗೌರವ ಉಳಿಸಿಕೊಂಡಿರುವ ಮಠಗಳಲ್ಲಿ ಶೃಂಗೇರಿ ಮಠವು ಮುಂಚೂಣಿಯಲ್ಲಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (DCM DK Shivakumar) ಶ್ಲಾಘಿಸಿದರು.
ಶೃಂಗೇರಿ (Sringeri) ಜಗದ್ಗುರು ಶಂಕರಾಚಾರ್ಯ ಶ್ರೀ ಭಾರತೀತೀರ್ಥ ಸ್ವಾಮೀಜಿಗಳು ಸನ್ಯಾಸತ್ವ ಸ್ವೀಕರಿಸಿ 50 ವರ್ಷಗಳು ತುಂಬಿದ ನಿಮಿತ್ತ ನಗರದ ಅರಮನೆ ಮೈದಾನದಲ್ಲಿ ಇಂದು (ಅ.26 ರಂದು) ನಡೆದ ನಮಃ ಶಿವಾಯ ಕಾರ್ಯಕ್ರಮದಲ್ಲಿ ಮಾತನಾಡಿದರು.
Advertisement
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮಃ ಶಿವಾಯ ಕಾರ್ಯಕ್ರಮದ ಮೂಲಕ ನಾವೆಲ್ಲರೂ ಭಕ್ತಿಯ ಸಾಗರದಲ್ಲಿ ಮುಳುಗಿದ್ದೇವೆ. ಶೃಂಗೇರಿಯ ಭಾರತೀತೀರ್ಥ ಸ್ವಾಮೀಜಿಗಳು ಸನ್ಯಾಸತ್ವ ಸ್ವೀಕರಿಸಿ 50 ವರ್ಷಗಳ ಕಾಲ ಧರ್ಮವನ್ನು ಉಳಿಸುವ ಕೆಲಸ ಮಾಡಿದ್ದಾರೆ. ನಮ್ಮ ಪ್ರಯತ್ನಗಳು ವಿಫಲವಾಗಬಹುದು, ಆದರೆ ಪ್ರಾರ್ಥನೆ ವಿಫಲವಾಗುವುದಿಲ್ಲ. ಶ್ರೀಗಳು ಐವತ್ತು ವರ್ಷಗಳ ಕಾಲ ನಮ್ಮೆಲ್ಲರ ಒಳಿತಿಗಾಗಿ ಪ್ರಾರ್ಥನೆ ಮಾಡಿದ್ದಾರೆ. ನನಗೂ ಶೃಂಗೇರಿ ಮಠಕ್ಕೂ ಇರುವ ಸಂಬಂಧ ಭಕ್ತನಿಗೂ ಭಗವಂತನಿಗೂ ಇರುವ ಸಂಬಂಧವಾಗಿದೆ. ಭಕ್ತಿಯಿದ್ದರೆ ಶಿಲೆಯಲ್ಲೂ ಭಗವಂತನನ್ನು ಕಾಣಬಹುದು ಎಂದರು.ಇದನ್ನೂ ಓದಿ: ಕಾಂಗ್ರೆಸ್ನ ಪಠಾಣ್ ರೌಡಿಶೀಟರ್ ಅಂದಿದ್ದು ಅವರ ಪಕ್ಷದವರೇ, ಅವ್ರೇ ಸ್ಪಷ್ಟೀಕರಣ ಕೊಡಲಿ- ಬೊಮ್ಮಾಯಿ
Advertisement
Advertisement
ಶ್ರೀ ಶಂಕರಾಚಾರ್ಯರು ಶಾರದಾ ಪೀಠವನ್ನು ಸ್ಥಾಪಿಸುವ ಮೂಲಕ ಇಡೀ ದೇಶದಲ್ಲಿಯೇ ಹಿಂದೂ ಧರ್ಮದ ಏಳಿಗೆಗೆ ಕಾರಣಿಭೂತರಾದವರು. ಈ ಸುದಿನದಂದು ಶಿವನ ಧ್ಯಾನ, ಪ್ರಾರ್ಥನೆಯ ಮೂಲಕ ಸಮಸ್ತ ಜನರಿಗೆ ಒಳ್ಳೆಯದನ್ನು ಮಾಡುವಂತೆ ನಾವೆಲ್ಲರೂ ಸೇರಿ ಪ್ರಾರ್ಥನೆ ಮಾಡೋಣ. ಶ್ರೀ ವಿಧುಶೇಖರಭಾರತೀ ಸ್ವಾಮೀಜಿಗಳು ಉತ್ತಮವಾಗಿ ಹಿರಿಯ ಸ್ವಾಮೀಜಿಗಳ ಹಾದಿಯಲ್ಲಿ ನಡೆಯುತ್ತಿದ್ದಾರೆ. ಇವರ ಆಶೀರ್ವಾದ ಸಮಸ್ತ ಜನರ ಮೇಲೆ ಹಾಗೂ ಸರ್ಕಾರದ ಮೇಲಿರಲಿ. ಕಳೆದ ವರ್ಷ ತಮ್ಮ ವಿದ್ವತ್ಪೂರ್ಣ ಮಾತುಗಳಿಂದ ಆಧ್ಯಾತ್ಮಿಕ ಜ್ಞಾನವನ್ನು ಹೆಚ್ಚಿಸಿದ್ದರು ಎಂದು ಹೇಳಿದರು.
Advertisement
ಇದು ಭಾಗ್ಯ ಇದು ಭಾಗ್ಯವಯ್ಯ, ಪದ್ಮನಾಭನ ಪಾದಭಜನೆ ಪರಮ ಸುಖವಯ್ಯ ಎನ್ನುವ ಪುರಂದರದಾಸರ ಮಾತಿನಂತೆ ಈ ಕಾರ್ಯಕ್ರಮದಲ್ಲಿ ನಾವೆಲ್ಲರೂ ಭಾಗವಹಿಸಿರುವುದೇ ಪುಣ್ಯದ ಕಾರ್ಯ. ಧರ್ಮ ಯಾವುದಾದರೂ ತತ್ವ ಒಂದೇ. ನಾಮ ನೂರಾದರೂ ದೈವ ಒಂದೇ. ಪೂಜೆ ಯಾವುದಾದರೂ ಭಕ್ತಿ ಒಂದೇ. ಕರ್ಮ ಯಾವುದಾದರೂ ನಿಷ್ಠೆ ಒಂದೇ. ದೇವನೊಬ್ಬ ನಾಮ ಹಲವು ಎಂದು ತಿಳಿಸಿದರು.
ನಿಂಬೆಗಿಂ ಹುಳಿಯಿಲ್ಲ, ದುಂಬಿಗಿಂ ಕರಿಯಿಲ್ಲ, ನಂಬಿಗೆಗಿಂತ ಅಧಿಕ ಗುಣವಿಲ್ಲ, ಶಂಭುವಿಗಿಂತ ಅಧಿಕ ದೇವರಿಲ್ಲ ಎಂಬ ಸರ್ವಜ್ಞನ ಮಾತಿನಂತೆ ಶಿವನೇ ಶ್ರೇಷ್ಠ. ಎಲ್ಲರಿಗೂ ಶಿವ ಒಳ್ಳೆಯದನ್ನು ಮಾಡಲಿ ಎಂದು ಬೇಡಿಕೊಳ್ಳುತ್ತೇನೆ. ಶ್ರೀಗಳ ಮೇಲೆ ನಂಬಿಕೆ ಇರುವ ಕಾರಣಕ್ಕೆ ಭಕ್ತಿಯಿಂದ ಭಕ್ತ ಸಾಗರ ಸೇರಿದೆ ಎಂದು ಹೇಳಿದರು.ಇದನ್ನೂ ಓದಿ: ಬೆಂಗಳೂರಲ್ಲಿ ಡಿ.6ಕ್ಕೆ ದಿಲ್ಜಿತ್ ಶೋ; ಅಕ್ರಮ ಟಿಕೆಟ್ ಮಾರಾಟ ಆರೋಪ – ಕರ್ನಾಟಕ ಸೇರಿ 5 ರಾಜ್ಯಗಳಲ್ಲಿ ED ದಾಳಿ