– ಶ್ರೀ ಶ್ರೀ ರವಿಶಂಕರ್ ನೇತೃತ್ವದಲ್ಲಿ ಪ್ರತಿಷ್ಠಾಪನೆ
– 10ನೇ ಶತಮಾನದಲ್ಲಿ ಘಜ್ನಿಯಿಂದ ಸೋಮನಾಥ ದೇವಸ್ಥಾನದ ಮೇಲೆ ದಾಳಿ
ಬೆಂಗಳೂರು: ಆರ್ಟ್ ಆಫ್ ಲಿವಿಂಗ್‌ನ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್ (Sri Sri Ravi Shankar ) ಅವರು ಸಾವಿರಾರು ವರ್ಷಗಳ ಹಿಂದೆ ಘಜ್ನಿಯ ಮಹಮ್ಮದ್ ನಾಶಪಡಿಸಿದ ಸೋಮನಾಥ ಜ್ಯೋತಿರ್ಲಿಂಗದ (Jyotirlinga) ಪ್ರತಿಷ್ಠಾಪನೆಯನ್ನು ನೆರವೇರಿಸಲಿದ್ದಾರೆ.
ಹೌದು. 11ನೇ ಶತಮಾನದ ಆರಂಭದಲ್ಲಿ ಘಜ್ನಿ ಮಹಮ್ಮದ್ (Mahmud of Ghazni) ಭಾರತದ ಮೇಲೆ ನಿರಂತರವಾಗಿ ಆಕ್ರಮಣ ಮಾಡುತ್ತಿದ್ದ. ವಿಶೇಷವಾಗಿ ದೇವಾಲಯಗಳು (Temple) ಮತ್ತು ಪೂಜಾ ಸ್ಥಳಗಳನ್ನು ಗುರಿಯಾಗಿಸಿ ದಾಳಿ ನಡೆಸಿ ಅವುಗಳನ್ನು ಧ್ವಂಸ ಮಾಡುತ್ತಿದ್ದ.
Advertisement
12 ಪವಿತ್ರ ಜ್ಯೋತಿರ್ಲಿಂಗಗಳಲ್ಲಿ ಒಂದಾದ ಸೋಮನಾಥ ದೇವಾಲಯದ (Somnath Temple) ಮೇಲೂ ಘಜ್ನಿ ಮಹಮ್ಮದ್ ದಾಳಿ ನಡೆಸಿದ್ದ. ಇತಿಹಾಸದಲ್ಲಿ ಉಲ್ಲೇಖವಾದಂತೆ ಘಜ್ನಿಯ 18ನೇ ದಾಳಿಯಲ್ಲಿ ದೇವಾಲಯನ್ನು ನುಗ್ಗಿ ಗುರುತ್ವಾಕರ್ಷಣೆಯನ್ನು ಧಿಕ್ಕರಿಸಿದಂತೆ ಕಾಣುವ 3 ಅಡಿ ಎತ್ತರದ ಶಿವಲಿಂಗವನ್ನು ನಾಶಪಡಿಸಿದ್ದ.
Advertisement
Advertisement
ಈ ಶಿವಲಿಂಗದ ವಿಶೇಷ ಏನೆಂದರೆ ಈ ಲಿಂಗಗಳು ನೆಲದಿಂದ 2 ಅಡಿ ಎತ್ತರದಲ್ಲಿ ನೇತಾಡುತ್ತಿದ್ದವು. ಶಿವಲಿಂಗ ಧ್ವಂಸವಾಗಿದ್ದರೂ ಕೆಲ ಅಗ್ನಿಹೋತ್ರಿ ಪುರೋಹಿತರು ಧೈರ್ಯ ಮಾಡಿ ಲಿಂಗದ ಮುರಿದ ತುಣುಕುಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾದರು ಮತ್ತು ಮುಂದಿನ ಪೀಳಿಗೆಗೆ ಅವುಗಳನ್ನು ಸಂರಕ್ಷಿಸಿದ್ದರು. ಇದನ್ನೂ ಓದಿ: ಉಚಿತ ಯೋಜನೆಗಳಿಂದ ಜನ ಕಷ್ಟಪಟ್ಟು ಕೆಲಸ ಮಾಡ್ತಿಲ್ಲ – ಸುಪ್ರೀಂ ಅಸಮಾಧಾನ
Advertisement
ಪುರೋಹಿತರ ಕುಟುಂಬ ದಕ್ಷಿಣಕ್ಕೆ ಬಂದು ಆ ತುಣುಕುಗಳಿಂದ ಶಿವಲಿಂಗವಾಗಿ ಕೆತ್ತಿಸಿ ಅದನ್ನು ರಹಸ್ಯವಾಗಿ ಪೂಜಿಸಲು ಆರಂಭಿಸಿತ್ತು. ನಂತರ ಶಿವಲಿಂಗ ಪ್ರಣಾವನಂದರು, ಶಿವಾನಂದರ ಬಳಿ ಇತ್ತು. ಬಳಿಕ ಇದು ಸೀತಾರಾಮನ್ ಕುಟುಂಬಕ್ಕೆ ಬಂದಿತ್ತು. 1924 ರಲ್ಲಿ ಆಗಿನ ಕಂಚಿಯ ಶಂಕರಾಚಾರ್ಯರು ಈ ಲಿಂಗವನ್ನು ಪೂಜೆ ಮಾಡುತ್ತಿದ್ದ ಕುಟುಂಬಕ್ಕೆ 100 ವರ್ಷಗಳ ಕಾಲ ಇದನ್ನು ರಹಸ್ಯವಾಗಿ ಪೂಜೆ ಮಾಡಿ. ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾದ ಬಳಿಕ ಈ ಲಿಂಗವನ್ನು ಪ್ರತಿಷ್ಠಾಪನೆ ಮಾಡಿ ಎಂದು ಸೂಚಿಸಿದ್ದರು.
ರಾಮ ಮಂದಿರದ ಪ್ರತಿಷ್ಠಾಪನೆಯ ನಂತರ ಸೀತಾರಾಮನ್ ಶಾಸ್ತ್ರಿಯವರು ಶಿವಲಿಂಗದ ಭಾಗಗಳನ್ನು ಶಂಕರಾಚಾರ್ಯ ಜಯೇಂದ್ರ ಸರಸ್ವತಿಯ ಉತ್ತರಾಧಿಕಾರಿಯಾದ ಕಂಚಿಯ ಜಗದ್ಗುರು ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಸ್ವಾಮಿಗಳ ಬಳಿಗೆ ತೆಗೆದುಕೊಂಡು ಬಂದಿದ್ದರು. ಶಿವಲಿಂಗವನ್ನು ನೋಡಿದ ಬಳಿಕ ಶಾಸ್ತ್ರಿಗಳಿಗೆ ಆ ಭಾಗಗಳನ್ನು ಶ್ರೀ ಶ್ರೀ ರವಿಶಂಕರ್ ಬಳಿ ತೆಗೆದುಕೊಂಡು ಹೋಗಿ ಅವರಿಂದಲೇ ಪ್ರತಿಷ್ಠಾಪನೆಯಾಗಲಿ ಎಂದು ಸಲಹೆ ನೀಡಿದರು.
हमारे जन्मस्थल पापनासम के पास से एक अग्निहोत्री वैदिक पंडित मिलने आए और हमें वास्तविक ज्योतिर्लिंग के कुछ अंश भेंट किए। ये पवित्र अंश यहाँ एक मंडलम तक पूजा के लिए रखे जाएंगे। pic.twitter.com/51XQD4KogZ
— Gurudev Sri Sri Ravi Shankar (@Gurudev) January 25, 2025
ಈ ವಿಚಾರದ ಬಗ್ಗೆ ಮಾತನಾಡಿದ ಸೀತಾರಾಮನ್ ಅವರು, ಗುರು ಶ್ರೀ ಶ್ರೀ ರವಿಶಂಕರ್ ಅವರು ಸೋಮನಾಥ ದೇವಾಲಯದಲ್ಲಿ ಲಿಂಗವನ್ನು ಪ್ರತಿಷ್ಠಾಪನೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ. ನನಗೆ ಸಂತೋಷವಾಗಿದೆ. ನನ್ನ ಜನ್ಮ ಯಶಸ್ವಿಯಾಗುತ್ತದೆ. ನಿಜವಾದ ಸೋಮನಾಥ ಶಿವಲಿಂಗವನ್ನು ಸೋಮನಾಥ ದೇವಾಲಯದಲ್ಲಿ ಸ್ಥಾಪಿಸಲಾಗುವುದು ಇದು ನಮ್ಮ ಸಂಕಲ್ಪ ಎಂದು ತಿಳಿಸಿದ್ದಾರೆ.
ಮಧ್ಯಮದ ಜೊತೆ ಮಾತನಾಡಿದ ರವಿಶಂಕರ್, ಕಳೆದ 21 ವರ್ಷಗಳಿಂದ ಶಾಸ್ತ್ರಿ ಅವರು ಈ ಲಿಂಗವನ್ನು ಸಂರಕ್ಷಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಪ್ರತಿಷ್ಠಾಪನೆ ವಿಚಾರದ ಬಗ್ಗೆ ದೇಶದಲ್ಲಿರುವ ಧರ್ಮ ಗುರುಗಳು ಜೊತೆ ಮಾತನಾಡಿದ್ದೇನೆ. ಪ್ರಧಾನಿ ನರೇಂದ್ರ ಮೋದಿ, ರಾಜ್ಯಸರ್ಕಾರದ ಜೊತೆ ಮಾತನಾಡಿ ಮುಂದಿನ ನಿರ್ಧಾರವನ್ನು ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಸೋಮನಾಥ ದೇವಸ್ಥಾನವು ಗುಜರಾತ್ (ಸೌರಾಷ್ಟ್ರ) ಪ್ರಾಂತ್ಯದ ಕಥಿಯಾವರ್ ಪ್ರದೇಶದ ಪ್ರಭಾಸ ಪ್ರದೇಶದಲ್ಲಿದೆ.