ಮುಂಬೈ: ಇಂದು ಬಾಲಿವುಡ್ ಚಾಂದಿನಿ ಶ್ರೀದೇವಿಯವರ ಹುಟ್ಟುಹಬ್ಬ. ಬಾಲಿವುಡ್‍ನಲ್ಲಿ ತನ್ನದೇ ಹೆಜ್ಜೆ ಗುರುತು ಮೂಡಿಸಿದ ನಟಿ ಶ್ರೀದೇವಿ ಆಗಸ್ಟ್ 13, 1963ರಂದು ತಮಿಳುನಾಡಿನ ಶಿವಕಾಶಿಯಲ್ಲಿ ಅಯ್ಯಪ್ಪನ್ ಮತ್ತು ರಾಜೇಶ್ವರಿ ದಂಪತಿಯ ಪುತ್ರಿಯಾಗಿ ಜನಿಸಿದ್ದರು. ಬಾಲನಟಿಯಾಗಿ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದ ಶ್ರೀದೇವಿ 90ರ ದಶಕದ ಮೇರು ನಟಿಯಾಗಿ ಗುರುತಿಸಿಕೊಂಡ ಕಲಾವಿದೆ.
ಸ್ಯಾಂಡಲ್‍ವುಡ್, ಕಾಲಿವುಡ್, ಬಾಲಿವುಡ್, ಮಾಲಿವುಡ್ ಸಿನಿಮಾಗಳು ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಮದುವೆ ನಂತರ ಚಿತ್ರರಂಗದಿಂದ ದೂರ ಉಳಿದ ಶ್ರೀದೇವಿ ಮತ್ತೆ ‘ಇಂಗ್ಲಿಷ್ ವಿಂಗ್ಲಿಷ್’ ಫಿಲ್ಮ್ ಮೂಲಕ ಕಮ್ ಬ್ಯಾಕ್ ಮಾಡಿದ್ದರು. ಇದಾದ ಬಳಿಕ ಮಾಮ್ ಚಿತ್ರವೂ ತೆರೆಕಂಡಿತ್ತು. ಆದರೆ ಇಡೀ ಚಿತ್ರರಂಗವನ್ನ ಆಳಿದ್ದ ದಂತದ ಗೊಂಬೆ ಶ್ರೀದೇವಿ 4 ಸೂಪರ್ ಹಿಟ್ ಸಿನಿಮಾಗಳನ್ನು ರಿಜೆಕ್ಟ್ ಮಾಡಿದ್ದರಂತೆ. ಇದನ್ನೂ ಓದಿ:ಶ್ರೀದೇವಿ ಸಾವಿನಲ್ಲಿ ಅಡಗಿದೆ 240 ಕೋಟಿ ರೂ. ವಿಮೆ ರಹಸ್ಯ!
Advertisement
Advertisement
1. ಢರ್: 199ರರಲ್ಲಿ ತೆರೆಕಂಡಿದ್ದ ‘ಢರ್’ ಸಿನಿಮಾದಲ್ಲಿ ನಾಯಕ ನಟಿಯಾಗುವ ಅವಕಾಶ ಲಭಿಸಿತ್ತು. ಆದ್ರೆ ದಿನಾಂಕ ಹೊಂದಾಣಿಕೆ ಆಗದ ಹಿನ್ನೆಲೆಯಲ್ಲಿ ಶ್ರೀದೇವಿ ಢರ್ ಸಿನಿಮಾ ತಿರಸ್ಕರಿಸಿದರಂತೆ. ಕೊನೆಗೆ ಶ್ರೀದೇವಿ ಬದಲಾಗಿ ಚಿತ್ರತಂಡ ಜೂಹ್ಲಿ ಚಾವ್ಲಾರನ್ನು ಆಯ್ಕೆ ಮಾಡಿಕೊಂಡಿತ್ತು. ಶಾರೂಕ್ ಖಾನ್ ಸಿನಿ ಜೀವನವನ್ನೇ ಢರ್ ಚಿತ್ರ ಬದಲಿಸಿತ್ತು.
Advertisement
2. ಬೇಟಾ: ಮತ್ತೊಂದು ಸೂಪರ್ ಹಿಟ್ ಸಿನಿಮಾ ‘ಬೇಟಾ’. ಇಲ್ಲಿಯೂ ಸಹ ಶ್ರೀದೇವಿ ಚಿತ್ರತಂಡದ ಮೊದಲ ಆಯ್ಕೆಯಾಗಿತ್ತು. ಬೇಟಾದಲ್ಲಿ ಅನಿಲ್ ಕಪೂರ್ ನಾಯಕನಾಗಿ ನಟಿಸುತ್ತಿರುವ ಕಾರಣ ಶ್ರೀದೇವಿ ಹಿಂದೆ ಸರಿದಿದ್ದರಂತೆ. ಈ ಚಿತ್ರಕ್ಕಿಂತ ಮೊದಲು ಅನಿಲ್ ಕಪೂರ್ ನಟಿಸಿದ್ದರಿಂದ ಹಿಂದೆ ಚಿತ್ರವನ್ನು ಒಪ್ಪಿಕೊಂಡಿರಲಿಲ್ಲ ಎಂದು ಬಾಲಿವುಡ್ ಅಂಗಳ ಹೇಳುತ್ತದೆ. ಶ್ರೀದೇವಿ ಬದಲಾಗಿ ಮಾಧುರಿ ದೀಕ್ಷಿತ್ ಬೇಟಾದಲ್ಲಿ ನಟಿಯಾಗಿ ನಟಿಸಿದರು. ಇದನ್ನೂ ಓದಿ: ಕೊನೆಗೂ ಶ್ರೀದೇವಿ ನಟನೆಯ ಐದು ಸಿನಿಮಾಗಳು ರಿಲೀಸ್ ಆಗಲೇ ಇಲ್ಲ
Advertisement
3. ಮೊಹಬ್ಬತೇಂ: ಶಾರೂಖ್ ಖಾನ್, ಅಮಿತಾಬ್ ಬಚ್ಚನ್, ಐಶ್ವರ್ಯ ರೈ ನಟನೆ ರೊಮ್ಯಾಂಟಿಕ್ ಮೊಹಬ್ಬತೇಂ ಸಿನಿಮಾವನ್ನು ಸಹ ಶ್ರೀದೇವಿ ತಿರಸ್ಕರಿಸಿದ್ದರು. ಐಶ್ವರ್ಯ ರೈ ನಿರ್ವಹಿಸಿದ್ದ ಪಾತ್ರಕ್ಕೆ ಮೊದಲಿಗೆ ಚಿತ್ರತಂಡ ಶ್ರೀದೇವಿ ಅವರನ್ನ ಆಯ್ಕೆ ಮಾಡಿತ್ತು. ಸಿನಿಮಾದಲ್ಲಿ ಅಮಿತಾಬ್ ಬಚ್ಚನ್‍ರ ಪುತ್ರಿಯಾಗಿ ಕಾಣಿಸಿಕೊಳ್ಳಬೇಕಾಗಿದ್ದರಿಂದ ಚಿತ್ರ ಒಪ್ಪಿರಲಿಲ್ಲವಂತೆ. ಈ ಮೊದಲು ಅಮಿತಾಬ್ ಬಚ್ಚನ್‍ಗೆ ನಾಯಕಿಯಾಗಿ ನಟಿಸಿದ್ದ ‘ಕುದಾ ಗವಾ’ ಸಿನಿಮಾ ಸೂಪರ್ ಹಿಟ್ ಆಗಿತ್ತು.
4. ಭಗಬಾನ್: 2003ರಲ್ಲಿ ತೆರೆಕಂಡಿದ್ದ ಅಮಿತಾಬ್ ಬಚ್ಚನ್ ನಟನೆಯ ಭಗಬಾನ್ ಸಿನಿಮಾದಲ್ಲಿ ಶ್ರೀದೇವಿ ಅವರಿಗೆ ಮುಖ್ಯ ಪಾತ್ರ ನಿರ್ವಹಿಸುವ ಆಫರ್ ನೀಡಿತ್ತು. ವೈಯಕ್ತಿಕ ಕಾರಣಗಳಿಂದಾಗಿ ಶ್ರೀದೇವಿ ಸಿನಿಮಾ ಒಪ್ಪಿಕೊಂಡಿರಲಿಲ್ಲ. ಇದನ್ನೂ ಓದಿ: ಅನಿಲ್ ಕಪೂರ್ ಕೈ ಹಿಡಿದು ಹೆಜ್ಜೆ ಹಾಕಿದ್ದ ಶ್ರೀದೇವಿ- ಕೊನೆಯ ಡ್ಯಾನ್ಸ್ ನೋಡಿ
ಹುಟ್ಟು ಹಬ್ಬದಂದು ಶ್ರೀದೇವಿ ನಮ್ಮೊಂದಿಗಿಲ್ಲ ಅಂದ್ರು ಅವರು ಬಿಟ್ಟು ಹೋದ ಹೆಜ್ಜೆ ಗುರುತುಗಳು ಇವೆ. ಸಿನಿಮಾದಲ್ಲಿ ತಮ್ಮ ನೈಜ ನಟನೆಯ ಮೂಲಕವೇ ಹೆಸರು ಮಾಡಿದ್ದ ಶ್ರೀದೇವಿ, ಫೆಬ್ರವರಿ 24ರಂದು ದುಬೈನಲ್ಲಿ ಸಾವನ್ನಪ್ಪಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews