ಕೊಲೊಂಬೊ: ಶ್ರೀಲಂಕಾ ತಂಡದಲ್ಲಿ ಸ್ಪಿನ್ ಮಾಂತ್ರಿಕ ಎಂದೇ ಖ್ಯಾತಿಯಾಗಿರುವ ಕ್ರಿಕೆಟಿಗ ವಾನಿಂದು ಹಸರಂಗ (Wanindu Hasaranga) ತನ್ನ ಬಹುಕಾಲದ ಗೆಳತಿಯೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.
ಆರ್‌ಸಿಬಿ (RCB) ತಂಡದ ಆಲ್‌ರೌಂಡರ್ ಸಹ ಆಗಿರುವ ವಾನಿಂದು ಹಸರಂಗ, ಗೆಳತಿ ವಿಂದ್ಯಾ (Vindya) ವಿವಾಹದ ಫೋಟೋಗಳು ಜಾಲತಾಣದಲ್ಲಿ ಹರಿದಾಡುತ್ತಿವೆ. ಇದನ್ನೂ ಓದಿ: WPL 2023: ಆರ್‌ಸಿಬಿಗೆ ಹ್ಯಾಟ್ರಿಕ್ ಸೋಲು – ಗುಜರಾತ್ ಜೈಂಟ್ಸ್‌ಗೆ 11 ರನ್ ರೋಚಕ ಜಯ
Advertisement
He stepped onto the next innings of his life???? Happy wedded life to our WOWnindu @Wanindu49 De Silva and his gorgeous Bride Vindya!
Image credit : Danushka Senadeera Photography ♥️#waninduhasaranga #weddingday #wedding #srilankacricket #cheyandthey pic.twitter.com/awqxgwbQsL
— Chethana Ketagoda (CK) (@Cheymusic) March 9, 2023
Advertisement
ಶ್ರೀಲಂಕಾ (SriLanka) ತಂಡದಲ್ಲಿ ತನ್ನ ಸ್ಪಿನ್ ಬೌಲಿಂಗ್ ಹಾಗೂ ಸ್ಫೋಟಕ ಆಟದಿಂದ ಕ್ರಿಕೆಟ್ ಲೋಕದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಹಸರಂಗ. ಆರ್‌ಸಿಬಿ ತಂಡದಲ್ಲಿ ಆಲ್‌ರೌಂಡರ್ ಆಗಿಯೂ ಮಿಂಚಿದ್ದಾರೆ. ಇದನ್ನೂ ಓದಿ: Ind Vs Aus: ಆಸ್ಟ್ರೇಲಿಯಾದ ಪ್ರಧಾನಿ ಜೊತೆ ಮೋದಿ ಮ್ಯಾಚ್ ವೀಕ್ಷಣೆ
Advertisement
Advertisement
ಮಾರ್ಚ್ 9 ರಂದು ಆತ್ಮೀಯರ ಸಮ್ಮುಖದಲ್ಲಿ ಹಸರಂಗ-ವಿಂದ್ಯಾ ಜೋಡಿಯ ವಿವಾಹ (Marriage) ಮಹೋತ್ಸವ ಜರುಗಿದೆ. ನವ ಜೋಡಿಯ ಫೋಟೋಗಳು ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳು ಶುಭಕೋರಿದ್ದಾರೆ. ಇತ್ತ ಆರ್‌ಸಿಬಿ ತಂಡ ಕೂಡ ತನ್ನ ಟ್ವಿಟ್ಟರ್ ಖಾತೆಯಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ನವದಂಪತಿಗೆ ಶುಭ ಹಾರೈಸಿದೆ. ಇದನ್ನೂ ಓದಿ: ಜೊನಾಸೆನ್ ಆಲ್‌ರೌಂಡರ್ ಆಟ, ತಾಲಿಯಾ ಏಕಾಂಗಿ ಹೋರಾಟ – ಡೆಲ್ಲಿ ಕ್ಯಾಪಿಟಲ್ಸ್‌ಗೆ 42 ರನ್‌ಗಳ ಭರ್ಜರಿ ಜಯ
2022ರ ಏಷ್ಯಾಕಪ್ (AisaCup 2022) ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಆಲ್‌ರೌಂಡರ್ ಪ್ರದರ್ಶನ ನೀಡಿದ್ದ ಹಸರಂಗ ತಂಡದ ಗೆಲುವಿಗೆ ಕಾರಣರಾಗಿದ್ದರು. ಇದರೊಂದಿಗೆ 2022ರ ಟಿ20 ವಿಶ್ವಕಪ್‌ನಲ್ಲಿ (T20 WorldCup) 15 ವಿಕೆಟ್ ಪಡೆಯುವ ಮೂಲಕ ಅತಿಹೆಚ್ಚು ವಿಕೆಟ್ ಪಡೆದ ಸಾಧನೆ ಮಾಡಿದ್ದರು.