ಮೈಸೂರು: ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ಗೆ (Srikantadatta Narasimharaja Wadiyar) ಕೇಂದ್ರದಲ್ಲಿ ಮಂತ್ರಿ ಆಗಬೇಕು ಎಂಬ ಮಹದಾಸೆ ಇತ್ತು. ಆದರೆ ನಾಲ್ಕು ಬಾರಿ ಗೆದ್ದರೂ ಅವರಿಗೆ ಮಂತ್ರಿ ಆಗುವ ಯೋಗವೇ ಬರಲಿಲ್ಲ.

1989 ರಲ್ಲಿ ಎರಡನೇ ಬಾರಿ ಗೆದ್ದಾಗ ಕೇಂದ್ರದಲ್ಲಿ ವಿ.ಪಿ.ಸಿಂಗ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂತು. 1996 ರಲ್ಲಿ ಮೂರನೇ ಬಾರಿ ಗೆದ್ದಾಗ ಹೆಚ್.ಡಿ.ದೇವೇಗೌಡ, ಐ.ಕೆ.ಗುಜ್ರಾಲ್ ನೇತೃತ್ವದ ಸಂಯುಕ್ತ ರಂಗ ಸರ್ಕಾರಗಳಿದ್ದವು. ಇದನ್ನೂ ಓದಿ: ಎರಡನೇ ಬಾರಿಗೆ ಎರಡೂವರೆ ಲಕ್ಷ ಮತಗಳ ಅಂತರದಿಂದ ಗೆದ್ದಿದ್ದ ಒಡೆಯರ್!
1999 ರಲ್ಲಿ ಗೆದ್ದಾಗ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರ. 2004 ರಲ್ಲಿ ಡಾ. ಮನಮೋಹನಸಿಂಗ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದಿತು. ಆದರೆ ಮೈಸೂರಿನಲ್ಲಿ ಒಡೆಯರ್ ಸೋತಿದ್ದರು. ಮತ್ತೆ ಲೋಕಸಭೆಗೆ ಸ್ಪರ್ಧಿಸುವ ಅವಕಾಶ ಅವರಿಗೆ ಸಿಗಲಿಲ್ಲ. ಹೀಗಾಗಿ ಕೇಂದ್ರದಲ್ಲಿ ಮಂತ್ರಿ ಆಗುವ ಒಡೆಯರ್ ಕನಸು ಅವರ ಜೊತೆಯೆ ಮಣ್ಣಾಯಿತು.


