ಮಗಳ ಮೊದಲ ಸಿನಿಮಾ ನೋಡೋ ಮೊದಲೇ ಬಾರದ ಲೋಕಕ್ಕೆ ಪಯಣಿಸಿದ ಶ್ರೀದೇವಿ

Public TV
1 Min Read
Jhanvi Kapoor sridevi

ಮುಂಬೈ: ಭಾರತೀಯ ಚಿತ್ರರಂಗದ ಖ್ಯಾತ ಹಿರಿಯ ನಟಿ ಶ್ರೀದೇವಿ ಶನಿವಾರ ರಾತ್ರಿ 11.30 ರ ಸುಮಾರಿಗೆ ವಿಧಿವಶರಾಗಿದ್ದಾರೆ. ದುಬೈನ ಸಂಬಂಧಿಕರ ಮದುವೆಗೆಂದು ತನ್ನ ಮಗಳು ಖುಷಿ ಕಪೂರ್ ಮತ್ತು ಪತಿ ಬೋನಿ ಕಪೂರ್ ಜೊತೆ ತೆರಳಿದ್ದ ಅವರು, ಶನಿವಾರ ರಾತ್ರಿ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.

ಶ್ರೀದೇವಿ ಅವರ ಪಾರ್ಥೀವ ಶರೀರವನ್ನು ಭಾರತಕ್ಕೆ ವಿಶೇಷ ವಿಮಾನದಲ್ಲಿ ತರಲು ಸಿದ್ಧತೆ ನಡೆದಿದ್ದು ಮಧ್ಯಾಹ್ನ  ಮೃತದೇಹ  ಮುಂಬೈ ತಲುಪುವ ಸಾಧ್ಯತೆಯಿದೆ.

ಶ್ರೀದೇವಿಯವರ ಹಿರಿಯ ಮಗಳು ಜಾನ್ವಿ ಕಪೂರ್ ‘ಧಡಕ್’ ಸಿನಿಮಾದಲ್ಲಿ ನಟಿಸುವ ಮೂಲಕ ಬಾಲಿವುಡ್‍ಗೆ ಎಂಟ್ರಿ ಕೊಟ್ಟಿದ್ದರು. ಇದು ಮರಾಠಿಯ ‘ಸೈರಾಟ್’ ಸಿನಿಮಾದ ರಿಮೇಕ್ ಆಗಿದೆ. ಮಗಳು ನಟಿಸಿದ್ದ ಸಿನಿಮಾವನ್ನು ನೋಡುವ ಮೊದಲೇ ಶ್ರೀದೇವಿ ಅವರು ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ. ಬಹು ನಿರೀಕ್ಷಿತ ಧಡಕ್ ಸಿನಿಮಾ ಈ ವರ್ಷದ ಜುಲೈನಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

dhadak poster 2

ಶ್ರೀದೇವಿ ಅವರು 2017 ರಲ್ಲಿ ಬಾಲಿವುಡ್ `ಮಾಮ್’ ಎಂಬ ಚಿತ್ರದಲ್ಲಿ ನಟಿಸಿ ಭಾರೀ ಪ್ರಶಂಸೆಯನ್ನ ಗಳಿಸಿದ್ದರು. ಈಗ ಶಾರೂಖ್ ಖಾನ್ ನಟನೆಯ ಝೀರೋ ಸಿನಿಮಾದಲ್ಲಿ ಶ್ರೀದೇವಿಯವರು ನಟಿಸುತ್ತಿದ್ದು, ಇದು ಅವರ ಕೊನೆ ಚಿತ್ರವಾಗಿದೆ. ಈ ಚಿತ್ರವು ಡಿಸೆಂಬರ್ ನಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ.

ನಾಲ್ಕನೇ ವಯಸ್ಸಿಗೇ ಬಾಲನಟಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಶ್ರೀದೇವಿಯವರು ಆಗಸ್ಟ್ 13ರಂದು ತಮಿಳುನಾಡಿನ ಶಿವಕಾಶಿಯಲ್ಲಿ ಜನಿಸಿದ್ದರು. ಶ್ರೀದೇವಿಯವರ ಹುಟ್ಟು ಹೆಸರು ಶ್ರೀ ಅಮ್ಮಾಯಂಗಾರ್ ಅಯ್ಯಪ್ಪನ್. ಆರು ಫಿಲ್ಮ್ ಫೇರ್ ಅವಾರ್ಡ್‍ಗಳನ್ನ ಪಡೆದುಕೊಂಡಿರುವ ಶ್ರೀದೇವಿಯವರು, ಪದ್ಮಶ್ರೀ ಪ್ರಶಸ್ತಿಯನ್ನೂ ಸಹ ಪಡೆದಿದ್ದರು.

https://youtu.be/nALnWAlRZC8

 

dhadak poster

Share This Article
Leave a Comment

Leave a Reply

Your email address will not be published. Required fields are marked *