ಮುಂಬೈ: ಹಿರಿಯ ನಟಿ ಶ್ರೀದೇವಿ ಸಾವಿನ ಬಳಿಕ ಮಗಳು ಜಾಹ್ನವಿ ಕಪೂರ್ ಬೀದಿಗೆ ಬಂದಿದ್ದಾರೆ. ಅಮ್ಮ ಇರುವಾಗ ರಾಣಿಯಂತೆ ಮೆರೆದ ಮಗಳು ಈಗ ದಿಢೀರ್ ಬೀದಿಗೆ ಬಂದಿದ್ದಾರೆ ಅಂತ ಅಂದುಕೊಳ್ಳಬೇಡಿ. ಶ್ರೀದೇವಿ ಪುತ್ರಿ ನಿಜವಾಗಿ ಬೀದಿಗೆ ಬಂದಿಲ್ಲ.
ಅಮ್ಮನ ಅಗಲಿಕೆಯಿಂದ ವಿಶ್ರಾಂತಿ ಪಡೆದುಕೊಂಡಿದ್ದ ಜಾಹ್ನವಿ ಕಪೂರ್ ಮತ್ತೆ ಶೂಟಿಂಗ್ ಗೆ ಹಾಜರಾಗಿದ್ದಾರೆ. ಜಾಹ್ನವಿ ಕಪೂರ್ ಅಭಿನಯಿಸುತ್ತಿರುವ ಚೊಚ್ಚಲ ಸಿನಿಮಾ ‘ದಢಕ್’ ಚಿತ್ರೀಕರಣಕ್ಕೆ ಮರಳಿರುವ ಜಾಹ್ನವಿ ಕೊಲ್ಕತ್ತಾದ ರಸ್ತೆಯಲ್ಲಿ ಶೂಟಿಂಗ್ ಮಾಡುತ್ತಿದ್ದಾರೆ. ಸಲ್ವಾರ್ ಸೂಟ್ ಧರಿಸಿ ಕೈಯಲ್ಲಿ ಬ್ಯಾಗ್ವೊಂದನ್ನು ಹಿಡಿದು ಮಾರುಕಟ್ಟೆ ಪ್ರದೇಶದಲ್ಲಿ ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದಾಗಿದೆ. ಜಾಹ್ನವಿ ಜೊತೆಗೆ ಇಶಾನ್ ಖಟ್ಟರ್ ಸಹ ಈ ಚಿತ್ರದಲ್ಲಿದ್ದಾರೆ.
Advertisement
ಈ ದೃಶ್ಯಗಳ ಫೋಟೋಗಳು ಜಾಹ್ನಿವಿ ಫ್ಯಾನ್ಸ್ ಇನ್ಸ್ ಸ್ಟಗ್ರಾಮ್ ಪೇಜ್ನಲ್ಲಿ ಹರಿದಾಡುತ್ತಿವೆ. ಶ್ರೀಮಂತ ಮನೆತನದ ಮಗಳು ತಂದೆ-ತಾಯಿಯನ್ನ ಬಿಟ್ಟು ಉಟ್ಟ ಬಟ್ಟೆಯಲ್ಲೇ ಮನೆಯಿಂದ ಹೊರ ಬಂದಮೇಲೆ ಹೇಗೆ ಕಾಣಿಸಿಕೊಳ್ಳುತ್ತಾಳೆ ಎಂಬ ದೃಶ್ಯವನ್ನ ಸೆರೆಹಿಡಿಯಲಾಗುತ್ತಿದೆ. ನಾಯಕ ಮತ್ತು ನಾಯಕಿ ಇಬ್ಬರು ಪ್ರೀತಿಸಿ, ಮನೆಯವರು ಒಪ್ಪದ ಕಾರಣ ಮನೆಯಿಂದ ಹೊರಬಂದಿರುತ್ತಾರೆ. ಇವರಿಗೆ ಮತ್ತೊಬ್ಬ ವ್ಯಕ್ತಿ ಮನೆ ಮಾಡಿಕೊಡುತ್ತಾನೆ. ಈ ದೃಶ್ಯವನ್ನ ನಿರ್ದೇಶಕರು ಚಿತ್ರೀಕರಿಸುತ್ತಿದ್ದಾರೆ.
Advertisement
ಕೋಲ್ಕತ್ತಾದ ಗಣೇಶ್ ಚಂದ್ರ ಅವೆನ್ಯೂ, ರಾಯಲ್ ಕಲ್ಕತ್ತಾ ಗಾಲ್ಫ್ ಕ್ಲಬ್ ಬಳಿ ಚಿತ್ರೀಕರಿಸಿಲಾಗಿದ್ದು, ಹೌರಾ ಅಣೆಕಟ್ಟು, ವಿಕ್ಟೋರಿಯಾ ಸ್ಮಾರಕ, ಪ್ರಿನ್ಸೆಪ್ ಘಾಟ್, ನ್ಯೂ ಮಾರ್ಕೆಟ್ ಏರಿಯಾ ಸೇರಿದಂತೆ ಕೋಲ್ಕತ್ತಾದ ಸಾಂಸ್ಕೃತಿಕ ಸ್ಥಳಗಳಲ್ಲಿ ಬಹುತೇಕ ಚಿತ್ರೀಕರಣ ನಡೆಯಲಿದೆ.
Advertisement
Advertisement
‘ದಢಕ್’ ಸಿನಿಮಾ ಮರಾಠಿಯ ‘ಸೈರಾಟ್’ ಚಿತ್ರದ ರೀಮೇಕ್ ಆಗಿದ್ದು, ಜಾಹ್ನವಿ ಕಪೂರ್ ಮತ್ತು ಇಶಾನ್ ಕತ್ತಾರ್ ಮುಖ್ಯ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರವನ್ನ ಶಶಾಂಕ್ ನಿರ್ದೇಶನ ಮಾಡುತ್ತಿದ್ದು, ಧರ್ಮ ಪ್ರೊಡಕ್ಷನ್ ನಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ. ಸದ್ಯಕ್ಕೆ ಬಹುತೇಕ ಸಿನಿಮಾದ ಚಿತ್ರೀಕರಣ ಮುಗಿದಿದ್ದು, ಜುಲೈ ತಿಂಗಳಲ್ಲಿ ಸಿನಿಮಾ ತೆರೆಕಾಣಲಿದೆ.