ಕೊಲಂಬೋ: ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ತಲೆದೂರಿದ ಬಳಿಕ ದೇಶದಲ್ಲಿ ನಡೆಯುತ್ತಿರುವ ಸರ್ಕಾರಿ ವಿರೋಧಿ ಪ್ರತಿಭಟನೆಗಳ ಮಧ್ಯೆಯೂ ಶ್ರೀಲಂಕಾ ಅಧ್ಯಕ್ಷ ಗೋತಬಯ ರಾಜಪಕ್ಸೆ ಹೊಸ ಸಂಪುಟವನ್ನು ನೇಮಿಸಿದ್ದಾರೆ.
17 ಸಚಿವರ ಹೊಸ ಸಂಪುಟದಲ್ಲಿ ಕೆಲವು ಹೊಸ ಹಾಗೂ ಯುವ ವ್ಯಕ್ತಿಗಳಿದ್ದು, ಇವರು ಸೋಮವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಶಾಂತಿಯುತ ಸಹಕಾರ ಸಂಬಂಧಗಳನ್ನು ಬೆಳೆಸೋಣ: ಮೋದಿಗೆ ಷರೀಫ್ ಪತ್ರ
ಶ್ರೀಲಂಕಾದಲ್ಲಿ ಇತ್ತೀಚೆಗೆ ಆರ್ಥಿಕ ಬಿಕ್ಕಟ್ಟು ಉಂಟಾಗಿದ್ದು, ಅಲ್ಲಿನ ಜನರು ಕಷ್ಟದ ದಿನಗಳನ್ನು ದೂಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಜನರು ತಿರುಗಿ ಬಿದ್ದಿದ್ದು, ಬೃಹತ್ ಪ್ರತಿಭಟನೆಯಿಂದಾಗಿ ಶ್ರೀಲಂಕಾದ ಎಲ್ಲಾ ಕ್ಯಾಬಿನೆಟ್ ಸದಸ್ಯರು ರಾಜೀನಾಮೆ ನೀಡಿದ್ದರು. ಇದನ್ನೂ ಓದಿ: ಭೀಕರ ಪ್ರವಾಹಕ್ಕೆ ದಕ್ಷಿಣ ಆಫ್ರಿಕಾ ತತ್ತರ – 443ಕ್ಕೆ ಏರಿದ ಸಾವಿನ ಸಂಖ್ಯೆ
ಪ್ರವಾಸೋದ್ಯಮವೇ ಉಸಿರಾಗಿರುವ ಶ್ರೀಲಂಕಾದಲ್ಲಿ ಕೋವಿಡ್ ಕಾರಣದಿಂದಾಗಿ ಭಾರೀ ಮಟ್ಟದ ಹೊಡೆತ ಉಂಟಾಯಿತು. ವಿಶ್ವದಾದ್ಯಂತ ಕೋವಿಡ್ ಹರಡಿದಂತೆ ಪ್ರವಾಸೋದ್ಯಮದ ಬೇಡಿಕೆ ಕಡಿಮೆಯಾಗಿ ಆರ್ಥಿಕವಾಗಿ ಶ್ರೀಲಂಕಾ ಕುಗ್ಗಿ ಹೋಯಿತು.