ಬಳ್ಳಾರಿ: ಮಾಜಿ ಸಚಿವ, ಗಣಿ ಧಣಿ ಗಾಲಿ ಜನಾರ್ದನ ರೆಡ್ಡಿ ಸಕ್ರೀಯ ರಾಜಕಾರಣಕ್ಕೆ ಬರಬೇಕು ಅಂತಾ ಸಂಸದ ಶ್ರೀರಾಮುಲು ಹೇಳಿದ್ದಾರೆ.
ಬಳ್ಳಾರಿಯಲ್ಲಿ ಮಾತನಾಡಿದ ಸಂಸದ ಶ್ರೀರಾಮುಲು, ಜನಾರ್ದನ ರೆಡ್ಡಿ ರಾಜಕಾರಣಕ್ಕೆ ಬಂದರೆ ಬಳ್ಳಾರಿ, ರಾಯಚೂರು, ಕೊಪ್ಪಳ, ಗದಗ ಜಿಲ್ಲೆಯಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಲಿದೆ. ರೆಡ್ಡಿ ಅವರು ಸುಮ್ಮನೆ ಮನೆಯಲ್ಲಿ ಕುಳಿತರೂ ಬಳ್ಳಾರಿಯ 9 ಸ್ಥಾನಗಳಲ್ಲೂ ಬಿಜೆಪಿ ಗೆಲುವು ಸಾಧಿಸಲಿದೆ ಎಂಬ ಆತ್ಮವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
Advertisement
Advertisement
ಜನಾರ್ದನರೆಡ್ಡಿ ಸಕ್ರೀಯ ರಾಜಕಾಣರಕ್ಕೆ ಬರೋದರ ಬಗ್ಗೆ ಹೈಕಮಾಂಡ್ ಜೊತೆ ಚರ್ಚೆ ನಡೆದಿದೆ. ಶ್ರೀಘ್ರದಲ್ಲೆ ರೆಡ್ಡಿ ಕಮ್ ಬ್ಯಾಕ್ ಮಾಡೋ ಬಗ್ಗೆ ಅಂತಿಮ ಸೂಚನೆ ಸಿಗಲಿದೆ. ಅಲ್ಲದೇ ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಪಕ್ಷ ತಮಗೆ ಸ್ಪರ್ಧೆ ಮಾಡುವಂತೆ ಸೂಚಿಸಿದ್ರೆ, ತಾವೂ ಕಣಕ್ಕೆ ಇಳಿಯಲು ಸಿದ್ದವಿದ್ದೇನೆ. ಆದರೆ ನನ್ನ ಕುಟುಂಬದಲ್ಲಿ ನನ್ನಿಂದಲೇ ರಾಜಕಾರಣ ಅಂತ್ಯವಾಗಲಿದೆ ಎಂದು ಹೇಳೋ ಮೂಲಕ ಪತ್ನಿ ಭಾಗ್ಯಲಕ್ಷಿಯವರು ಸ್ಪರ್ಧೆ ಮಾಡೋದನ್ನು ಸಂಸದ ಶ್ರೀರಾಮುಲು ತಳ್ಳಿ ಹಾಕಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ನವ್ರು ಭಿಕ್ಷೆ ಕೇಳಿದ್ರೆ ಎಡಗೈಯಲ್ಲೇ ಭಿಕ್ಷೆ ನೀಡ್ತೀನಿ, ಇನ್ಮುಂದೆ ಸಾಯುವವರೆಗೆ ಪಂಚೆಯನ್ನೇ ಧರಿಸ್ತೀನಿ- ಜನಾರ್ದನ ರೆಡ್ಡಿ
Advertisement
ಕೂಡ್ಲಿಗಿ ಶಾಸಕ ನಾಗೇಂದ್ರ, ಹೊಸಪೇಟೆ ಶಾಸಕ ಆನಂದಸಿಂಗ್ ಅಸಮಾಧಾನಗೊಂಡಿದ್ದು ಇಬ್ಬರ ಮನವೊಲಿಸುವ ಪ್ರಯತ್ನ ಮುಂದುವರೆದಿದೆ. ನಾಗೇಂದ್ರರನ್ನು ಉಳಿಸಿಕೊಳ್ಳುವ ಪ್ರಯತ್ನ ನಡೆಯುತ್ತಿದ್ದು, ಆದ್ರೆ ಅವರು ಪಕ್ಷದಲ್ಲಿ ಉಳಿಯಲ್ಲ ಅಂದ್ರೆ ಎನೂ ಮಾಡೋಕೆ ಆಗಲ್ಲ ಎಂದರು. ಇದನ್ನೂ ಓದಿ: 2018ರ ಚುನಾವಣೆಗೆ ನಿಲ್ತೀರಾ: ಮಾಧ್ಯಮಗಳ ಪ್ರಶ್ನೆಗೆ ಜನಾರ್ದನ ರೆಡ್ಡಿ ಉತ್ತರಿಸಿದ್ದು ಹೀಗೆ
Advertisement
ಇದೇ ವೇಳೆ ಬಿಜೆಪಿ ಆರ್ ಎಸ್‍ಎಸ್ ಬ್ಯಾನ್ ಮಾಡೋ ಬಗ್ಗೆ ಪ್ರತಿಕ್ರಿಯೆ ನೀಡಿದ ಶ್ರೀರಾಮುಲು, ಭಯೋತ್ಪಾದನೆಗೆ ಕಾಂಗ್ರೆಸ್ ಸರ್ಕಾರ ಕುಮ್ಮಕ್ಕು ನೀಡುತ್ತಿದೆ. ಪಿಎಫ್‍ಐ, ಎಸ್‍ಡಿಪಿಐ ಬ್ಯಾನ್ ಮಾಡುವ ಬಗ್ಗೆ ಕೇಂದ್ರ ಗೃಹ ಸಚಿವರಿಗೆ ಮನವಿ ಮಾಡಿದ್ದೇನೆ. ಸಿಎಂ ಸಿದ್ದರಾಮಯ್ಯ ಜಾತಿ ಜಾತಿಗಳ ಮಧ್ಯೆ ವಿಷ ಬೀಜ ಬಿತ್ತುವ ಪ್ರಯತ್ನ ಮಾಡುತ್ತಿದ್ದಾರೆ. ಸಿಎಂ ಮತ್ತೆ ಅಧಿಕಾರಕ್ಕೆ ಬರುವ ಭ್ರಮೆಯಲ್ಲಿದ್ದಾರೆ. ಮೋದಿಯವರ ಕಾಂಗ್ರೆಸ್ ಮುಕ್ತ ಭಾರತದ ಕನಸು ನನಸಾಗಲಿದೆ ಎಂಬ ಆಶಯ ವ್ಯಕ್ತಪಡಿಸಿದರು. ಇದನ್ನೂ ಓದಿ: ರೆಡ್ಡಿ ಬಿಜೆಪಿ ಎಂಟ್ರಿಗೆ ಬ್ರೇಕ್ ಸುಷ್ಮಾ ಸ್ವರಾಜ್ ಅಭಿಪ್ರಾಯ ಏನು?