ಕೊಲೊಂಬೊ: ಶ್ರೀಲಂಕಾದ ನೌಕಾಪಡೆ 12 ತಮಿಳುನಾಡಿನ ಮೀನುಗಾರರನ್ನು ಬಂಧಿಸಿದ್ದು, ಒಂದು ದೋಣಿಯನ್ನು ವಶಪಡಿಸಿಕೊಂಡಿದ್ದಾರೆ ಎಂದು ಮೀನುಗಾರಿಕಾ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದರು.
ಶನಿವಾರ ತಡರಾತ್ರಿ ಕಚ್ಚತೀವು ಬಳಿ ಮೀನುಗಾರಿಕೆಯಲ್ಲಿ ತೊಡಗಿದ್ದ ಮೀನುಗಾರರನ್ನು ಲಂಕಾ ನೌಕಪಡೆ ಬಂಧಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವಿಷಯದ ಬಗ್ಗೆ ರಾಮನಾಥಪುರಂ ಸಂಸದ ಕೆ.ನವಾಸ್ ಕಣಿ ಅವರು ವಿದೇಶಾಂಗ ಸಚಿವಾಲಯವನ್ನು ತರಾಟೆಗೆ ತೆಗೆದುಕೊಂಡರು.
Advertisement
Advertisement
ಭಾರತೀಯ ಮೀನುಗಾರರು ಶ್ರೀಲಂಕಾದ ಜಲಪ್ರದೇಶದಲ್ಲಿ ಮೀನುಗಾರಿಕೆ ಮಾಡುತ್ತಿದ್ದರು ಎಂದು ಲಂಕಾ ನೌಕಪಡೆ ಆರೋಪಿಸಿದ್ದು, ಈ ಹಿನ್ನೆಲೆಯಲ್ಲಿ 12 ಮೀನುಗಾರರನ್ನು ಬಂಧಿಸಲಾಗಿದೆ. ಇದನ್ನೂ ಓದಿ: ಹಲಾಲ್ ಕಟ್, ಜಟ್ಕಾಕಟ್ ಫೈಟ್ ನಡುವೆಯೇ ಹೊಸ ತೊಡಕಿಗೆ ಮಾಂಸ ಖರೀದಿ ಜೋರು
Advertisement
Advertisement
ಮಾರ್ಚ್ 29ರಿಂದ ಶ್ರೀಲಂಕಾದ ನೌಕಪಡೆಯು ಸಮುದ್ರ ಗಡಿ ಉಲ್ಲಂಘನೆಯ ಆರೋಪದ ಮೇಲೆ ಭಾರತೀಯ ಮೀನುಗಾರರನ್ನು ಬಂಧಿಸಿರುವುದು ಇದು ಮೂರನೇ ನಿದರ್ಶನವಾಗಿದೆ. ಮಂಗಳವಾರ ಮತ್ತು ಗುರುವಾರ ಒಟ್ಟು ಏಳು ಮೀನುಗಾರರನ್ನು ಬಂಧಿಸಲಾಗಿತ್ತು. ನಂತರ ಮೀನುಗಾರರು ಬಳಸುತ್ತಿದ್ದ ಎರಡು ದೋಣಿಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಇದನ್ನೂ ಓದಿ: ಬೆಣ್ಣೆನಗರಿಯಲ್ಲಿ ನಾನ್ ವೆಜ್ ಸ್ಟಾಲ್‍ಗಳು ಖಾಲಿ ಖಾಲಿ.. ಏಕೆ ಗೊತ್ತಾ?