ಶ್ರೀನಗರ: ದಕ್ಷಿಣ ಕಾಶ್ಮೀರ ಜಿಲ್ಲೆಯ ಶೋಪಿಯಾನ್‍ನಲ್ಲಿ ಇಂದು ಮುಂಜಾನೆ ಭಾರತೀಯ ಭದ್ರತಾ ಪಡೆ ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಸೇನೆಯ ಗುಂಡೇಟಿಗೆ ಇಬ್ಬರು ಉಗ್ರರು ಹತರಾಗಿದ್ದಾರೆ.
ಶೋಪಿಯಾನ್‍ನಲ್ಲಿ ಉಗ್ರರು ಅಡಗಿ ಕೂತಿರುವ ಬಗ್ಗೆ ಭಾರತೀಯ ಸೇನೆಗೆ ಮಾಹಿತಿ ಲಭ್ಯವಾಗಿತ್ತು. ಇದನ್ನು ಆಧರಿಸಿ ಜಮ್ಮು-ಕಾಶ್ಮೀರ ಪೊಲೀಸರು, ಸೇನೆ ಮತ್ತು ಸಿಆರ್‌ಪಿಎಫ್‌ನ ವಿಶೇಷ ಕಾರ್ಯಾಚರಣೆ ತಂಡ(ಎಸ್‍ಒಜಿ) ಶೋಪಿಯಾನ್‍ನ ಪ್ರದೇಶದಲ್ಲಿ ಜಂಟಿ ಶೋಧಕಾರ್ಯಾಚರಣೆ ನಡೆಸಿ ಇಬ್ಬರು ಉಗ್ರರನ್ನು ಸದೆಬಡೆದಿದ್ದಾರೆ.
Advertisement
#UPDATE Jammu & Kashmir: Two terrorists have been killed during the encounter between troops & terrorists in Dairoo of Shopian District; Identity yet to be ascertained. https://t.co/JGKDaFetcf
— ANI (@ANI) April 17, 2020
Advertisement
ಭದ್ರತಾ ಪಡೆಗಳನ್ನು ಕಂಡ ತಕ್ಷಣ ಉಗ್ರರು ಸ್ವಯಂಚಾಲಿತ ಶಸ್ತ್ರಾಸ್ತ್ರಗಳಿಂದ ಗುಂಡಿನ ದಾಳಿ ಆರಂಭಿಸಿದರು. ಇದಕ್ಕೆ ಭದ್ರತಾ ಪಡೆಗಳು ಕೂಡ ಪ್ರತ್ಯುತ್ತರ ನೀಡಿದ್ದು, ಉಗ್ರರು ಹಾಗೂ ಭದ್ರತಾ ಪಡೆಗಳ ನಡುವೆ ಗುಂಡಿನ ಚಕಮಕಿ ನಡೆದಿದೆ.
Advertisement
ಘಟನಾ ಸ್ಥಳಕ್ಕೆ ಹೆಚ್ಚುವರಿ ಭದ್ರತಾ ಪಡೆಗಳು ಧಾವಿಸಿದ್ದು, ಈ ಪ್ರದೇಶದ ಅಕ್ಕಪಕ್ಕದ ಗ್ರಾಮಗಳನ್ನು ಸುತ್ತುವರೆದು ಜಂಟಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಕಳೆದ 21 ದಿನಗಳ ಲಾಕ್‍ಡೌನ್ ಅವಧಿಯಲ್ಲಿ ಉಗ್ರರು ಸಾಕಷ್ಟು ಬಾರಿ ಸೇನೆಯ ಮೇಲೆ ದಾಳಿ ನಡೆಸಿದ್ದಾರೆ. ಈ ದಾಳಿಗಳಲ್ಲಿ ಹಲವು ಉಗ್ರರನ್ನು ಸೇನೆ ಸದೆಬಡೆದಿದೆ.
Advertisement
J&K: An encounter broke out b/w troops&terrorists at 0630 hrs today, following cordon&search op by Central Reserve Police Force along with 44 Rashtriya Rifles&Special Operation Group last night in Dairoo, Shopian District. Firing underway. More details awaited. (Deferred visuals) pic.twitter.com/KsnViZnc7P
— ANI (@ANI) April 17, 2020
ಅಲ್ಲದೇ ಕೆಲ ದಿನಗಳ ಹಿಂದೆ ಸೊಪೋರ್‍ನಲ್ಲಿ ನಡೆದ ಗುಂಡಿನ ಕಾಳಗದಲ್ಲಿ 23 ವರ್ಷದ ಜೈಷ್-ಇ-ಮೊಹ್ಮದ್ ಉಗ್ರ ಸಂಘಟನೆಯ ಕಮಾಂಡರ್ ಸೇನೆಯ ಗುಂಡೇಟಿಗೆ ಹತನಾಗಿದ್ದಾನೆ. ಈತ 2018ರಿಂದ ಭಯೋತ್ಪಾದನೆಯಲ್ಲಿ ಸಕ್ರಿಯನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.