ಮುಂಬೈ: ಹಿರಿಯ ಬಹು ಭಾಷಾ ನಟಿ ಶ್ರೀದೇವಿ ಶನಿವಾರ ಹೃದಯಾಘಾತದಿಂದ ದುಬೈನಲ್ಲಿ ನಿಧನರಾಗಿದ್ದಾರೆ. 80-90 ದಶಕದಲ್ಲಿ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದ ಆ ಮೋಹಕ ತಾರೆ ನಮ್ಮನ್ನು ಅಗಲಿ ಬಾರದ ಲೋಕಕ್ಕೆ ಪಯಣ ಬೆಳೆಸಿದ್ದಾರೆ.
ಹೃದಯಾಘಾತದಿಂದ ಆಕಸ್ಮಿಕವಾಗಿ ವಿಧಿವಶವಾಗಿರುವ ಶ್ರೀದೇವಿ ಅವರ ಆರೋಗ್ಯದಲ್ಲಿ ಈ ಹಿಂದೆ ಯಾವುದೇ ರೀತಿಯ ಏರುಪೇರು ಕಂಡುಬಂದಿರಲಿಲ್ಲ. ಹೃದಯಾಘಾತ ಯಾರಿಗೆ ಯಾವಾಗ ಬರುತ್ತದೆ ಎಂದು ಹೇಳುವುದು ಅಸಾಧ್ಯ.
Advertisement
Advertisement
ಹೃದಯಾಘಾತ ಎಂದರೆ ಏನು?: ಕಾರ್ಡಿಯಾಕ್ ಅರೆಸ್ಟ್ ಅಥವಾ ಹೃದಯಾಘಾತ ಎನ್ನುವುದು ಒಬ್ಬ ಮನುಷ್ಯನ ಹೃದಯಕ್ಕೆ ರಕ್ತ ಪೂರೈಕೆಯನ್ನ ನಿಲ್ಲಿಸುತ್ತದೆ. ಇದರಿಂದ ಹೃದಯ ಬಡಿತ ನಿಂತುಹೋಗುತ್ತದೆ. ಈ ಸಮಯದಲ್ಲಿ ಎದೆ ನೋವು, ತಲೆ ಸುತ್ತು, ಉಸಿರಾಟಕ್ಕೆ ತೊಂದರೆಯಾಗುವುದು ಮತ್ತು ಮೂರ್ಛೆ ಹೋಗುವ ಪರಿಸ್ಥಿತಿ ಎದುರಾಗಬಹುದು.
Advertisement
ಹೃದಯಾಘಾತಕ್ಕೆ ಕಾರಣಗಳೇನು?: ಒಬ್ಬ ಆರೋಗ್ಯವಂತ ವ್ಯಕ್ತಿಗೆ ಒಂದು ಸೆಕೆಂಡ್‍ನಲ್ಲಿ 60-100 ಹೃದಯ ಬಡಿತವಿರುತ್ತದೆ. ಆದರೆ ಹೃದಯಾಘಾತವಾಗುವ ಸಮಯದಲ್ಲಿ ಅಸಹಜ ಬಡಿತ ಕಾಣಿಸಿಕೊಳ್ಳಲಿದ್ದು, ಈ ಪರಿಸ್ಥಿತಿಯನ್ನು ಅರೆಥ್ಮಿಯಾಸ್ ಎಂದು ಕರೆಯಲಾಗುವುದು. ದೈಹಿಕ ಒತ್ತಡ, ರಕ್ತದ ಕೊರತೆ, ಹೃದಯಕ್ಕೆ ಅವಶ್ಯಕವಾದ ಆಮ್ಲಜನಕದ ಕೊರತೆ, ಅಧಿಕವಾಗಿ ವ್ಯಾಯಾಮ ಮಾಡುವುದು ಮತ್ತು ಅನುವಂಶಿಯ ಕಾರಣಗಳಿಂದ ಕಾರ್ಡಿಯಾಕ್ ಅರೆಸ್ಟ್ ಅಥವಾ ಹೃದಯಾಘಾತ ಆಗಬಹುದು.
Advertisement
ಸ್ಥೂಲಕಾಯ, ಅಧಿಕ ರಕ್ತದ ಒತ್ತಡ, ಧೂಮಪಾನ, ಮಧುಮೇಹ, ಅತಿಯಾಗಿ ಮದ್ಯಪಾನ ಮಾಡುವುದರಿಂದ ಹೃದಯಾಘಾತ ಸಂಭವಿಸುವ ಸಾಧ್ಯತೆಗಳು ಹೆಚ್ಚಿವೆ.
ತಡೆಗಟ್ಟುವ ವಿಧಾನಗಳೇನು?: ನಿಯಮಿತವಾಗಿ ವೈದ್ಯರಲ್ಲಿ ಹೃದಯವನ್ನ ಪರೀಕ್ಷಿಸಿಕೊಳ್ಳುವುದು, ಆರೋಗ್ಯಕರ ಆಹಾರವನ್ನ ಸೇವಿಸುವುದು, ದೇಹದ ತೂಕದ ಬಗ್ಗೆ ಗಮನ ಹರಿಸುವುದು ಮತ್ತು ಧೂಮಪಾನ ಮಾಡದಿರುವುದರಿಂದ ಹೈದಯದ ಆರೋಗ್ಯ ಕಾಪಾಡಿಕೊಳ್ಳಬಹುದು.
ವ್ಯಕ್ತಿಗೆ ಹೃದಯಾಘಾತವಾದಾಗ ಏನು ಮಾಡಬೇಕು?: ಇಂತಹ ತುರ್ತು ಪರಿಸ್ಥಿತಿಯಲ್ಲಿ ಹೃದಯ ಮತ್ತು ಶ್ವಾಸಕೋಶ ಪ್ರಚೋದಕ(ಸಿಪಿಆರ್) ಮಾಡಬೇಕು ಅಥವಾ ಡಿಫಿಬ್ರಿಲೇಟರ್ ಉಪಯೋಗಿಸಬೇಕು. ಹೃದಯವನ್ನ ಜೋರಾಗಿ ಮೇಲಿಂದ ಒತ್ತಬೇಕು ಇದರಿಂದ ರಕ್ತ ಹೆಪ್ಪುಗಟ್ಟಿದ್ದರೆ ಸುಲಭವಾಗಿ ಹೃದಯಕ್ಕೆ ರಕ್ತ ಸಂಚಾರವಾಗುತ್ತದೆ. ಇದರ ಜೊತೆಗೆ ವ್ಯಕ್ತಿಗೆ ಉಸಿರಾಟದ ತೊಂದರೆಯಾದರೆ ವ್ಯಕ್ತಿಯ ಬಾಯಿಗೆ ಕೃತಕವಾಗಿ ಇನ್ನೊಬ್ಬ ವ್ಯಕ್ತಿ ಗಾಳಿಯನ್ನ ಊದಬೇಕು. ಇದರಿಂದ ಅವರ ದೇಹಕ್ಕೆ ಆಮ್ಲಜನಕದ ಪೂರೈಕೆಯಾಗುತ್ತದೆ. ಇದರ ನಂತರ ವ್ಯಕ್ತಿಯನ್ನ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಬೇಕು.