– ರಾಮನ ಆಗಮನದಿಂದ್ಲೇ ವನ್ಯೇಶ್ವರ ರಾಮನಾಥಪುರವಾಯ್ತು
ಹಾಸನ: ಜ.22 ರಂದು ಅಯೋಧ್ಯೆಯಲ್ಲಿ (Ayodhya) ರಾಮಮಂದಿರದಲ್ಲಿ (Ram Mandir) ರಾಮಲಲ್ಲಾ ಪ್ರಾಣಪ್ರತಿಷ್ಠೆ ನೆರವೇರಲಿದೆ. ಈಗಾಗಲೇ ದೇಶದೆಲ್ಲೆಡೆ ಶ್ರೀರಾಮನ ಜಪ ಶುರುವಾಗಿದೆ. ಇದರ ನಡುವೆ ಸಾವಿರಾರು ವರ್ಷಗಳ ಹಿಂದೆ ರಾವಣನ ಸಂಹಾರದ ನಂತರ ಶ್ರೀರಾಮ ಹಾಸನ (Hassan) ಜಿಲ್ಲೆಗೂ ಆಗಮಿಸಿ ದೋಷ ನಿವಾರಣೆಗೆ ಪೂಜೆ ಸಲ್ಲಿಸಿದ್ದಾನೆ ಎಂಬ ಬಗ್ಗೆ ಇತಿಹಾಸದ ಉಲ್ಲೇಖಗಳಿವೆ.
Advertisement
ರಾಮೇಶ್ವರ ದೇವಾಲಯ (Rameshwara Temple) ಇರುವುದು ಹಾಸನ ಜಿಲ್ಲೆಯ ಅರಕಲಗೂಡು (Arakalgud) ತಾಲೂಕಿನ, ರಾಮನಾಥಪುರದಲ್ಲಿ. ಇಲ್ಲಿ ಪ್ರತಿವರ್ಷ ಬಹಳ ಅದ್ಧೂರಿ ಹಾಗೂ ವಿಜೃಂಭಣೆಯಿಂದ ಜಾತ್ರಾ ಮಹೋತ್ಸವ ಜರುಗುತ್ತದೆ. ಲಿಂಗದ ರೂಪದಲ್ಲಿ ದೇವರ ಮೂರ್ತಿ ಇದ್ದರೂ ಈ ದೇವಾಲಯದಲ್ಲಿ ಶ್ರೀರಾಮನಿಗೆ ಪ್ರಾಮುಖ್ಯತೆ ಇದೆ. ಇದನ್ನು ಚತುರ್‌ಯುಗ ಮೂರ್ತಿ ಎಂಬ ಹೆಸರಿನಿಂದಲೂ ಕರೆಯುತ್ತಾರೆ. ರಾವಣನ ಸಂಹಾರದ ನಂತರ ಶ್ರೀರಾಮ, ಸೀತೆ, ಲಕ್ಷ್ಮಣ ಹಾಗೂ ಹನುಮಂತ ಇಲ್ಲಿಗೆ ಬಂದು ಈಶ್ವರನ ಪೂಜೆ ಮಾಡಿರುವ ಪುಣ್ಯ ಸ್ಥಳವಿದು ಎಂಬ ಪ್ರತೀತಿಯೂ ಇದೆ. ಇದನ್ನೂ ಓದಿ: ಮೇಯರ್ ಚುನಾವಣೆ : ಮಾಲ್ಡೀವ್ಸ್ ಆಡಳಿತ ಪಕ್ಷಕ್ಕೆ ಹೀನಾಯ ಸೋಲು – ಭಾರತದ ಪರ ಪಕ್ಷಕ್ಕೆ ಭರ್ಜರಿ ಜಯ
Advertisement
Advertisement
ಈ ದೇವಾಲಯದ ಅರ್ಧ ಭಾಗವನ್ನು ಹೊಯ್ಸಳರು ನಿರ್ಮಿಸಿದ್ದರೆ, ಇನ್ನುಳಿದ ಅರ್ಧ ಭಾಗವನ್ನು ವಿಜಯನಗರ ಸಾಮ್ರಾಜ್ಯದ ಅರಸರ ಕಾಲದಲ್ಲಿ ನಿರ್ಮಾಣ ಮಾಡಲಾಗಿದೆ. ಕಾವೇರಿ ನದಿಯ ತಟದಲ್ಲಿರುವ ಈ ದೇವಾಲಯದ ಗರ್ಭಗುಡಿಯಲ್ಲಿ ಶ್ರೀರಾಮ ನೆಲೆಸಿದ್ದು, ಗರ್ಭಗುಡಿಯ ಬಲಭಾಗದ ಗುಡಿಯಲ್ಲಿ ರಾಮನ ಬಂಟ ಹನುಮಂತ ವಿರಾಜಮಾನನಾಗಿದ್ದಾನೆ. ದೇವಾಲಯದ ಮುಂಭಾಗ ಸೀತಾಮಾತೆ ನೆಲೆಸಿದ್ದು, ಅದನ್ನು ಸೀತೇಶ್ವರ ದೇವಾಲಯ ಎಂದು ನಾಮಕರಣ ಮಾಡಲಾಗಿದೆ. ಕಾವೇರಿ ನದಿಯ ಮತ್ತೊಂದು ಬದಿಗೆ ಲಕ್ಷ್ಮಣೇಶ್ವರ ದೇವಾಲಯ ನೆಲೆ ನಿಂತಿದೆ. ಇದನ್ನೂ ಓದಿ: ಅಕ್ರಮ ಕಾಮಗಾರಿ – ಲೋಕಾಯುಕ್ತಕ್ಕೆ ದೂರು ನೀಡಿದ ಗುತ್ತಿಗೆದಾರನಿಗೆ ಕೊಲೆ ಬೆದರಿಕೆ!
Advertisement
ರಾಮೇಶ್ವರ ದೇವಾಲಯದ ಒಳಭಾಗದ ಸುತ್ತಲೂ ನಂದಿ ಮುಂದೆ ನಿಂತಿರುವ ಶಿವಲಿಂಗ ವಿಗ್ರಹವಿರುವ 36 ಸಣ್ಣ ಸಣ್ಣ ಗುಡಿಗಳನ್ನು ನಿರ್ಮಿಸಲಾಗಿದೆ. ಈ ಜಾಗಕ್ಕೆ ಶ್ರೀರಾಮರು ಬಂದಿದ್ದಕ್ಕೆ ಒಂದು ಪೌರಾಣಿಕ ಕಥೆಯಿದೆ. ರಾಮನಾಥಪುರಕ್ಕೆ (Ramanathapura) ಮೊದಲು ಈ ಜಾಗಕ್ಕೆ ವನ್ಯೇಶ್ವರ ಎಂಬ ಹೆಸರಿತ್ತು. ರಾವಣ ಮಹಾಬ್ರಾಹ್ಮಣನಾದ್ದರಿಂದ ಆತನ ಸಂಹಾರದ ಬಳಿಕ ರಾಮನಿಗೆ ಬ್ರಹ್ಮ ಹತ್ಯಾದೋಷ ಕಾಡಿದ್ದು, ದಂಡಕಾರಣ್ಯದಲ್ಲಿ ಈಶ್ವರನನ್ನು ಪ್ರತಿಷ್ಠಾಪಿಸಿ ಅಲ್ಲಿ ಪ್ರಾರ್ಥನೆ ಮಾಡಿದರೆ ದೋಷ ನಿವಾರಣೆಯಾಗುತ್ತದೆ ಎಂದು ಅಗಸ್ತ್ಯ ಮುನಿಗಳು ತಿಳಿಸುತ್ತಾರೆ. ಆ ವೇಳೆ ವನ್ಯೇಶ್ವರ ಎಂಬ ಸ್ಥಳಕ್ಕೆ ಶ್ರೀರಾಮ, ಸೀತಾಮಾತೆ, ಲಕ್ಷ್ಮಣ ಹಾಗೂ ಹನುಮಂತ ಇಲ್ಲಿಗೆ ಆಗಮಿಸುತ್ತಾರೆ. ದಂಡಕಾರಣ್ಯದಲ್ಲಿ ಶಿವನನ್ನು ಪ್ರತಿಷ್ಠಾಪನೆ ಮಾಡುವುದಕ್ಕಾಗಿ ಹನುಮಂತನಿಗೆ ವಿಗ್ರಹ ತರಲು ಶ್ರೀರಾಮ ಹೇಳಿ ಕಳುಹಿಸುತ್ತಾನೆ. ಹನುಮಂತ ವಿಗ್ರಹ ತರುವುದರೊಳಗೆ ಅಲ್ಲಿಯೇ ಪ್ರತಿಷ್ಠಾಪನೆಯಾಗಿದ್ದ ಶಿವನ ದೇವಾಲಯ ರಾಮನಿಗೆ ಸಿಕ್ಕಿದ್ದು, ಅದೇ ಮೂರ್ತಿಗೆ ರಾಮ ಪೂಜೆಯನ್ನು ಸಲ್ಲಿಸುತ್ತಾನೆ. ಇದನ್ನೂ ಓದಿ: ಬ್ಲೂ ಫ್ಲ್ಯಾಗ್ ಖ್ಯಾತಿಯ ಶುಭ್ರ, ಸುಂದರ ಉಡುಪಿಯ ಪಡುಬಿದ್ರೆ ಬೀಚ್!
ಆ ಜಾಗವೇ ಇಂದಿನ ರಾಮೇಶ್ವರ ದೇವಾಲಯವಾಗಿದೆ. ಹನುಮಂತ ತಂದ ವಿಗ್ರಹ ಗರ್ಭಗುಡಿಯ ಮುಂದೆ ಪ್ರತಿಷ್ಠಾಪನೆ ಮಾಡಲಾಗಿದೆ. ಅದನ್ನು ಹನುಮಂತೇಶ್ವರ ದೇವಾಲಯ ಅಂತಲೂ, ದೇವಾಲಯದ ಸ್ವಲ್ಪ ದೂರದಲ್ಲಿ ಸೀತಾಮಾತೆ ಪೂಜೆ ಮಾಡಿದ ಜಾಗವನ್ನು ಸೀತೇಶ್ವರ ದೇವಾಲಯ ಹಾಗೂ ಪುಷ್ಕರಣಿಯ ಪಕ್ಕದಲ್ಲಿ ಅಂದರೆ ಕಾವೇರಿ ನದಿಯ ಪಕ್ಕದಲ್ಲಿ ಲಕ್ಷ್ಮಣ ಪೂಜೆ ಮಾಡಿದ್ದ ಜಾಗ ಲಕ್ಷ್ಮಣೇಶ್ವರ ದೇವಾಲಯ ಆಗಿದೆ. ಶ್ರೀರಾಮ ಬಂದು ಪೂಜೆ ಮಾಡಿ ತೆರಳಿರುವ ಪುಣ್ಯ ಜಾಗದಲ್ಲಿ ಇಂದಿಗೂ ಪ್ರತಿನಿತ್ಯ ಪೂಜಾ ಕೈಂಕರ್ಯಗಳು ನಡೆಯುತ್ತಿವೆ. ಇದನ್ನೂ ಓದಿ: ಮಾಲ್ಡೀವ್ಸ್‌ನಿಂದ ಭಾರತೀಯ ಸೇನೆಯನ್ನ ಹಿಂತೆಗೆದುಕೊಳ್ಳಿ: ಭಾರತಕ್ಕೆ ಮಾಲ್ಡೀವ್ಸ್ ಅಧ್ಯಕ್ಷ ಕರೆ
ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆ ವೇಳೆ, ಈ ದೇವಾಲಯದಲ್ಲಿಯೂ ವಿಶೇಷ ಪೂಜೆ, ಪ್ರಸಾದ ವಿತರಣೆ ಹಾಗೂ ವಿವಿಧ ಕಾರ್ಯಕ್ರಮಗಳನ್ನು ಆಯೋಜನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಇದರ ಜೊತೆಗೆ ರಾಮಜನ್ಮಭೂಮಿಯಂತೆ ಶ್ರೀರಾಮ ಸಂಚಾರ ಮಾಡಿರುವ ಎಲ್ಲಾ ಜಾಗಗಳನ್ನೂ ಅಭಿವೃದ್ಧಿಪಡಿಸಿ ಇತಿಹಾಸ ಉಳಿಸಬೇಕು ಎಂಬುದು ಈ ಭಾಗದ ಜನರ ಒತ್ತಾಯವಾಗಿದೆ. ಒಟ್ಟಾರೆ, ಶ್ರೀರಾಮ ಪರಿವಾರಕ್ಕೂ ಹಾಸನಕ್ಕೂ ಇರುವ ನಂಟಿನ ಕುರುಹುಗಳಿದ್ದು ಇಂದಿಗೂ ಆ ಐತಿಹಾಸಿಕ ದೇವಾಲಯಗಳಿಗೆ ಪ್ರತಿನಿತ್ಯ ನೂರಾರು ಭಕ್ತರು ಆಗಮಿಸಿ ಪೂಜೆ ಸಲ್ಲಿಸುತ್ತಿದ್ದಾರೆ. ಇದನ್ನೂ ಓದಿ: ಬಿಸ್ಕೆಟ್ ಫ್ಯಾಕ್ಟರಿಯಲ್ಲಿ ಬಾಯ್ಲರ್ ಸ್ಫೋಟ – ಓರ್ವ ಸಾವು, ಐವರು ಗಂಭೀರ