ಕೊಲಂಬೊ: ಶ್ರೀಲಂಕಾದ ಅಧ್ಯಕ್ಷ ರಾಜಪಕ್ಸೆ ಶನಿವಾರ ದೇಶದಲ್ಲಿ ತೀವ್ರಗೊಂಡಿರುವ ಆರ್ಥಿಕ ಬಿಕ್ಕಟ್ಟು, ಪ್ರತಿಭಟನೆಗಳ ಹಿನ್ನೆಲೆಯಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.
ಶ್ರೀಲಂಕಾದಲ್ಲಿ ಇತ್ತೀಚೆಗೆ ಆರ್ಥಿಕ ಬಿಕ್ಕಟ್ಟು ತಲೆದೂರಿದ್ದು, ಅಗತ್ಯ ಆಮದಿಗೆ ಪಾವತಿ ಮಾಡಲು ವಿದೇಶೀ ಕರೆನ್ಸಿಯ ಕೊರತೆಯನ್ನು ಎದುರಿಸುತ್ತಿದೆ. ಇದರಿಂದ ದೇಶದಲ್ಲಿ ಡೀಸೆಲ್ ಮಾರಾಟ ಹಾಗೂ ದೀರ್ಘಾವಧಿಯ ವಿದ್ಯುತ್ ಕಡಿತಗಳನ್ನು ಮಾಡಲಾಗುತ್ತಿದ್ದು, ಜನತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದರಿಂದ ಆಕ್ರೋಶಗೊಂಡ ಜನರು ಶುಕ್ರವಾರ ವ್ಯಾಪಕ ಪ್ರತಿಭಟನೆ ನಡೆಸಿ, ಅಧ್ಯಕ್ಷ ರಾಜೀನಾಮೆ ನೀಡುವಂತೆ ಒತ್ತಾಯಿಸಿದ್ದಾರೆ. ಶುಕ್ರವಾರ ಶ್ರೀಲಂಕಾ ಅಧ್ಯಕ್ಷ ಮನೆ ಮುಂದೆ 2,000ಕ್ಕೂ ಹೆಚ್ಚು ಮಂದಿ ಜಮಾಯಿಸಿ ಪ್ರತಿಭಟನೆ ನಡೆಸಿದ್ದರು. ಇದನ್ನೂ ಓದಿ: ತಮ್ಮ ಭಾಷಣದಲ್ಲಿ 213 ಬಾರಿ ನಾನು, ನನ್ನ ಪದ ಬಳಸಿದ ಇಮ್ರಾನ್ ಖಾನ್- ಭಾರೀ ವೈರಲ್
ಸಹಾಯಕ್ಕೆ ಮುಂದಾದ ಭಾರತ:
ಕೊಲಂಬೋ ನವದೆಹಲಿಯಿಂದ ಕ್ರೆಡಿಟ್ ಲೈನ್ ಪಡೆದುಕೊಂಡಿದ್ದು, ಭಾರತ ತ್ವರಿತವಾಗಿ 40,000 ಟನ್ ಅಕ್ಕಿಯನ್ನು ಕಳುಹಿಸಲು ವ್ಯವಸ್ಥೆ ಆರಂಭಿಸಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ. ಭಾರತ ಅಕ್ಕಿಯನ್ನು ರಫ್ತು ಮಾಡುವ ದೇಶಗಳಲ್ಲಿ ಮೊದಲ ಸ್ಥಾನದಲ್ಲಿದೆ. ಕಳೆದ ತಿಂಗಳು ಭಾರತ ಶ್ರೀಲಂಕಾಗೆ ಇಂಧನ, ಆಹಾರ ಹಾಗೂ ಔಷಧ ಸೇರಿದಂತೆ ಅಗತ್ಯ ವಸ್ತುಗಳ ಕೊರತೆಯನ್ನು ನಿವಾರಿಸಲು 1 ಶತಕೋಟಿ ಸಾಲವನ್ನು ನೀಡಲು ಒಪ್ಪಿತ್ತು. ಅಕ್ಕಿ ರಫ್ತಿನಿಂದ ಶ್ರೀಲಂಕಾದಲ್ಲಿ ಅಕ್ಕಿಯ ಬೆಲೆ ಇಳಿಸಲು ಸಹಾಯವಾಗಲಿದೆ. ಇದನ್ನೂ ಓದಿ: ಇನ್ಮುಂದೆ ಪ್ರಾಣಿಗಳ ವಧೆಗೆ ಸ್ಟನ್ನಿಂಗ್ ಕಡ್ಡಾಯ