ನವದೆಹಲಿ: ವಿಶ್ವಕಪ್ ಕ್ರಿಕೆಟ್‌ನಲ್ಲಿ (World Cup Cricket) ಶ್ರೀಲಂಕಾ (Srilanka) ವಿರುದ್ಧ ಬಾಂಗ್ಲಾದೇಶ (Bangladesh) 3 ವಿಕೆಟ್ ಜಯ ಸಾಧಿಸಿದೆ.
ಗೆಲ್ಲಲು 280 ರನ್‌ಗಳ ಗುರಿಯನ್ನು ಪಡೆದ ಬಾಂಗ್ಲಾದೇಶ ಇನ್ನೂ 53 ಎಸೆತ ಬಾಕಿ ಇರುವಂತೆಯೇ 7 ವಿಕೆಟ್ ಕಳೆದುಕೊಂಡು 283 ರನ್ ಹೊಡೆಯುವ ಮೂಲಕ ಗುರಿಯನ್ನು ತಲುಪಿತು.
Advertisement
ಈ ಮೂಲಕ ಟೂರ್ನಿಯಲ್ಲಿ ಬಾಂಗ್ಲಾ ಎರಡನೇ ಗೆಲುವು ಸಾಧಿಸಿದರೆ, ಶ್ರೀಲಂಕಾ 6 ಬಾರಿ ಸೋಲು ಕಂಡಿತು. ಬಾಂಗ್ಲಾ ಪರ ನಜ್ಮುಲ್ ಹೊಸೈನ್ ಮತ್ತು ನಾಯಕ ಶಕೀಬ್ ಅಲ್ ಹಸನ್ (Shakib Al Hasan) ಅವರು ಮೂರನೇ ವಿಕೆಟಿಗೆ 149 ಎಸೆತಗಳಲ್ಲಿ 169 ರನ್ ಜೊತೆಯಾಟವಾಡುವಾಗಲೇ ಬಾಂಗ್ಲಾದ ಗೆಲುವು ಖಚಿತವಾಗಿತ್ತು.
Advertisement
View this post on Instagram
Advertisement
ನಜ್ಮುಲ್ ಹೊಸೈನ್ 90 ರನ್ (101 ಎಸೆತ, 12 ಬೌಂಡರಿ) ಶಕೀಬ್ ಉಲ್ ಹಸನ್ 82 ರನ್ (65 ಎಸೆತ, 12 ಬೌಂಡರಿ) ಗಳಿಸಿ ಔಟಾದರು.
Advertisement
ಲಂಕಾ ಪರ ಚರಿತ ಅಸಲಂಕ 108 ರನ್ (105 ಎಸೆತ, 6 ಬೌಂಡರಿ, 5 ಸಿಕ್ಸರ್) ಧನಂಜಯ ಡಿಸಿಲ್ವಾ 34 ರನ್ (36 ಎಸೆತ, 4 ಬೌಂಡರಿ, 1 ಸಿಕ್ಸರ್) ಹೊಡೆದು ಔಟಾದರು.
ಶಕಿಬ್‌ಗೆ ತಿರುಗೇಟು:
ಇಂದಿನ ಪಂದ್ಯದಲ್ಲಿ ಏಂಜಲೋ ಮಾಥ್ಯೂಸ್ (Angelo Mathews) ಟೈಮ್ಡ್ ಔಟಾಗಿದ್ದರು. ಟೈಮ್ಡ್ ಔಟ್ ವಿಚಾರಕ್ಕೆ ಶಕೀಬ್ ಜೊತೆ ಮಾಥ್ಯೂಸ್ ಮೈದಾನದಲ್ಲೇ ವಾದ ಮಾಡಿದ್ದರು. ಇದನ್ನೂ ಓದಿ: ಒಂದು ಎಸೆತ ಎದುರಿಸದೇ ಏಂಜಲೋ ಮಾಥ್ಯೂಸ್ ಔಟ್ – ಏನಿದು ಟೈಮ್ಡ್ ಔಟ್ ನಿಯಮ?
82 ರನ್‌ಗಳಿಸಿದ್ದಾಗ ಶಕೀಬ್ ಮಾಥ್ಯೂಸ್ ಬೌಲಿಂಗ್‌ನಲ್ಲಿ ಅಸಲಂಕಾಗೆ ಕ್ಯಾಚ್ ನೀಡಿ ಔಟಾಗಿದ್ದರು. ಈ ವೇಳೆ ಮಾಥ್ಯೂಸ್ ಎಡಕೈಯಲ್ಲಿ ವಾಚ್ ಕಟ್ಟುವ ಜಾಗವನ್ನು ತೋರಿಸಿ ಟ್ರೋಲ್ ಮಾಡುವ ಮೂಲಕ ಸೇಡು ತೀರಿಸಿಕೊಂಡರು. 7.1 ಓವರ್ ಎಸೆದ ಮ್ಯಾಥ್ಯೂಸ್ 1 ಓವರ್ ಮೇಡನ್ ಮಾಡಿ 35 ರನ್ ನೀಡಿ 2 ವಿಕೆಟ್ ಪಡೆದರು.