ಹಿಂದೂಗಳ ಪವಿತ್ರ ಹಬ್ಬಗಳಲ್ಲಿ ಶ್ರೀ ರಾಮನವಮಿಯೂ ಒಂದು. ವಸಂತ ನವರಾತ್ರಿ ಹೊಸ ಸಂವತ್ಸರದ ಆದಿಯಿಂದಲೇ 9 ದಿನ ಆಂಜನೇಯನ ಗುಡಿಯಲ್ಲಿ, ಶ್ರೀರಾಮನ ದೇವಾಲಯಗಳಲ್ಲಿ ಹಾಗೂ ಶ್ರೀರಾಮ ಸೇವಾ ಸಮಿತಿಗಳು ವಸಂತ ನವರಾತ್ರಿ ಆಚರಿಸುತ್ತಾರೆ. ಹೀಗಾಗಿ ಹಬ್ಬದ ಪ್ರಯುಕ್ತ ಬೆಲ್ಲದ ಪಾನಕ ಮಾಡುವ ವಿಧಾನ ಇಲ್ಲಿದೆ.
ಬೇಕಾಗುವ ಸಾಮಾಗ್ರಿ:
* ಬೆಲ್ಲದ ಪುಡಿ – 3 ಚಮಚ
* ಕತ್ತರಿಸಿದ ಕರ್ಬೂಜ ಹಣ್ಣು- ಒಂದು ಬೌಲ್
* ಏಲಕ್ಕಿ ಪುಡಿ- ಸ್ವಲ್ಪ
* ಉಪ್ಪು- ರುಚಿಗೆ ತಕ್ಕಷ್ಟು
Advertisement
Advertisement
ಮಾಡುವ ವಿಧಾನ
* ಮೊದಲಿಗೆ ಎರಡು ಗ್ಲಾಸ್ ನೀರನ್ನು ಒಂದು ದೊಡ್ಡ ಬೌಲ್ ಗೆ ಹಾಕಿಕೊಳ್ಳಿ
* ನಂತರ ಆ ನೀರಿಗೆ ಪುಡಿ ಮಾಡಿಕೊಂಡಿರುವ ಬೆಲ್ಲವನ್ನು ಹಾಕಿಕೊಳ್ಳಿ. ಬೆಲ್ಲ ಸಂಪೂರ್ಣವಾಗಿ ಕರಗಲಿ.
* ನೀರಿನಲ್ಲಿ ಬೆಲ್ಲ ಕರಗಿದ ಬಳಿಕ ಚಿಕ್ಕದಾಗಿ ಕತ್ತರಿಸಿಕೊಂಡ ಕರ್ಬೂಜ ಹಣ್ಣಿನ ತುಂಡುಗಳನ್ನು ಸೇರಿಸಿಕೊಳ್ಳಿ. (ಬೇಕಾದಲ್ಲಿ ಕತ್ತರಿಸಿದ ಕರ್ಬೂಜ ತುಂಡುಗಳನ್ನು ಮಿಕ್ಸಿಗೆ ಹಾಕಿಕೊಂಡು ಜ್ಯೂಸ್ ರೀತಿ ಮಾಡಬಹುದು)
* ನಂತರ ಸ್ವಲ್ಪ ಏಲಕ್ಕಿ ಪುಡಿ ಮತ್ತು ಉಪ್ಪು ಮಿಕ್ಸ್ ಮಾಡಿಕೊಳ್ಳಬೇಕು.
* ಕತ್ತರಿಸಿದ ಕರ್ಬೂಜ ಹಣ್ಣನ್ನು ಸ್ವಲ್ಪ ಕಿವುಚಿಕೊಳ್ಳಬೇಕು.
* ರೆಡಿಯಾದ ಪಾನಕಕ್ಕೆ ಐಸ್ ಹಾಕಿಕೊಂಡು ಕುಡಿಯಬಹುದು.