ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಶುಕ್ರವಾರ ಮಂಡಿಸಿದ್ದ ರಾಜ್ಯ ಬಜೆಟ್‍ನಲ್ಲಿ (Karnataka Budget 2023) ಆನ್‍ಲೈನ್ ವಿವಾಹ ನೋಂದಣಿ (Online Marriage Registration) ಜಾರಿಗೆ ತರುವುದಾಗಿ ಘೋಷಿಸಿದ್ದಾರೆ. ಆದರೆ ಸರ್ಕಾರದ ಈ ನಿರ್ಧಾರಕ್ಕೆ ಇದೀಗ ಶ್ರೀರಾಮ ಸೇನೆ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಈ ಸಂಬಂಧ ಮಾತನಾಡಿರುವ ಶ್ರೀರಾಮಸೇನೆಯ (SriramaSene) ಅಧ್ಯಕ್ಷ ಪ್ರಮೋದ್ ಮುತಾಲಿಕ್ (Pramod Muthalik), ಲವ್ ಜಿಹಾದ್ (Love Jihad) ಪ್ರಕರಣ ಹೆಚ್ಚಾಗ್ತಿರುವ ನಡುವೆ ಈ ಆನ್‍ಲೈನ್ ವಿವಾಹ ನೋಂದಣಿ ಕುಮ್ಮಕ್ಕು ಕೊಡುತ್ತಿದೆ. ಹೀಗಾಗಿ ಇದನ್ನು ಶ್ರೀರಾಮ ಸೇನೆ ತೀವ್ರವಾಗಿ ಖಂಡಿಸುತ್ತದೆ. ಅಲ್ಲದೆ ಇದರ ವಿರುದ್ಧ ಪ್ರತಿಭಟನೆ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದರು.
ತಂದೆ-ತಾಯಿಗೆ ಗೊತ್ತಾಗದೇ ಮುಸ್ಲಿಂ, ಕ್ರಿಶ್ಚಿಯನ್ ಹಾಗೂ ಹಿಂದೂಗಳು ಆನ್‍ಲೈನ್ ನಲ್ಲಿ ನೋಂದಣಿ ಮಾಡಿಕೊಳ್ಳುವ ಮೂಲಕ ಸುಲಭವಾಗಿ ಮದುವೆ ಆಗುತ್ತಾರೆ. ಹೀಗಾಗಿ ಇದರಿಂದ ದೋಖಾ ಆಗುತ್ತದೆ. ನೇರವಾಗಿ ರಿಜಿಸ್ಟ್ರಾರ್ ಆಫೀಸ್ ಗೆ ತೆರಳಿ ನೋಂದಣಿ ಮಾಡುವ ಪದ್ಧತಿಯೇ ಯೋಗ್ಯವಾಗಿದೆ. ಈ ಹಿನ್ನೆಲೆಯಲ್ಲಿ ಕೂಡಲೇ ಆನ್‍ಲೈನ್ ನೋಂದಣಿ ರದ್ದು ಮಾಡಬೇಕು ಹೊರತು ಜಾರಿ ಮಾಡಬಾರದು ಎಂದು ಆಗ್ರಹಿಸಿದರು. ಇದನ್ನೂ ಓದಿ: ಅಚ್ಚರಿಯಾದ್ರೂ ಸತ್ಯ- ಅದಾನಿಗೆ ಸೇರಿದ 6 ಸಾವಿರ ಕೆ.ಜಿಯ ಸೇತುವೆ ಕಳ್ಳತನ!
ಆಫ್‍ಲೈನ್ ನೋಂದಣಿಯಲ್ಲಿ ಏನಾದರೂ ಸಮಸ್ಯೆ ಇದ್ದರೆ ಆಕ್ಷೇಪಣೆಗೆ ಅವಕಾಶ ಇತ್ತು. ಆದರೆ ಆನ್‍ಲೈನ್ ನೋಂದಣಿಯಲ್ಲಿ ಆಕ್ಷೇಪಣೆಗೆ ಅವಕಾಶ ಇಲ್ಲ. ಇದರಿಂದ ವಿವಾಹ ವಿಚಾರದಲ್ಲಿ ಮೋಸ ಆಗುವ ಸಾಧ್ಯತೆಗಳು ಹೆಚ್ಚಿವೆ. ಹೀಗಾಗಿ ಆನ್‍ಲೈನ್ ವಿವಾಹ ನೋಂದಣಿ ವಾಪಸ್ ಪಡೆಯದಿದ್ದರೆ ಹೋರಾಟ ಮಾಡುವುದಾಗಿ ಮುತಾಲಿಕ್ ತಿಳಿಸಿದರು.
Web Stories