ದುಬೈ: ನಟಿ ಶ್ರೀದೇವಿ ಸಾವಿನ ರಹಸ್ಯ ಬಯಲಾಗಿದ್ದು ಹಠಾತ್ ನೀರಿನ ಟಬ್ಗೆ ಬಿದ್ದು ಮುಳುಗಿ ಮೃತಪಟ್ಟಿದ್ದಾರೆ ಎಂದು ದುಬೈ ವಿಧಿ ವಿಜ್ಞಾನ ಪ್ರಯೋಗಾಲಯ ದೇಹದ ಮರಣೋತ್ತರ ಪರೀಕ್ಷೆ ನಡೆಸಿ ವರದಿ ಕೊಟ್ಟಿದೆ.
ಮರಣೋತ್ತರ ಪರೀಕ್ಷೆಯ ವರದಿಯಲ್ಲಿ ಶ್ರೀದೇವಿಯವರು ಮದ್ಯಪಾನ ಮಾಡಿದ್ದರು ಎನ್ನುವ ಅಂಶವು ಇದೆ. ಆದರೆ ನೀರಿನ ಟಬ್ ಗೆ ಬಿದ್ದಿದ್ದು ಹೇಗೆ ಎನ್ನುವ ಬಗ್ಗೆ ಮಾಹಿತಿ ಇನ್ನು ಸ್ಪಷ್ಟವಾಗಿಲ್ಲ.
Advertisement
Advertisement
ದುಬೈ ಪೊಲೀಸರು ಈಗ ಈ ಪ್ರಕರಣವನ್ನು ಪಬ್ಲಿಕ್ ಪ್ರಾಸಿಕ್ಯೂಶನ್ಗೆ ವರ್ಗಾಯಿಸಿದೆ ಎಂದು ದುಬೈ ಮೀಡಿಯಾ ಆಫೀಸ್ ಟ್ವೀಟ್ ಮಾಡಿ ತಿಳಿಸಿದೆ. ಇದನ್ನೂ ಓದಿ: ಶ್ರೀದೇವಿಯವರ ಪ್ರಾಣಕ್ಕೆ ವಿಪರೀತ ಶಸ್ತ್ರಚಿಕಿತ್ಸೆಯೇ ಮುಳುವಾಯ್ತಾ? ಜನ ಹೇಳೋದು ಏನು?
Advertisement
ಶನಿವಾರ ರಾತ್ರಿ ಶ್ರೀದೇವಿಯವರು ಹೃದಯ ಸ್ತಂಭನಗೊಂಡು ಮೃತಪಟ್ಟಿದ್ದಾರೆ ಎನ್ನುವ ವರದಿ ಬಂದಿತ್ತು. ಆದರೆ ಈಗ ಮುಳುಗಿ ಸಾವನ್ನಪ್ಪಿದ್ದಾರೆ ಎನ್ನುವ ವರದಿ ಬಂದ ಹಿನ್ನೆಲೆಯಲ್ಲಿ ಶ್ರೀದೇವಿ ಅವರ ಸಾವಿನ ಸುತ್ತ ಅನುಮಾನ ಹುತ್ತ ಬೆಳೆಯಲು ಆರಂಭವಾಗಿದೆ. ಇದನ್ನೂ ಓದಿ: ಸಿನಿಮಾ ಕ್ಷೇತ್ರದಲ್ಲಿ ಗ್ಲಾಮರ್ ಗೆ ಪ್ರಾಮುಖ್ಯತೆ ಹೆಚ್ಚು ಯಾಕೆ: ರಕ್ಷಿತಾ ಪ್ರೇಮ್ ಪ್ರಶ್ನೆ
Advertisement
#DubaiPolice has transferred the case to #Dubai Public Prosecution, which will carry out regular legal procedures followed in such cases.
2/2
— Dubai Policeشرطة دبي (@DubaiPoliceHQ) February 26, 2018
Following the completion of post-mortem analysis, @DubaiPoliceHQ today stated that the death of Indian actress Sridevi occurred due to drowning in her hotel apartment’s bathtub following loss of consciousness.
— Dubai Media Office (@DXBMediaOffice) February 26, 2018