ಮೈಸೂರು: ಲೋಕಸಭೆಗೆ 9ನೇ ಸಾರ್ವತ್ರಿಕ ಚುನಾವಣೆ 1989ರಲ್ಲಿ ನಡೆಯಿತು. ಮೈಸೂರು (Mysuru Lok Sabha) ಸಾಮಾನ್ಯ ಕ್ಷೇತ್ರದಿಂದ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ (Srikantadatta Narasimharaja Wadiyar) ಸತತ ಎರಡನೇ ಬಾರಿಗೆ ಗೆದ್ದಿದ್ದರು.
ಆ ಸಂದರ್ಭದಲ್ಲಿ ಜನತಾ ಪಕ್ಷ ವಿಭಜನೆಯಾಗಿತ್ತು. ಜನತಾದಳ ಹಾಗೂ ಜನತಾಪಕ್ಷ (ಜೆಪಿ) ಎಂದು ಇಬ್ಬಣಗಳಾಗಿ ಕಣದಲ್ಲಿತ್ತು. ಇದರಿಂದ ಕಾಂಗ್ರೆಸ್‌ಗೆ (Congress) ಸುಲಭ ಜಯ ಸಿಕ್ಕಿತು. ಮೈಸೂರು ಕ್ಷೇತ್ರದಲ್ಲಿ 10,52,491 ಮತದಾರರ ಪೈಕಿ ಶೇ.69.74 ರಷ್ಟು ಮತದಾನವಾಗಿತ್ತು. ಶ್ರೀಕಂಠದತ್ತ ನರಸಿಂಹರಾಜ ಒಡಯರ್ 3,84,888 ಮತಗಳು ಪಡೆದು ಬಹು ದೊಡ್ಡ ಅಂತರದಿಂದ ಗೆದ್ದಿದ್ದರು. ಇದನ್ನೂ ಓದಿ: Mysuru Lok Sabha 2024: ಮೈಸೂರಿನ ರಾಜವಂಶಸ್ಥರ ಮೊದಲ ಚುನಾವಣಾ ನೆನಪು
Advertisement
ಒಡೆಯರ್ ಸಮೀಪದ ಪ್ರತಿಸ್ಪರ್ಧಿ ಜನತಾಪಕ್ಷ (ಜೆಪಿ) ಅಭ್ಯರ್ಥಿ ಡಿ. ಮಾದೇಗೌಡ- 1,35,524, ಜನತಾದಳದ ಪ. ಮಲ್ಲೇಶ್- 1,31,905, ಬಿಜೆಪಿಯ ತೋಂಟದಾರ್ಯ- 25,398, ಪಕ್ಷೇತರರಾದ ಡಿ. ಕಾಳಸ್ವಾಮಿ- 7,013, ಪತ್ರಕರ್ತರಾಗಿದ್ದ ಶಫಿ ಅಹ್ಮದ್ ಷರೀಫ್ – 4,230, ಮೈಸೂರು ಗ್ರಾಹಕ ಪಂಚಾಯತ್ ಭಾಮಿ ವಿ. ಶೆಣೈ- 2,644 ಮತಗಳನ್ನು ಪಡೆದಿದ್ದರು. ಒಡೆಯರ್ ಅವರ ಈ ಗೆಲುವು ಅವತ್ತಿನ ಮಟ್ಟಿಗೆ ದಾಖಲೆ.