ಕಲಬುರಗಿ: ಮುಂಬರುವ 2023ರ ವಿಧಾನಸಭೆ ಚುನಾವಣೆಯಲ್ಲಿ (Assembly Election) ಬಿಜೆಪಿಯಿಂದ (BJP) ಟಿಕೆಟ್ ನೀಡಿದರೆ ಖಂಡಿತವಾಗಿಯೂ ಸ್ಪರ್ಧಿಸುವೆ ಎಂದು ಶ್ರೀರಾಮ ಸೇನೆಯ (Sri Rama Sene) ರಾಜ್ಯಾಧ್ಯಕ್ಷ ಆಂದೋಲ ಶ್ರೀ (Andola Shree) ತಿಳಿಸಿದರು.
ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಕೆಲ ದಿನಗಳಿಂದ ನಾನು ಚುನಾವಣೆ ನಿಲ್ಲುತ್ತೇನೆ ಎಂಬುದರ ಬಗ್ಗೆ ವಿಷಯ ಕೇಳಿ ಬರುತ್ತದೆ. ಇಲ್ಲಿವರೆಗೆ ನಾವು ಯಾರನ್ನೂ ಟಿಕೆಟ್‌ಗಾಗಿ ಸಂಪರ್ಕ ಮಾಡಿಲ್ಲ. ನನ್ನನ್ನೂ ಯಾವುದೇ ಮಖಂಡರು ಸಂಪರ್ಕ ಮಾಡಿಲ್ಲ ಎಂದು ಹೇಳಿದರು. ಇದನ್ನೂ ಓದಿ: ರಾಷ್ಟ್ರಗೀತೆ ಹಾಡುವಾಗ ಎದ್ದು ನಿಲ್ಲದ ಕಾಂಗ್ರೆಸ್ ಶಾಸಕ – ಬಿಜೆಪಿಯಿಂದ ಆಕ್ರೋಶ
Advertisement
Advertisement
ಒಂದು ವೇಳೆ ಬಿಜೆಪಿ ಪಕ್ಷದಿಂದ ಟಿಕೆಟ್ ಕೊಟ್ಟರೆ ಮಾತ್ರ ಸ್ಪರ್ಧಿಸುವೆ. ಸ್ವತಂತ್ರ್ಯ ಅಭ್ಯರ್ಥಿ ಅಥವಾ ಮತ್ಯಾವ ಪಕ್ಷದಿಂದ ಚುನಾವಣೆಗೆ ನಿಲ್ಲುವುದಿಲ್ಲ. ಹಿಂದುತ್ವ, ದೇಶದ ಅಭಿವೃದ್ಧಿ ಬಗ್ಗೆ ಚಿಂತನ ನಡೆಸುವವರನ್ನು ಬೆಂಬಲಿಸಲಾಗವುದು ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ಮುರುಘಾ ಮಠಕ್ಕೆ ನಿವೃತ್ತ ಐಎಎಸ್ ಅಧಿಕಾರಿ ಪಿ ಎಸ್ ವಸ್ತ್ರದ್ ಆಡಳಿತಾಧಿಕಾರಿ