ಶ್ರೀರಾಮಸೇನೆ ಜಿಲ್ಲಾಧ್ಯಕ್ಷ ರಂಜಿತ್ ಶೆಟ್ಟಿಯನ್ನು ವಶಕ್ಕೆ ಪಡೆದ ಪೊಲೀಸರು

Public TV
1 Min Read
CKM RANJITH SHETTY

ಚಿಕ್ಕಮಗಳೂರು: ಶ್ರೀರಾಮಸೇನೆಯ (Srirama Sene) ಜಿಲ್ಲಾಧ್ಯಕ್ಷ ರಂಜಿತ್ ಶೆಟ್ಟಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಪ್ರಮೋದ್ ಮುತಾಲಿಕ್ (Pramod Muthalik) ಹಾಗೂ ಗಂಗಾಧರ ಕುಲಕರ್ಣಿಯನ್ನು ಜಿಲ್ಲಾಡಳಿತ ನಿರ್ಬಂಧ ಹೇರಿದೆ. ಇದೀಗ ಮುಂಜಾಗ್ರತಾ ಕ್ರಮವಾಗಿ ಶ್ರೀ ರಾಮಸೇನೆಯ ಮುಖಂಡ ರಂಜಿತ್ ಶೆಟ್ಟಿ ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ದತ್ತಜಯಂತಿ ಸಂಭ್ರಮ- ಮಾಲಾಧಾರಿಗಳಿಂದ ದತ್ತಪಾದುಕೆ ದರ್ಶನ

ಶ್ರೀರಾಮಸೇನೆಯು ಚಿಕ್ಕಮಗಳೂರು ತಾಲೂಕಿನ ನಾಗೇನಹಳ್ಳಿ ಸರ್ವೆ ನಂ 57 ರ ಜನ್ನತ್ ನಗರದಲ್ಲಿರುವ ದರ್ಗಾದಲ್ಲಿ ದತ್ತಜಯಂತಿಯ ಹೊಸ ಆಚರಣೆಗೆ ಮುಂದಾಗಿತ್ತು. ದತ್ತಜಯಂತಿ ಆಚರಣೆಯ ಕರೆ ಹಿನ್ನೆಲೆಯಲ್ಲಿ ಜಿಲ್ಲಾಧ್ಯಕ್ಷ ರಂಜಿತ್ ಶೆಟ್ಟಿಯನ್ನು ವಶಕ್ಕೆ ಪಡೆಲಾಗಿದೆ. ಬಳಿಕ ಗೌಪ್ಯ ಸ್ಥಳಕ್ಕೆ ಪೊಲೀಸರು ಕರೆದೊಯ್ದಿದ್ದಾರೆ.

ಸದ್ಯ ದರ್ಗಾ ಸುತ್ತಮುತ್ತ 200 ಮೀಟರ್ 4 ದಿನ ನಿಷೇಧಾಜ್ಞೆಯನ್ನು ಜಿಲ್ಲಾಡಳಿತ ಹೇರಿದೆ.

Share This Article