ಬೀದರ್: ಬಸವಣ್ಣನವರ ಬಗ್ಗೆ ಅವಹೇಳನಕಾರಿ ಹೇಳಿಕೆ ವಾಪಸ್ ಪಡೆಯದೇ ಇದ್ರೆ ಮುಂದಿನ ಸಲ ಬಸನಗೌಡ ಪಾಟೀಲ್ ಯತ್ನಾಳ್‌ಗೆ (Basanagouda Patil Yatnal) ಸೋಲು ಖಚಿತ, ಒಂದು ವೇಳೆ ಅವರು ಸೋಲದೆ ಇದ್ರೆ ನಾನು ನನ್ನ ಮಠ ತ್ಯಾಗ ಮಾಡುತ್ತೇನೆ ಎಂದು ಬಸವಕಲ್ಯಾಣದಲ್ಲಿ ಹುಲಸೂರು ಮಠದ ಪೀಠಾಧಿಪತಿ ಶ್ರೀ ಶಿವಾನಂದ ಸ್ವಾಮೀಜಿ (Sri Sivananda Swamiji )ಅವರು ಬಹಿರಂಗ ಸವಾಲ್ ಹಾಕಿದ್ದಾರೆ.
ಬಸವಕಲ್ಯಾಣದಲ್ಲಿ (Basavakalyana) ನಡೆದ ಶರಣ ಸಂಸ್ಕ್ರತಿ ಉತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಯತ್ನಾಳ್‌ಗೆ ಮಾನ ಮರ್ಯಾದೆ ಇದ್ರೆ ಲಿಂಗಾಯತರಲ್ಲಿ ಕ್ಷೆಮೆ ಕೇಳಬೇಕು. ಇಲ್ಲಾವಾದ್ರೆ ರಾಜ್ಯದ ಲಿಂಗಾಯತರು (Lingayats) ಇಲ್ಲಿಂದ ಯತ್ನಾಳ್‌ರನ್ನು ಓಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಫೆಂಗಲ್ ಚಂಡಮಾರುತ ಎಫೆಕ್ಟ್ – ಬೆಂಗಳೂರಿಗೆ ಇನ್ನೆರಡು ದಿನ ಮಳೆ ಕಾಟ ಫಿಕ್ಸ್!
ಬಸವಣ್ಣನವರ ಬಗ್ಗೆ ಹಗುರವಾಗಿ ಮಾತನಾಡೋರು ನಾಲಿಗೆ ಬಿಗಿ ಹಿಡಿದು ಮಾತನಾಡಬೇಕು. ಹೆಸರು ಮಾತ್ರ ಬಸವರಾಜ ಆದ್ರೆ ನೀನು ಬೆಂಕಿ ಹಚ್ಚುವ ಬಸವರಾಜ. ಬಸವಣ್ಣನವರು ಸೇರಿದಂತೆ ಎಲ್ಲರ ಬಗ್ಗೆ ಹಗುರವಾಗಿ ಮತಾನಾಡುತ್ತಿದ್ದು, ಯತ್ನಾಳ್ ತಾನೊಬ್ಬನೇ ತೀಸ್ಮರ್ಕಾ ಎಂದು ತಿಳಿದುಕೊಂಡಿದ್ದಾನೆ ಎಂದು ಲೇವಡಿ ಮಾಡಿದ್ದಾರೆ.
ನಾನು ಶ್ರೀಮಂತ, ನಾನು ಎಂಎಲ್‌ಎ ದೊಡ್ಡವ ಎಂದು ತಿಳಿದುಕೊಂಡಿದ್ದು, ಜನಗಳಿಗೆ ಗೌರವ ಕೊಡಲಿಲ್ಲಾ ಅಂದ್ರೆ ನೀನ್ಯಾವ ಸೀಮೆಯ ಶಾಸಕ? ಬಸವಣ್ಣನವರ ವಿರುದ್ಧ ಅವಹೇಳನ ಹೇಳಿಕೆ ವಾಪಸ್ ಪಡೆಯಬೇಕು, ಇಲ್ಲವಾದ್ರೆ ಮುಂದಿನ ಸಲ ನಿಮಗೆ ಸೋಲು ಗ್ಯಾರಂಟಿ ಎಂದು ಭವಿಷ್ಯ ನುಡಿದಿದ್ದಾರೆ. ಇದನ್ನೂ ಓದಿ: ಬಂಡೀಪುರದ ಅರಣ್ಯಕ್ಕೆ ಅಕ್ರಮ ಪ್ರವೇಶ; 6 ಜೀವಂತ ಆಮೆ, 72 ಕೆಜಿ ಶ್ರೀಗಂಧ ತುಂಡು ವಶ – ಆರೋಪಿ ಬಂಧನ