ತುಮಕೂರು: ಅಯೋಧ್ಯೆಯಲ್ಲಿ (Ayodhya) ಬಾಲರಾಮನ ಪ್ರಾಣ ಪ್ರತಿಷ್ಠಾಪನೆಗೆ ಕೌಂಟ್‌ಡೌನ್ ಶುರುವಾಗಿದ್ದು, ಎಲ್ಲೆಲ್ಲೂ ಸಡಗರ ಮನೆ ಮಾಡಿದೆ. ಈ ನಡುವೆ ಶ್ರೀರಾಮನ ಭಕ್ತಿಯಲ್ಲೇ ಮುಳುಗಿರುವ ತುಮಕೂರಿನ (Tumkur) ಕುಟುಂಬವೊಂದು ವಿಭಿನ್ನ ರೀತಿಯಲ್ಲಿ ತನ್ನ ಭ್ತಕ್ತಿಯನ್ನು ಪ್ರದರ್ಶಿಸಿದೆ.
Advertisement
ಹೌದು. ತುಮಕೂರಿನ ಕುಟುಂಬವೊಂದು ಇಟ್ಟಿಗೆಯಲ್ಲಿಯೇ (Brick) ಸಾಕ್ಷಾತ್ ಶ್ರೀರಾಮನನ್ನ ಕಾಣುತ್ತಿದೆ. ಹೇಗೆಂದರೆ ಕಳದ 30 ವರ್ಷದಿಂದ ಶ್ರೀರಾಮನ ಮೂಲಗದ್ದುಗೆಯ ಇಟ್ಟಿಗೆಗೆ ಮನೆಯಲ್ಲಿ ಪೂಜೆ ಸಲ್ಲಿಸುತ್ತಿರುವ ಕರ ಸೇವಕ ಕಾಂಡಿಮೆಂಟ್ ಶಿವಣ್ಣರ ಕುಟುಂಬ ಅಣು ಅಣುವಿನಲ್ಲಿಯೂ ರಾಮನನ್ನ ನೆನೆದು ಪೂಜೆ ಸಲ್ಲಿಸುತ್ತಿದ್ದಾರೆ. ಇದನ್ನೂ ಓದಿ: ಪ್ರಾಣಪ್ರತಿಷ್ಠೆಗೆ ಕೌಂಟ್‌ಡೌನ್ – ಬೆಂಗ್ಳೂರಿನಿಂದ ಅಯೋಧ್ಯೆಗೆ ಹೆಚ್ಚುವರಿ ರೈಲು ಸೇವೆ, ಇಲ್ಲಿದೆ ಡಿಟೇಲ್ಸ್
Advertisement
ಕಳೆದ 30 ವರ್ಷಗಳಿಂದ ಇಟ್ಟಿಗೆಯನ್ನೇ ಶ್ರೀರಾಮ ಎಂದು ಪೂಜಿಸುತ್ತಾ ಬಂದಿದೆ. ಕಾಂಡಿಮೆಂಟ್ ಶಿವಣ್ಣ ಎರಡು ಬಾರಿ ಕರಸೇವಕರಾಗಿ ಆಯೋಧ್ಯೆಗೆ ಹೋಗಿದ್ದರು. ಬಾಬ್ರಿ ಮಸೀದಿ ಕೆಡವಿದಾಗ ರಾಮನ ಮೂಲ ಗದ್ದುಗೆ ಪತ್ತೆಯಾಗಿತ್ತು. ಆ ಗದ್ದಿಗೆಯ 4 ಇಟ್ಟಿಗೆಯನ್ನು ಶಿವಣ್ಣ ತಮ್ಮ ಮನೆಗೆ ತಂದಿದ್ದಾರೆ. ಇಟ್ಟಿಗೆಯನ್ನು ದೈವ ಸ್ವರೂಪಿ ಎಂದು ನಂಬಿದ ಶಿವಣ್ಣನ ಕುಟುಂಬ ನಿರಂತರವಾಗಿ ಪೂಜಿಸುತ್ತಾ ಬಂದಿದ್ದಾರೆ. ಇದನ್ನೂ ಓದಿ: ಪಿಎಸ್‍ಐ ಮರುಪರೀಕ್ಷೆ ಪತ್ರಿಕೆ ಲೀಕ್ ಆರೋಪ- ಆಡಿಯೋ ಸೂತ್ರಧಾರ ಎಸ್‍ಐ ಸ್ಫೋಟಕ ಹೇಳಿಕೆ
Advertisement
Advertisement
ಅಯೋಧ್ಯೆ ಮೂಲಗದ್ದುಗೆಯಿಂದ ತಂದ 4 ಇಟ್ಟಿಗೆಯನ್ನು ಶ್ರೀರಾಮ ಎಂಬ ಉದ್ಘೋಷ ಇರುವ ಮಡಿ ವಸ್ತçದಲ್ಲಿ ಕಟ್ಟಿ ಇಟ್ಟಿದ್ದಾರೆ. ಪ್ರತಿ ದಿನದ ಪೂಜೆ ಮಾಡುವುದರೊಂದಿಗೆ, ಪ್ರತಿವರ್ಷ ರಾಮ ನಮವಿ ಹಬ್ಬದಂದು ವಿಶೇಷ ಪೂಜೆ ಮಾಡಿ ಪಾನಕ ಹಂಚುತ್ತಾರೆ. ರಾಮ ನವಮಿಯಂದು ಬಟ್ಟೆಯಿಂದ ಇಟ್ಟಿಗೆ ಹೊರ ತೆಗೆದು ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ. ಇದನ್ನೂ ಓದಿ: ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಗೆ ಸಜ್ಜಾದ ರಾಮಮಂದಿರ- ಫೋಟೋಗಳಲ್ಲಿ ನೋಡಿ..