ಹಾವೇರಿ: ನಗರದ ಪುರಸಿದ್ದೇಶ್ವರ ದೇವಸ್ಥಾನದ ಬಳಿ ತ್ರಿವಿಧ ದಾಸೋಹಿ ಡಾ. ಶ್ರೀ ಶಿವಕುಮಾರ ಸ್ವಾಮೀಜಿಗಳ ಪ್ರಥಮ ಪುಣ್ಯ ಸ್ಮರಣೋತ್ಸವನ್ನ ಅರ್ಥಪೂರ್ಣವಾಗಿ ಆಚರಣೆ ಮಾಡಲಾಯಿತು.
ಹಾವೇರಿ ನಗರದ ಡಾ. ಶಿವಕುಮಾರ ಸ್ವಾಮೀಜಿ ಅಭಿಮಾನಿ ಬಳಗವು ಶ್ರೀಗಳ ಪುಣ್ಯ ಸ್ಮರಣೋತ್ಸವ ಆಯೋಜನೆ ಮಾಡಿದ್ದರು. ನಗರದ ಪುರಸಿದ್ದೇಶ್ವರ ದೇವಸ್ಥಾನದ ಬಳಿ ಇರುವ ವೃತ್ತದಲ್ಲಿ ಡಾ. ಶಿವಕುಮಾರ ಸ್ವಾಮೀಜಿಯ ಭಾವಚಿತ್ರಕ್ಕೆ ಭಕ್ತರು ಪೂಜೆ ಸಲ್ಲಿಸಿದರು. ಈ ಕಾರ್ಯಕ್ರಮದಲ್ಲಿ ಹುಕ್ಕೇರಿ ಮಠದ ಸದಾಶಿವ ಶ್ರೀಗಳು ಹಾಗೂ ಬಣ್ಣದ ಮಠದ ಶ್ರೀಗಳು ಭಾಗವಹಿಸಿದ್ದರು.
Advertisement
Advertisement
ಈ ವೇಳೆ ಹುಕ್ಕೇರಿ ಮಠದ ಸದಾಶಿವ ಶ್ರೀಗಳು ಆರ್ಶೀವಚನ ಹೇಳಿದರು. ಡಾ. ಶಿವಕುಮಾರ ಸ್ವಾಮೀಜಿ ಈ ನಾಡಿಗೆ ಹೆಚ್ಚು ಕೊಡುಗೆ ನೀಡಿದ್ದಾರೆ. ನಡೆದಾಡುವ ದೇವರು, ಸಾವಿರಾರು ಮಕ್ಕಳಿಗೆ ಜ್ಞಾನದಾಸೋಹ, ಅನ್ನದಾಸೋಹ, ಸಮಾಜ ಸೇವೆಯನ್ನ ಮಾಡಿದ್ದಾರೆ. ಅವರ ಹಾಕಿಕೊಟ್ಟು ದಾರಿಯಲ್ಲಿ ನಾವು, ನೀವು ನಡೆಯಬೇಕಿದೆ ಎಂದು ಹೇಳಿದರು.
Advertisement
ಈ ಕಾರ್ಯಕ್ರಮದಲ್ಲಿ ಅಂಧ ಮಕ್ಕಳ ಶಾಲೆಯ ಮಕ್ಕಳಿಗೆ, ಸಿಂದಗಿಯ ಶಾಂತವೀರೇಶ್ವರ ಮಠದ ಮಕ್ಕಳಿಗೆ ಹಾಗೂ ನಗರದ ಜನತೆಗೆ ದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಈ ಮೂಲಕ ಅರ್ಥಪೂರ್ಣವಾಗಿ ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮೀಜಿಗಳನ್ನು ಅವರ ಭಕ್ತರು ಸ್ಮರಿಸಿದರು.