ಚೆನ್ನೈ: ತೀವ್ರವಾದ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಶ್ರೀಲಂಕಾದ ಪ್ರಜೆಗಳು ಕಷ್ಟದಿಂದ ತಪ್ಪಿಸಿಕೊಳ್ಳಲು ಭಾರತ ಪ್ರವೇಶಿಸುತ್ತಿದ್ದಾರೆ.
ಶುಕ್ರವಾರ ದ್ವೀಪ ದೇಶದಿಂದ 18 ಜನರು ಸಮುದ್ರ ಮಾರ್ಗವಾಗಿ ಭಾರತಕ್ಕೆ ಬಂದಿಳಿದಿದ್ದಾರೆ. ಶುಕ್ರವಾರ ಬೆಳಗ್ಗೆ ತಮಿಳುನಾಡಿನ ಧನುಷ್ಕೋಡಿಗೆ ಬಂದಿರುವ ಅಸಹಾಯಕ ಕುಟುಂಬಗಳಿಗೆ ಮಂಡಪಂ ನಿರಾಶ್ರಿತರ ಶಿಬಿರದಲ್ಲಿ ವಸತಿ ಕಲ್ಪಿಸಲಾಗಿದೆ. ಇದನ್ನೂ ಓದಿ: ನನ್ನ ಕೈಯಲ್ಲಿ ಭಾರತದ ಲಸಿಕೆಯಿದೆ: ಬ್ರಿಟನ್ ಪ್ರಧಾನಿ ಬೋರಿಸ್
Advertisement
Advertisement
ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ತಲೆದೋರಿದಾಗಿನಿಂದ ಇಲ್ಲಿ ವರೆಗೆ ಭಾರತಕ್ಕೆ 50ಕ್ಕೂ ಹೆಚ್ಚು ಜನರು ಪಲಾಯನ ಮಾಡಿದ್ದಾರೆ. ಅಸಹಾಯಕ ಸ್ಥಿತಿಯಲ್ಲಿರುವ ಶ್ರೀಲಂಕನ್ನರು ಸರ್ಕಾರ ನಾಗರಿಕರ ಬಗ್ಗೆ ನಿರ್ಲಕ್ಷ್ಯ ತೋರುತ್ತಿದೆ. ನಮ್ಮಿಂದ ಅಲ್ಲಿ ಹಾಲಿನ ಪುಡಿಯನ್ನೂ ಖರೀದಿಸಲು ಸಾಧ್ಯವಾಗುತ್ತಿಲ್ಲ ಎಂದು ತಮ್ಮ ಕಷ್ಟವನ್ನು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ಹೊಸ ಆತಂಕ ಹುಟ್ಟಿಸಿದ ಓಮಿಕ್ರಾನ್ BA.2.12 ತಳಿ
Advertisement
Advertisement
1948ರಲ್ಲಿ ಬ್ರಿಟನ್‌ನಿಂದ ಸ್ವಾತಂತ್ರ‍್ಯ ಪಡೆದ ಬಳಿಕ ಇದೇ ಮೊದಲ ಬಾರಿಗೆ ಶ್ರೀಲಂಕಾ ತೀವ್ರವಾದ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ವಿದೇಶಿ ಕರೆನ್ಸಿಯ ಕೊರತೆಯಿಂದಾಗಿ ಬಿಕ್ಕಟ್ಟು ಉಂಟಾಗಿದ್ದು, ಇತರ ದೇಶಗಳಿಂದ ಆಹಾರ ಹಾಗೂ ಇಂಧನದ ಆಮದುಗಳಿಗೆ ಪಾವತಿಸಲು ಸಾಧ್ಯವಾಗುತ್ತಿಲ್ಲ.
ಸಾಲದ ಸುಳಿಯಲ್ಲಿ ಸಿಲುಕಿರುವ ಶ್ರೀಲಂಕಾ ಸರ್ಕಾರದ ವಿರುದ್ಧ ಪ್ರಜೆಗಳೇ ಭಾರೀ ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.