ತುಮಕೂರು: ನಡೆದಾಡುವ ದೇವರ ಚಿಕಿತ್ಸೆಯಲ್ಲೂ ಸಚಿವ ಡಿ.ಕೆ. ಶಿವಕುಮಾರ್ ಅವರು ಧರ್ಮವನ್ನು ಕೆದಕಿದ್ದು, ಮುಸ್ಲಿಂ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಇದೆ ಎಂಬ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದರು. ಇವರ ಹೇಳಿಕೆಗೆ ಸಿದ್ದಗಂಗಾ ಮಠದ ಕಿರಿಯ ಶ್ರೀಗಳು ಪ್ರತಿಕ್ರಿಯೆ ನೀಡಿದ್ದಾರೆ.
ಈ ಕುರಿತು ಮಾಧ್ಯಮದವ ಜೊತೆ ಮಾತನಾಡಿದ ಸಿದ್ದಗಂಗಾ ಮಠದ ಕಿರಿಯ ಶ್ರೀಗಳು, ಆಸ್ಪತ್ರೆಗಳಿಗೆ ಅಲ್ಪಸಂಖ್ಯಾತರು ಅನ್ನೋ ಭೇದಭಾವ ಯಾಕೆ ತರಬೇಕು. ಶಾಲೆ, ಆಸ್ಪತ್ರೆಗಳಿಗೆಲ್ಲಾ ಈ ರೀತಿ ಭೇದಭಾವ ತರಬಾರದು. ಅವುಗಳು ಸರ್ವರಿಗೂ ಸೇರಿರುವಂತದ್ದಾಗಿದೆ ಎಂದು ಹೇಳಿದರು.
Advertisement
ಆರೋಗ್ಯ ಎಲ್ಲರಿಗೂ ಕೆಡುತ್ತದೆ. ಎಲ್ಲಾ ಆಸ್ಪತ್ರೆಗಳಲ್ಲೂ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ವೈದ್ಯರು ಇರುತ್ತಾರೆ. ಇಂದು ವೈದ್ಯ ವೃತ್ತಿಯನ್ನ ಎಲ್ಲರೂ ಓದಿರುತ್ತಾರೆ. ಆದ್ದರಿಂದ ಆ ರೀತಿ ಭೇದಭಾವ ಇಲ್ಲ. ವೈದ್ಯರ ಹೆಸರು ರೇಲಾ ಆಗಿದ್ದರಿಂದ ಆ ರೀತಿಯ ಭಾವನೆಯಿಂದ ಹೇಳಿರಬಹುದು. ಅಲ್ಲಿ ವೈದ್ಯರ ಜೊತೆ ಆರೈಕೆ ಮಾಡುವ ತಂಡವೂ ಕೂಡ ಇರುತ್ತಾರೆ. ಯಾರೇ ಹೋದರು ಆರೈಕೆ ಮಾಡುತ್ತಾರೆ ಎಂದ್ರು.
Advertisement
Advertisement
ಮೊಹಮ್ಮದ್ ರೇಲಾ ಒಬ್ಬ ವೈದ್ಯರು, ವೈದ್ಯೋ ನಾರಾಯಣ ಹರಿ ಅಂತಾರೆ. ನಾವು ಅವರನ್ನ ವೈದ್ಯರಾಗಿಯೇ ನೋಡಿದ್ದೇವೆ. ಅದನ್ನ ಹೊರತು ಬೇರೆ ಏನಿಲ್ಲ ಎಂದು ಶ್ರೀಮಠದಲ್ಲಿ ಕಿರಿಯ ಶ್ರೀ ಸಿದ್ದಲಿಂಗಸ್ವಾಮೀಜಿ ಉತ್ತರ ಕೊಟ್ಟಿದ್ದಾರೆ.
Advertisement
ಡಿಕೆಶಿ ಹೇಳಿದ್ದೇನು?
ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಮುಸ್ಲಿಮ್ ಆಡಳಿತವಿದ್ದರೂ ಶ್ರೀಗಳಿಗೆ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಪಸಂಖ್ಯಾತ ಆಡಳಿತ ಮಂಡಳಿ ಇದ್ದರೂ ಶ್ರೀಗಳನ್ನ ಚೆನ್ನಾಗಿ ನೋಡ್ಕೊಂಡಿದ್ದಾರೆ. ಡಾಕ್ಟರ್ ಮೊಹಮ್ಮದ್ ರೆಲಾ ಮಾಲೀಕತ್ವದ ರೆಲಾ ಆಸ್ಪತ್ರೆಯಲ್ಲಿ ಶ್ರೀಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವಿವಾದತ್ಮಾಕ ಹೇಳಿಕೆ ನೀಡಿದ್ದರು.
ನನಗೆ ಬಹಳ ಸಂತೋಷವಾಯ್ತು. ನಿಜವಾಗಲೂ ಕರ್ನಾಟಕ ರಾಜ್ಯದಲ್ಲಿ ಅಂತಹ ಆಸ್ಪತ್ರೆಯನ್ನು ನಾನು ನೋಡಿಲ್ಲ. ಜಾತಿ-ಧರ್ಮದ ಬಗ್ಗೆ ಮಾತನಾಡುತ್ತಿರುವ ನಾವು ಒಂದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಮೊಹಮ್ಮದ್ ರೇಲಾ ಎಂಬಂತಹ ಮುಸಲ್ಮಾನ ಅಲ್ಪಸಂಖ್ಯಾತರು. ಅವರ ಹೆಸರಿನಲ್ಲಿ ರೇಲಾ ಅನ್ನುವ ಆಸ್ಪತ್ರೆಯೊಂದನ್ನು ಮಾಡಿದ್ದಾರೆ. ಅವರು ಒಬ್ಬ ಜಗತ್ತಿನ ಫೇಮಸ್ ಸರ್ಜನ್ ಆಗಿದ್ದಾರೆ. ನಮ್ಮ ಶ್ರೀಗಳಿಗೆ ಅವರು ಶಸ್ತ್ರಚಿಕಿತ್ಸೆಯನ್ನು ಮಾಡಿದ್ದಾರೆ ಅಂತ ಹೇಳಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live ವೀಕ್ಷಿಸಲು ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv