ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ (Puneeth Rajkumar) 50ನೇ ಜನ್ಮದಿನದ ಹಿನ್ನೆಲೆ ರಾಘಣ್ಣ (Raghavendra Rajkumar) ಸೊಸೆ ಶ್ರೀದೇವಿ ಭೈರಪ್ಪರವರು (Sridevi Byrappa) ಅಪ್ಪು ಕುರಿತು ಎಮೋಷನಲ್ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. ಅಪ್ಪು ಕೇವಲ ಹೆಸರಲ್ಲ, ಕನ್ನಡಿಗರಿಗೆ ಅದೊಂದು ಭಾವನೆ ಎನ್ನುತ್ತಾ ಪುನೀತ್ ಬಗ್ಗೆ ಶ್ರೀದೇವಿ ಬರೆದುಕೊಂಡಿದ್ದಾರೆ.
ಶ್ರೀದೇವಿ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದು, ಅಪ್ಪು ಕೇವಲ ಹೆಸರಲ್ಲ. ನನ್ನಂತಹ ಅನೇಕ ಕನ್ನಡಿಗರಿಗೆ ಅದು ಒಂದು ಭಾವನೆ. ವರ್ಷಗಳ ಕಾಲ ಅವರ ಮತ್ತು ಅವರ ಶಕ್ತಿಯಿಂದ ಸುತ್ತುವರೆದಿರುವುದು ನನಗೆ ಸೌಭಾಗ್ಯವಾಗಿತ್ತು. ಅಪ್ಪು ಅಗಲಿಕೆಯ ಹಿಂದಿನ ದಿನ ಮಾತನಾಡಿದ್ದು ನನಗೆ ಇನ್ನೂ ನೆನಪಿದೆ. ಅರ್ಥವಿಲ್ಲದ ಸಿನಿಮಾಗಳು, ಪದೇ ಪದೇ ಅದೇ ಡೈಲಾಗ್ ಹಾಗೂ ಸಮಾಜವನ್ನು ನೆಗೆಟಿವ್ ಆಗಿ ಶೇಪ್ ಮಾಡುವ ಕಥೆಗಳನ್ನು ನೋಡಿ ಬೇಸರವಾಗಿದೆ ಎನ್ನುತ್ತಿದ್ದರು ಎಂದು ಅಗಲಿಕೆಯ ಹಿಂದಿನ ದಿನ ಮಾತನಾಡಿದ ಮಾತನ್ನು ಅವರು ಸ್ಮರಿಸಿದ್ದಾರೆ. ಇದನ್ನೂ ಓದಿ:ಪುನೀತ್ ರಾಜ್‌ಕುಮಾರ್ 50ನೇ ಹುಟ್ಟುಹಬ್ಬ – ಅಪ್ಪು ಸಮಾಧಿ ಬಳಿ ಅಭಿಮಾನಿಗಳ ಸಂಭ್ರಮಾಚರಣೆ
ಚಿತ್ರದ ನಿರ್ಮಾಪಕರು ಹಣ ಗಳಿಸಲು ಹೇಗೆಲ್ಲ ಸಿನಿಮಾ ಮಾಡುತ್ತಿದ್ದಾರೆ ಎಂದು ಅವರು ಪ್ರಶ್ನಿಸಿದರು. ನಿರ್ದೇಶಕರು ಮತ್ತು ನಿರ್ಮಾಪಕರು ಕೇವಲ ಹಣ ಮಾಡಲು ಹಾಗೂ ಅಹಂಗೋಸ್ಕರ ಸಿನಿಮಾ ಮಾಡುತ್ತಿರುವುದನ್ನು ಪ್ರಶ್ನೆ ಮಾಡಿದ್ದರು. ನಮ್ಮ ಸಮಾಜದ ಮನಸ್ಥಿತಿಯನ್ನು ಪ್ರಶ್ನಿಸಿದ್ದರು. ಅವರು ಲೀಡರ್‌ಶಿಪ್‌ನ ತುಂಬಾ ಹತ್ತಿರದಿಂದ ನೋಡುವ ಭಾಗ್ಯ ನನಗೆ ಸಿಕ್ಕಿತ್ತು. ಅವರು ತಮ್ಮದೇ ಆದ ನಿರ್ಮಾಣ ಸಂಸ್ಥೆ ಸ್ಥಾಪಿಸಿದರು. ಜೊತೆಗೆ ಹೊಸಬರಿಗೆ ಅವಕಾಶಗಳನ್ನು ನೀಡಿದರು. ಅಪ್ಪು ಅವರು ಸಿನಿಮಾರಂಗದ ಇತಿಹಾಸದಲ್ಲಿ ಅದೆಷ್ಟೋ ದಾಖಲೆಗಳನ್ನು ಮುರಿದಿದ್ದಾರೆ. ಆದರೆ ಸ್ವತಃ ಅವರೇ ನಿರ್ಮಾಣ ಮಾಡಲು ನಿರ್ಧರಿಸಿದಾಗ ‘ಗಂಧದ ಗುಡಿ’ಯನ್ನು (Gandada Gudi) ಆರಿಸಿಕೊಂಡರು. ಇದು ಅವರ ಭೂಮಿ ಮತ್ತು ಅವರ ಜನರ ಕಥೆಯನ್ನು ಹೇಳುವ ಸಾಕ್ಷ್ಯ ಚಿತ್ರವಾಗಿತ್ತು ಎಂದು ಬರೆದುಕೊಂಡಿದ್ದಾರೆ.
View this post on Instagram
ಶಿಕ್ಷಣಕ್ಕೆ ಬೆಂಬಲವಾಗಿ ಈ ಜಾಹೀರಾತನ್ನು ಉಚಿತವಾಗಿ ಚಿತ್ರೀಕರಿಸಲು ಅವರು ಎಡ್‌ಟೆಕ್ ಕಾರ್ಪೊರೇಷನ್‌ನಿಂದ ಮಿಲಿಯನ್ ಡಾಲರ್ ಆಫರ್ ಅನ್ನು ತಿರಸ್ಕರಿಸಿದರು. ಏಕೆಂದರೆ ನಾವು ಏನು ಕೆಲಸ ಮಾಡುತ್ತಿದ್ದೇವೆ ಎಂಬುದರಲ್ಲಿ ಅವರಿಗೆ ನಂಬಿಕೆ ಇತ್ತು. ಅವರು ಸರಿಯಾಗಿರುವ ಪರ ಅವರು ನಿಂತರು. ಮತ್ತೆ ಅವರ ಸುತ್ತಲೂ ಮಹಿಳೆಯರು ಸುರಕ್ಷಿತವಾಗಿರುತ್ತಿದ್ದರು, ಮತ್ತು ಅವರು ನನ್ನನ್ನೂ ಒಳಗೊಂಡಂತೆ ಅನೇಕರಿಗೆ ಹೇಗೆ ಬದುಕಬೇಕೆಂದು ಕಲಿಸಿದರು ಎಂದು ಅಪ್ಪುರನ್ನು ಸ್ಮರಿಸಿದ್ದಾರೆ. ಪುನೀತ್ ಕೆಲ ತುಣುಕುಗಳನ್ನು ಶೇರ್ ಮಾಡಿ ವಿಶೇಷವಾಗಿ ಅಪ್ಪು ಬರ್ತ್‌ಡೇಗೆ ಶ್ರೀದೇವಿ ವಿಶ್ ಮಾಡಿದ್ದಾರೆ.
ಇನ್‌ಫಿನಿಟಿ ವರ್ಲ್ಡ್ ಸ್ಟುಡಿಯೋ ಹಲವು ಬಗೆಯ ಕಥೆಯನ್ನು ಪ್ರಸ್ತುತಪಡಿಸುತ್ತಿದೆ. ನಿಮ್ಮ 50ನೇ ಹುಟ್ಟುಹಬ್ಬದಂದು ನಿಮ್ಮನ್ನು ನಂಬಿದ ನನ್ನಂತ ಅದೆಷ್ಟೋ ಅಭಿಮಾನಿಗಳಿಗೆ ಸ್ಫೂರ್ತಿಯ ದಿನ ಆಗಿರಲಿದೆ. ಈ ಸ್ಟುಡಿಯೋ ಮೂಲಕ ನಮ್ಮ ಹೊಸ ಪ್ರಾಜೆಕ್ಟ್ ಶೀಘ್ರದಲ್ಲಿ ಅನೌನ್ಸ್ ಮಾಡಲಿದ್ದೇವೆ ಎಂದು ಶ್ರೀದೇವಿ ಬರೆದುಕೊಂಡಿದ್ದಾರೆ.
ಅಂದಹಾಗೆ, ಶ್ರೀದೇವಿ ಭೈರಪ್ಪ ಅವರು ವಿದೇಶದಲ್ಲಿ ವಿದ್ಯಾಬ್ಯಾಸದ ಜೊತೆ ಕೆಲಸ ಮಾಡುತ್ತಿದ್ದಾರೆ. ಸದ್ಯ ಫಾರಿನ್‌ನಲ್ಲಿ ಅವರು ತಂಗಿದ್ದಾರೆ.